ಉದ್ಯೋಗ

ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿಗಳ ವರೆಗೆ ಸಂಪಾದಿಸಬಹುದು..! ತಿಳಿಯಲು ಈ ಲೇಖನ ಓದಿ …

3551

ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು. ಬಂಡವಾಳ ಕಡಿಮೆ, ಗಳಿಕೆ ಜಾಸ್ತಿ ಅದಕ್ಕಾಗಿ ಕನ್ನಡ ಕಂಪಿನ ಮಾಧ್ಯಮದಿಂದ ಕೆಳಗೆ ಉಲ್ಲೇಖಿಸಿದ ಬಿಜನೆಸ್ ಗಳಿಗೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ನಿಮಗೆ ಉಪಯೋಗವಾದರೆ ಒಳ್ಳೆಯದು.

1.ವಾಟರ್ ಪ್ಲಾಂಟ್ :-
ಜನರ ಅನಿಸಿಕೆ ಮತ್ತು ಅನುಭವಗಳ ಪ್ರಕಾರ ನಗರ ಪಟ್ಟಣಗಳಲ್ಲಿ ಲೋಕಲ್ ಬಾಡಿಗಳ ಮೂಲಕ ಸರಬರಾಜು ಮಾಡುವ ನೀರು ಅಶುದ್ಧ ಮತ್ತು ಕುಡಿಯಲು ಯೋಗ್ಯ ವಿರುವದಿಲ್ಲ. ಆದಕಾರಣ ಜನ ಪ್ರಾಯವೆಟ್ ಆರ್. ಓ ನೀರು, ಬಾಟಲ್ ಬಂದ್ ನೀರಿನ ಬೇಡಿಕೆ ಮಾಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು ಯಾಕೆ ಇಂತಹ ಪ್ಲಾಂಟಗಳನ್ನು ಪ್ರಾರಂಭಿಸಬಾರದು? ಇಂತಹ ಪ್ಲಾಂಟ್ ನ್ನು ನಿರ್ಮಿಸಲು ಮೊದಲು ಯೋಚಿಸುವದೆನೆಂದರೆ ನೀರಿನ ಟಿ ಡಿ ಎಸ್ ಲೇವಲ್ ಜಾಸ್ತಿ ಇರಬಾರದು. ನಂತರ ಸರಕಾರದಿಂದ ಲಾಯಸನ್ಸ್ ಮತ್ತು ಐ ಎಸ್ ಐ ನಂಬರ್ ತೆಗೆದುಕೊಳ್ಳುವದು ಮಹತ್ವದ್ದು.

ಎಷ್ಟೋ ಕಂಪನಿಗಳು ಕಮರ್ಶಿಯಲ್ಲಾಗಿ ಆರ್ ಓ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಇದರ ವೆಚ್ಚ 50 ಸಾವಿರ ₹ ಗಳಿಂದ 2 ಲಕ್ಷ ₹ ಗಳ ವರೆಗೆ ತಗಲುವದು. ಜೊತೆಗೆ ಕಡಿಮೆ ಎಂದರೆ 100 ಜಾರ್ ಗಳನ್ನು ಖರೀದಿಸ ಬೇಕಾಗುವದು. ಅವು 20 ಲೀಟರ್ ಕ್ಯಾಪೆಸಿಟಿ ಇರುವಂತಹದು. ಇವೆಲ್ಲವುಗಳಲ್ಲಿ ನಿಮಗೆ 4 ರಿಂದ 5 ಲಕ್ಷ ₹ ಗಳವರೆಗೆ ಖರ್ಚಾಗುವದು. ಈ ಹಣ ನಿಮಗೆ ಹೆಚ್ಚು ಅನಿಸಿದರೆ ಲೋನ್ ಸಲುವಾಗಿ ಬ್ಯಾಂಕ್ ಗೂ ಸಹ ಅಪ್ಲಾಯ್ ಮಾಡಬಹುದು. ಈ ತರಹದ ಪ್ಲಾಂಟ್ ಒಂದನ್ನು ಪ್ರಾರಂಭಿಸಿದರೆ ಪ್ರತಿ ಗಂಟೆಗೆ 1000 ಲೀಟರ್ ನೀರಿನ ಪ್ರೋಡಕ್ಶನ್ ವಾಗುವದರಿಂದ ನೀವು ಕಡಿಮೆ ಎಂದರೆ 30 ರಿಂದ 50 ಸಾವಿರ ₹ ಗಳನ್ನು ಗಳಿಸಬಹುದು.

2.ಚಿಲಿಂಗ್ ಪ್ಲಾಂಟ್ :-
ನಗರ ಪಟ್ಟಣಗಳಲ್ಲಿ ಬಾಟಲ್ ಜೊತೆಗೆ 10 ರಿಂದ 15 ಲೀಟರ್ ಕ್ಯಾನ್ ಗಳಲ್ಲೂ ನೀರಿನ ಸಪ್ಲಾಯ್ ಮಾಡಲಾಗುತ್ತದೆ. ಈ ನೀರು ಚಿಲಿಂಗ್ ಪ್ಲಾಂಟ್ ನಿಂದ ಸರಬರಾಜು ಮಾಡಲಾಗುತ್ತದೆ. ಆರ್ ಓ ನೀರಿನ ಪ್ಲಾಂಟ್ ತರಹನೆ ಒಂದು ಒಳ್ಳೆಯ ಗ್ರಾವುಂಡ್ ವಾಟರ್ ಕ್ವಾಲಿಟಿ ಹಾಗೆ ಇದ್ದರೆ ಚಿಲಿಂಗ್ ಪ್ಲಾಂಟ್ ಇನ್ ಸ್ಟಾಲ್ ಮಾಡಿ ಕೊಡುತ್ತಾರೆ.

ಈ ಚಿಲಿಂಗ್ ವಾಟರ್ ಪ್ಲಾಂಟನಲ್ಲಿ ನೀರಿನಲ್ಲಿಯ ಬ್ಯಾಕ್ಟೇರಿಯಾಗಳನ್ನು ಸಾಯಿಸಿ ನೀರನ್ನು ತಂಪು ಮಾಡುತ್ತಾರೆ. ಈ ನೀರನ್ನು ದಿನಾಲು ಮನೆಗಳಿಗೆ, ಅಂಗಡಿಗಳಿಗೆ ಪೂರೈಕೆ ಮಾಡುವರು. ಈ ಪ್ಲಾಂಟ್ ವ್ಯವಸಾಯಕ್ಕೆ 2 ರಿಂದ 4 ಲಕ್ಷ ₹ ಗಳ ಖರ್ಚು ತಗಲುವದು. ಇದರಿಂದ ಪ್ರತಿ ತಿಂಗಳು 30 ರಿಂದ 40 ಸಾವಿರ ₹ ಗಳ ಗಳಿಕೆ ಸಾಧ್ಯ.

3.ದೊಡ್ಡ ದೊಡ್ಡ ಕಂಪನಿಗಳ ಡೀಲರ್ ಶಿಪ್ ತೆಗೆದುಕೊಳ್ಳುವದು:-

ದೇಶದಲ್ಲಿ ಅನೇಕ ದೊಡ್ಡ ಕಂಪನಿಗಳು ಬಾಟಲ್ ನೀರಿನ ವ್ಯವಸಾಯ ಮಾಡುತ್ತಿದ್ದಾರೆ. ಇವುಗಳಲ್ಲಿ ಬಿಸಲೆರಿ, ಎಕ್ವಾಫಿನಾ, ಕಿನ್ಲೆ ಈ ಬ್ರಾಂಡ್ ಗಳ 200 ಎಂ ಎಲ್ ನಿಂದ ಹಿಡಿದು ಲೀಟರ್ ವರೆಗೆ ಹಾಗೂ ಲೀಟರ್ ಮೇಲ್ಪಟ್ಟು ಸಹ ದೊಡ್ಡ ಬಾಟಲ್ ಗಳಿಗೆ ಮಾರ್ಕೆಟ್ ನಲ್ಲಿ ತುಂಬಾ ಬೇಡಿಕೆ ಇದೆ.

ನೀವು ಈ ಕಂಪನಿಗಳ ಡಿಸ್ಟ್ರಿಬ್ಯುಷನ್ ತೆಗೆದುಕೊಂಡು ವ್ಯಾಪಾರ ಮಾಡಬಹುದು. ಕಡಿಮೆ ಎಂದರೆ ಇದರಲ್ಲಿ ನಿಮಗೆ 5 ಲಕ್ಷ ₹ ಗಳ ವರೆಗೆ ಬಂಡವಾಳ ಹೂಡಬೇಕಾಗುವದು. ಈ ಬಂಡವಾಳದಲ್ಲಿ ಹೆಚ್ಚು ಸಹ ಮಾಡಬಹುದು.

4.ವಾಟರ್ ಎ ಟಿ ಎಂ ನಿಂದಲೂ ಬಿಜನೆಸ್ ಪ್ರಾರಂಭಿಸಬಹುದು:-
ಎಷ್ಟೋ ಕಂಪನಿಗಳು ವಾಟರ್ ಎ ಟಿ ಎಂ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಅದನ್ನು ನೀವು ಖರೀದಿಸಿ ಬೇರೆ ಬೇರೆ ಸ್ಥಳಗಳಲ್ಲಿ ಇನ್ಸ್ಟಾಲ್ ಮಾಡಬಹುದು. ಮತ್ತು ನೀವು ಈ ಕಂಪನಿಗಳ ಪ್ರೆಂಚಾಯಜಿಯನ್ನು ಸಹ ತೆಗೆದುಕೊಳ್ಳಬಹುದು. ಉದಾಹರಣೆಗೆ ಪಿರಾಮಲ್ ಸರ್ವಜಲ ಹೆಸರಿನ ಕಂಪನಿ ವ್ಯಾಪಾರಿಗಳಿಗೆ ಫ್ರೆಂಚಾಯಿಜಿಯನ್ನು ಕೊಡುತ್ತಿದೆ. ಇದರಲ್ಲಿ ಕಂಪನಿಯ ಕಡೆಯಿಂದಲೆ ಇನ್ ಸ್ಟಾಲೆಶನ್, ಮೆಂಟನೆನ್ಸ್, ರಿಪ್ಲೆಸ್ ಮೆಂಟ್ ತರಹದ ಎಲ್ಲ ಸರ್ವಿಸಗಳನ್ನು ಕೊಡುತ್ತಾರೆ. ಇಂಥ ಎ ಟಿ ಎಂ ಗಳ ಮುಖಾಂತರ ನೀವು ತಿಂಗಳಿಗೆ 25 ರಿಂದ 50 ಸಾವಿರ ₹ ಗಳ ಗಳಿಕೆ ತಿಂಗಳಿಗೆ ಪಡೆಯಬಹುದು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(19 ಫೆಬ್ರವರಿ, 2019) ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಬೇಕಷ್ಟು ಮೊದಲೇ ಯೋಜಿಸಿದ ಪ್ರಯಾಣದ…

  • ಸುದ್ದಿ

    ಗೂಗಲ್ ಕಂಪನಿ 200 ಮೇಕೆಗಳನ್ನು ನೇಮಿಸಿಕೊಂಡು,ಸಂಬಳ ಸಮೇತ ಹೊಟ್ಟೆ ತುಂಬಾ ಆಹಾರ ಕೊಡ್ತಾ ಇದೆ..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.

  • ವಿಸ್ಮಯ ಜಗತ್ತು

    ಏಟು ತಿಂದ ಹಾವುಗಳು, ಹೊಡೆದವರನ್ನು ಸುಮ್ಮನೆ ಬಿಡಲ್ವಾ!ತಿಳಿಯಲು ಈ ಲೇಖನ ಓದಿ…

    ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.

  • ಸುದ್ದಿ

    ಹುಟ್ಟುತ್ತಲೇ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದ ಮಗು. ಅದರಲ್ಲೂ ಒಂದು ವಿಶೇಷ ಇದೆ.

    ಮನೆಗೆ ಪುಟ್ಟ ಕಂದ ಬರುತ್ತಿದೆ ಎಂದರೆ ಅದಕ್ಕಿಂತ ಸಂತೋಷದ ಕ್ಷಣ ಬೇರೆ ಯಾವುದಿದೆ ಹೇಳಿ..? ಮಗು ಹುಟ್ಟಿದಾಗಿನಿಂದ ಅದರ ಆಟ, ಪಾಠ, ನಗು, ಅಳು, ಚೇಷ್ಟೆ ಎಲ್ಲವನ್ನೂ ಕಣ್ತುಂಬಿಕೊಳ್ಳುವುದೇ ಚೆಂದ. ಅದರಲ್ಲೂ ಆಗ ತಾನೆ ಹುಟ್ಟಿದ ಮಗುವೊಂದು ತನ್ನ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದರೆ….ಆ ಅನುಭವ ಹೇಗಿರುತ್ತದೆ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಈ ಫೋಟೋ ಬ್ರೆಜಿಲ್‍ನ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಫ್ಲಾವಿಯೋ ಎಂಬ ಸೈನಿಕನ ಪುಟ್ಟ ಕುಟುಂಬದ್ದು. ಫ್ಲಾವಿಯೋ ಪತ್ನಿ ತಾರ್ಸಿಲಾ ಕಳೆದ ಆಗಸ್ಟ್‍ನಲ್ಲಿ ಹೆಣ್ಣು ಮಗುವಿಗೆ ಜನ್ಮ…

  • ಸುದ್ದಿ

    7 ವರ್ಷಗಳಲ್ಲಿ 7 ಬಾರಿ ಗರ್ಭಪಾತ ; ಕರಳು ಚಿಮ್ಮುತ್ತೆ ಮಹಿಳೆಯ ಹೃದಯ ವಿದ್ರಾವಕ ಕಥೆ….

    ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…

  • ದೇವರು-ಧರ್ಮ

    ಸತ್ತವರನ್ನು ಹಿಂದೂ ಧರ್ಮದಲ್ಲಿ ದಹನ ಮಾಡುತ್ತಾರೆ ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಜಗತ್ತಿನಾದ್ಯಂತ ಅನೇಕ ಧರ್ಮಗಳಿಗೆ ಸೇರಿದವರು ತಮ್ಮ ಆಚಾರ ಸಂಪ್ರದಾಯ ಪಾಲಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಧರ್ಮದವರು ತೀರಿಕೊಂಡರೆ ಹೂಳುವುದೋ, ಸುಡುವುದನ್ನೋ ಮಾಡುತ್ತಾರೆ.