ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ ಸುಮಾರು ವಾರಗಳು ಬಿಗ್ ಬಾಸ’ನಲ್ಲಿ ಇದ್ದು ಕಾಮಾನ್ ಮ್ಯಾನ್’ಗೂ ಕೂಡ ಜನ ಪ್ರೀತಿ ತೋರಿಸ್ತಾರೆ ಅನ್ನೋದರ ಬಗ್ಗೆ ಸಾಧಿಸಿ ತೋರಿಸಿದ್ದಾರೆ.

ಈ ಸಲದ ಬಿಗ್ ಬಾಸ್ ಶೋ ಕಾಮನ್ ಮ್ಯಾನ್ ಮತ್ತು ಸೆಲೆಬ್ರೆಟಿಗಳ ನಡುವಿನ ಸಮರ ಎಂದು ಬಿಂಬಿಸಲಾಗಿತ್ತು.ಬಿಗ್ ಬಾಸ್ ನಲ್ಲಿ ನಡೆದ ಕೆಲವೊಂದು ಸನ್ನಿವೇಶಗಳು ಜನರಲ್ಲಿ ಉಂಟು ಮಾಡಿದ್ದು ಸಹಜ.

ನೆನ್ನೆ ಬಿಡದಿ ಹತ್ತಿರವಿರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ, ತನ್ನ ವಿಶಿಷ್ಟ ಗಾಯನದಿಂದಲೇ, ಕರ್ನಾಟಕದ ಜನರಲ್ಲಿ ಮನೆ ಮಾತಾಗಿರುವ ಚಂದನ್ ಶೆಟ್ಟಿಯನ್ನು ಸುದೀಪ್ ಅವರು ವಿಜೇತ ಎಂದು ಘೋಷಣೆ ಮಾಡಿದರು. ತುಂಬಾ ಕಷ್ಟದಲ್ಲಿ ಜೀವನಸಾಗಿಸುತ್ತಿದ್ದ, ಸೇಲ್ಸ್ ಮ್ಯಾನ್ ಆಗಿದ್ದ, ಕಾಮಾನ್ ಮ್ಯಾನ್ ದಿವಾಕರ್ ರನ್ನರ್ ಅಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು.ಹಾಗೂ ನಟ ಕಾರ್ತಿಕ್ ಜಯರಾಂ ಮೂರನೇ ಸ್ಥಾನ ಗಳಿಸಿಕೊಂಡರು.

ಜಗನ್ ಮಾತನಾಡುತ್ತಾ ಹೊರಗಡೆ ಸೆಲೆಬ್ರೆಟಿಗಳ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ.ನಾವು ಅಂದ್ರೆ ಸೆಲೆಬ್ರೆಟಿಗಳು ಕಾಮಾನ್ ಮ್ಯಾನ್’ಗಳನ್ನು ತುಳಿತಾ ಇದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬಣ್ಣಿಸಲಾಗುತ್ತಿದೆ.ನಿಜ ಹೇಳೆಬೇಕಂದ್ರೆ ಆತರ ಏನೂ ನಡೆದಿಲ್ಲ.ನಾವೆಲ್ಲಾ ಒಂದೇ, ಮನೆಯಲ್ಲಿ ಒಂದೇ ತರ ಇದ್ದೆವು ಎಂದು ಹೇಳಿದ್ರು ಇವರ ಮಾತಿಗೆ ಮಾತು ಜೋಡಿಸಿದ ಸಿಹಿ ಕಹಿ ಚಂದ್ರುರವರು ಸಹ ಹೊರಗಡೆ ಸೆಲೆಬ್ರೆಟಿಗಳನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ರು.
ಈ ಸೆಲೆಬ್ರೆಟಿಗಳು ಏನೇ ಹೇಳಿದ್ರು, ಕಾಮಾನ್ ಮ್ಯಾನ್ ಗಳನ್ನು ಅವರು ನೋಡೋದು ಹಾಗೆಯೇ ಬಿಡಿ.ಏಕೆಂದರೆ ಒಬ್ಬ ಕಾಮಾನ್ ಮ್ಯಾನ್ ಸೆಲೆಬ್ರೆಟಿಯನ್ನು ಅವರ ಹತ್ತಿರ ಹೋಗಿ ಮಾತನಾಡಿಸೋದು ಅಷ್ಟೊಂದು ಸುಲಭ ಇಲ್ಲ.ಇದಕ್ಕೆ ನೀವೇ ನೋಡಿದಂತೆ ತುಂಬಾ ನಿದರ್ಶನಗಳಿವೆ.

ತನ್ನ ವಿಶಿಷ್ಟ ಗಾಯನದಿಂದಲೇ ಕರ್ನಾಟಕದ ಜನರ ಮನೆಮಾತಾಗಿರುವ ರ್ಯಾಪರ್ ಚಂದನ್ ಶೆಟ್ಟಿ, ಈಗಾಗಲೇ ಅವರು ಕರುನಾಡಿನ ಕೋಟ್ಯಾಂತರ ಜನರ ಮನವನ್ನು ಗೆದ್ದಿದ್ದಾರೆ. ಇವರಿಗಿರುವ ಟ್ಯಾಲೆಂಟ್’ಗೆ ಬಿಗ್ ಬಾಸ್ ತರದ ನೂರಾರು ವೇದಿಕೆಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಸೆಲೆಬ್ರೆಟಿಗಳು ಹೇಳಿದ ಹಾಗೆ ಇವರ ಒಂದು ಹಾಡನ್ನು youtubeನಲ್ಲಿ ಬಿಟ್ರೆ ಕೆಲವೇ ನಿಮಿಷಗಳಲ್ಲಿ ಕೋಟ್ಯಾಂತರ ಜನ ನೋಡುತ್ತಾರೆ.ಇವರಿಗಿರುವ ಟ್ಯಾಲೆಂಟ್’ಗೆ ಹಣ ಸಂಪಾದನೆ ಮಾಡುವುದು ಇವರಿಗೆ ಕಷ್ಟವೇನಲ್ಲ. ಇವರು ಟ್ರೋಪಿ ಗೆಲ್ಲುವುದಕ್ಕೆ ಅರ್ಹರು ಅದರಲ್ಲಿ ಬೇರೆ ಮಾತಿಲ್ಲ. ಆದರೆ ಇವರ ಜೊತೆ ಇದ್ದಿದ್ದು ಕಷ್ಟ ಜೀವಿ ಸೇಲ್ಸ್ ಮ್ಯಾನ್ ದಿವಾಕರ್. ಈ ಎಲ್ಲಾ ಕಾರಣಗಳಿಂದ ಚಂದನ್ ಶೆಟ್ಟಿ ಗೆಲ್ಲಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಅಷ್ಟೆ.

ಕಾಮಾನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದ ಸೇಲ್ಸ್ ಮ್ಯಾನ್ ದಿವಾಕರ್ ತುಂಬಾ ಕಷ್ಟ ಜೀವನದಿಂದ ಬಂದವರು. ಆದ್ರು ಬಿಗ್ ಬಾಸ್’ನಲ್ಲಿ ಕೊನೆಯವರೆಗೂ ಘಟಾನು ಘಟಿಗಳ ಜೊತೆ ಆಟ ಆಡಿ ಎಲ್ಲರ ಮನ ಗೆದ್ದದ್ದು ಸುಳ್ಳಲ್ಲ.ನೆನ್ನೆ ಗ್ರಾಂಡ್ ಪಿನಾಲೆ ವೇದಿಕೆಯಲ್ಲಿ ಯಾರೂ ಗೆಲ್ಲ ಬೇಕು ಎಂಬ ಸುದೀಪ್ ಪ್ರಶ್ನೆಗೆ ಅಲ್ಲಿದ್ದ ಸೇಲೆಬ್ರೆಟಿಗಳೇ ಕಾಮಾನ್ ಮ್ಯಾನ್ ದಿವಾಕರ್ ಗೆಲ್ಲಬೇಕು.ಏಕೆಂದರೆ ಅವರಿಗೆ ಈ ತರದ ಬೇರೆ ವೇದಿಕೆಗಳು ಸಿಗುವುದು ಕಷ್ಟ. ಅವರಿಗೆ ಹಣದ ಅವಶ್ಯಕತೆ ತುಂಬಾ ಇದೆ.ಒಂದು ವೇಳೆ ಬಿಗ್ ಬಾಸ್ ಗೆದ್ರೆ ಬರುವ ಹಣ ಅವರ ಕುಟುಂಬಕ್ಕೆ ಮತ್ತು ಮಗನ ಮುಂದಿನ ಜೀವನಕ್ಕೆ ತುಂಬಾ ಅನುಕುಲವಾಗುತ್ತೆ, ಹಾಗಾಗಿ ದಿವಾಕರ್ ರವರೆ ಬಿಗ್ ಬಾಸ್ ಗೆಲ್ಲಬೇಕು ಎಂದು ಹೇಳಿದ್ರು.

ಆದ್ರೆ ಕೊನೆಯಲ್ಲಿ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ್ರು.ಆದ್ರೆ ದಿವಾಕರ್ ರವರಿಗೆ ಕೇವಲ ಒಂದು ಲಕ್ಷ ಹಣ ಮಾತ್ರ ಕೊಟ್ಟಿದ್ದು, ಯಾಕೋ ಮೋಸ ಅನಿಸ್ತು.ಈ ಕಾರಣಗಳಿಂದ ಚಂದನ್ ಶೆಟ್ಟಿ ರವರಿಗೆ ಹೋಲಿಸಿದರೆ ಕಾಮಾನ್ ಮ್ಯಾನ್ ದಿವಾಕರ್ ರವರೇ ಗೆಲ್ಲಬೇಕಿತ್ತು ಎಂಬುದು ನಮ್ಮ ಅಭಿಮತ ಅಷ್ಟೆ.ಇದಕ್ಕೆ ನೀವೇನ್ ಹೇಳ್ತೀರಾ ಕಾಮೆಂಟ್ ಮೂಲಕ ತಿಳಿಸಿ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನ.ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.
ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…
ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ ಭಿನ್ನ ಗುಣಗಳನ್ನು ಹೊಂದಿರುತ್ತಾಳೆ. ಶಾಸ್ತ್ರಗಳ ಪ್ರಕಾರ ಕೆಲ ಮುಖ್ಯ ಗುಣಗಳನ್ನು ಹೊಂದಿರುವ ಹುಡುಗಿಯರನ್ನು ಕಣ್ಣು ಮುಚ್ಚಿಕೊಂಡು ಮದುವೆಯಾಗಬಹುದು. ಅವ್ರು ಇಡೀ ಕುಟುಂಬದ ಯಶಸ್ಸಿಗೆ ಕಾರಣವಾಗ್ತಾರೆ. ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಅನುಸರಿಸುವ, ಅದಕ್ಕೆ ಮಹತ್ವ ನೀಡುವ ಹುಡುಗಿಯರನ್ನು ಮದುವೆಯಾಗಿ ಬಂದ್ರೆ ಕುಟುಂಬದಲ್ಲಿ ಸಂತೋಷ ಮನೆ ಮಾಡಿರಲಿದೆ. ಕುಟುಂಬದ ಯಶಸ್ಸಿಗೆ…
ಬಹುತೇಕರು ಈಗಂತೂ ಕಂಪ್ಯೂಟರ್ನ ಮುಂದೆ ಕುಳಿತು ಬಿಟ್ಟರೆ ಎಲ್ಲವನ್ನೂ ಮರೆತು ಬಿಡುತ್ತಾರೆ.
ಲೂಸ್ ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗಿ ಪತ್ನಿ ಸಾಹಿತ್ಯ ಅವರು ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಅವರಿಗೆ ಹೆಣ್ಣು ಮಗು ಜನಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ನಟ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ತಂದೆಯಾದ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ…
ತುಂಬಾ ಜನ ಸಿಳ್ಳೆ (ವಿಸಿಲ್) ಹೊಡೆಯೋಕೆ ತುಂಬಾ ಇಷ್ಟ ಪಡುತ್ತಾರೆ. ಆದ್ರೆ ಕೆಲವರಿಗೆ ವಿಸಿಲ್ ಹೊಡೆಯೋದು ಹೇಗೆ ಅಂತ ಗೊತ್ತಾಗದೆ ತುಂಬಾ ಕಷ್ಟ ಪಡುತ್ತಾರೆ. ನೀವೇನಾದ್ರೂ ವಿಸಿಲ್ ಹೊಡೆಯೋದು ಹೇಗೆ ಅಂತ ಕಲಿಬೇಕು ಅನ್ಕೊಂಡ್ರೆ ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ…