ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಜಿಎಫ್ ಪರಭಾಷೆಗಳಿಗೆ ಡಬ್ ಆಗಿ ಧೂಳು ಎಬ್ಬಿಸಿದ ಬೆನ್ನಲ್ಲೇ ಇತ್ತ ಬೇರೆ ಭಾಷೆಯ ಚಲನ ಚಿತ್ರಗಳು ಸಹ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿವೆ.

ಇಷ್ಟು ದಿನ ಬೇರೆ ಭಾಷೆಯ ಚಲನ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಲು ಭಾರಿ ವಿರೋಧ ವಿತ್ತು. ಡಬ್ ವಿಷಯವನ್ನು ಮಾತನಾಡುವಂತೂ ಇರಲಿಲ್ಲ. ಅದರಲ್ಲೂ ಕನ್ನಡ ಚಲನಚಿತ್ರ ಮಂಡಲಿಯಂತೂ ಇದನ್ನು ತೀವ್ರವಾಗಿ ವಿರೋಧಿಸಿತ್ತು.

ಕಾರಣ ಕನ್ನಡ ಚಲನಚಿತ್ರ ರಂಗವು ಮೊದಲೇ ಮಾರ್ಕೆಟಿಂಗ್ ವಿಚಾರದಲ್ಲಿ ಹಿಂದೆ ಇರುವುದರಿಂದ ಪರಭಾಷಾ ಚಿತ್ರಗಳು ಡಬ್ ಆದರೆ ಇದರಿಂದ ಚಿತ್ರರಂಗದ ಮೇಲೂ, ಕಲಾವಿದರ ಮೇಲೂ ಹಾಗೆಯೇ ತಾಂತ್ರಿಕ ವರ್ಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಭಯ ಮತ್ತು ಇದರಿಂದ ನಮ್ಮ ಪ್ರಾದೇಶಿಕತೆಗೆ ದಕ್ಕೆ ಬರುತ್ತದೆ ಎಂಬುದು.

ಮುಂಚೆಯಲ್ಲ ಅಭಿಮಾನಿಗಳು ಹಾಗೂ ಎಲ್ಲಾ ಚಿತ್ರ ಪ್ರಿಯರು ಕನ್ನಡಕ್ಕೆ ಪರಭಾಷಾ ಚಿತ್ರಗಳ ಡಬ್ ಮಾಡುವಿಕೆಯನ್ನು ವಿರೋಧಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ತಾವು ಬೇರೆ ಭಾಷೆಯ ಸಿನಿಮಾ ಗಳನ್ನು ಕನ್ನಡದಲ್ಲೇ ನೋಡಬೇಕೆಂದು ಬಯಸಿದ್ದಾರೆ. ನಮಗೆ ಡಬ್ಬಿಂಗ್ ಬೇಕೇ ಬೇಕೆಂದು ಹಠವಿಡಿದು ಕುಳಿತಿದ್ದಾರೆ.

ಮೊದಲು ಕೆಲ ಚಿತ್ರಗಳು ವಿರೋಧದ ನಡುವೆಯೂ ತೆರೆ ಕಂಡು ಸೋಲನ್ನು ಅನುಭವಿಸಿದ್ದವು. ಕನ್ನಡಕ್ಕೆ ಡಬ್ ಆದ ಕೆಲವೇ ಚಿತ್ರಗಳು ಯಶಸ್ಸು ಕಾಣಲಿಲ್ಲ. ಆದರೆ ಈಗ ಕೆಜಿಎಫ್ ಚಿತ್ರ ಬೇರೆ ಭಾಷೆಯ ನೆಲದಲ್ಲಿ ತಮ್ಮದೇ ಭಾಷೆಯಲ್ಲಿ ಯಶಸ್ಸು ಕಂಡದ್ದೇ ತಡ ಈಗ ಕನ್ನಡದಲ್ಲೂ ಆ ನೆಲದ ಚಿತ್ರಗಳು ಡಬ್ ಆಗಲು ತಯಾರಾಗಿವೆ.

ತೆಲುಗಿನ ವಿನಯ ವಿಧೇಯ ರಾಮ ಸೇರಿದಂತೆ, ಜೂನಿಯರ್ ಎನ್ ಟಿಆರ್ ಆರ್ ಚಿತ್ರಗಳು ಕನ್ನಡದಲ್ಲಿ ತೆರೆಕಾಣಲು ಸಿದ್ಧವಾಗಿವೆ.

ಪ್ರಿಯ ವಾರಿಯರ್ ಅಭಿನಯದ ಒಂದು ಮಲೆಯಾಳಂ ಚಿತ್ರ ಕನ್ನಡಕ್ಕೆ ಬರಲಿದೆ. ತಮಿಳಿನ ಎರಡು ಚಿತ್ರಗಳು ಕನ್ನಡಕ್ಕೆ ಬರಲು ಭಾರಿ ತಯಾರಿ ನಡೆಯುತ್ತಿದೆ. ಅಲ್ಲದೆ ಇನ್ನೂ ಕೆಲವು ಭಾಷೆಯ ಚಿತ್ರಗಳು ಕನ್ನಡಕ್ಕೆ ಬರಬಹುದು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…
ಇದುವರೆಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಲ್ಪ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದ ವಾಹನ ಸವಾರರಿಗೆ ಹೊಸ ವರ್ಷದಿಂದ ಶಾಕ್ ನೀಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಈಗಿರುವ ದಂಡದ ಮೊತ್ತವನ್ನು ಭಾರಿ ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ, ಪ್ರಸ್ತಾವನೆಯೊಂದನ್ನು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದೆ ಎಂದು ಹೇಳಲಾಗಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿದೆ ಎನ್ನಲಾಗಿದೆ. ಈಗ ದಂಡದ ಮೊತ್ತ ಕಡಿಮೆ ಇರುವ ಕಾರಣ ವಾಹನ ಸವಾರರು ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಕಾರಣ ಈ ಕ್ರಮಕ್ಕೆ…
ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು…
ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ‘ಮೈ ಲವ್ ಲೆಟರ್ ಟು ಶ್ರೀದೇವೀಸ್ ಫ್ಯಾನ್ಸ್’ ಎಂಬ ಹೆಸರಿನಲ್ಲಿ,ತಮ್ಮ ಫೇಸ್ಬುಕ್ ವಾಲ್’ನಲ್ಲಿ ಬಹುಭಾಷಾ ನಟಿ ಶ್ರೀದೇವಿ ಬದುಕಿನ ಬಗ್ಗೆ ಕೆಲವು ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.
ಹುಟ್ಟಿದ ದಿನದ ಪ್ರಕಾರ ನೀವು ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ಇಲ್ಲಿ ತಿಳಿದು ಕೊಳ್ಳಿ.ನಿಮ್ಮದು ಸ್ವಲ್ಪ ವಿಶೇಷವಾದ ವ್ಯಕ್ತಿತ್ವ, ನೀವು ರಿಸ್ಕ್ ತೊಗೊಳಕ್ಕೆ ಹಿಂದೇಟಾಕಲ್ಲ ಆದ್ರೆ ಸುಮಾರ್ ಸತಿ ನಿಮ್ಮ ತಪ್ಪು ನಿರ್ಧಾರದಿಂದ ಒಳ್ಳೆ ಪಾಠ ಕಲಿತೀರಿ. ನಿಮಗೆ ಆಕ್ಟಿಂಗ್, ಕಲೆ ವಿಭಾಗದಲ್ಲಿ ಒಳ್ಳೆ ಬೆಳವಣಿಗೆ ಇರತ್ತೆ.
ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚು. ಹಾಗೇ ಅದರಿಂದ ಏನೇನು ಪ್ರಯೋಜನವಿದೆ ಎಂದು ನೋಡೋಣ. * ಒಡೆದ ಹಾಲಿನ ನೀರಿನಲ್ಲಿ ಪ್ರೊಟೀನುಗಳ ಪ್ರಮಾಣ ಹೆಚ್ಚು. ಈ ನೀರಿನಿಂದ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. * ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು….