bank, ಬ್ಯಾಂಕ್

ಎಲ್ಲಾ ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ !!! ಏನಂತೀರಾ ಈ ಲೇಖನ ನೋಡಿ…

184

ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ ನೀಡಿರುವ ಆರ್​ಬಿಐ.

ಮೊಬೈಲ್ ನಂಬರ್ ವರ್ಗಾವಣೆಯಂತೆ ಈಗ ನಿಮ್ಮ  ಬ್ಯಾಂಕ್ ಖಾತೆ ವರ್ಗಾವಣೆಗೂ ಮುಂದಾಗಿದೆ. ಅಂದರೆ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ.

 

ಅಂದುಕೊಂಡಂತೆ ನಡೆದರೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಇನ್ನೊಂದು ಬ್ಯಾಂಕ್​ಗೆ ವರ್ಗಾಹಿಸಿಕೊಳ್ಳಬಹುದಾಗಿದೆ. ಯಾವುದೇ ಸಮಯದಲ್ಲಿ ಬ್ಯಾಂಕ್​ ಖಾತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಅನುಕೂಲತೆಗೆ ತಕ್ಕಂತೆ ಬ್ಯಾಂಕ್​ಗಳ ವರ್ಗಾವಣೆಗೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.

ಗ್ರಾಹಕರು ಚಾಲ್ತಿಯಲ್ಲಿರುವ ತಮ್ಮ ಖಾತೆಯನ್ನು ತಮಗೆ ಇಷ್ಟಬಂದ/ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ವರ್ಗಾಹಿಸಿಕೊಳ್ಳಬಹುದಾಗಿದೆ.

ನಿಮ್ಮ ಮೊಬೈಲ್ ಸೇವಾ ಕಂಪನಿಯಂತೆ (ಮೊಬೈಲ್ ಆಪರೇಟರ್) ನಿಮ್ಮ ಬ್ಯಾಂಕ್ ಅನ್ನು ನೀವು ಬದಲಾಯಿಸಿದರೂ ಕೂಡಾ ನಿಮ್ಮ ಹಳೆಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಲು ಸಾಧ್ಯವಾಗುತ್ತದೆ.

ಈ ಬಗ್ಗೆ ಮಾತನಾಡಿರುವ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಸ್.ಎಸ್.ಮುಂದ್ರ, ಭಾರತದಲ್ಲಿ ಬ್ಯಾಂಕ್ ಖಾತೆಯ ಪೋರ್ಟಬಿಲಿಟಿ ಪರಿಚಯಿಸಲು ಆರ್​ಬಿಐ ಸಿದ್ದತೆ ನಡೆಸಿದೆ. ಪಾವತಿಯ ವ್ಯವಸ್ಥೆಯಲ್ಲಿನ ತಂತ್ರಜ್ಞಾನದ ಪ್ರಗತಿಗಳೊಂದಿಗೆ ಖಾತೆಯ ವರ್ಗಾವಣೆಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಎಂಪ್ಲಾ ಯೀಸ್  ಫೆಡರೇಷನ್ ಅಧ್ಯಕ್ಷ ವಸಂತ ಪೈ, ಕೇಂದ್ರದ ಈ ನಿರ್ಧಾರ ಉತ್ತಮವಾಗಿದೆ. ಇದರಿಂದ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ. ಇದರ ಜತೆಗೆ ಕಟ್ಟುನಿಟ್ಟಿನ ಷರತ್ತು ಜಾರಿಗೊಳಿಸಬೇಕು.

ಗ್ರಾಹಕರನ್ನು ಸೆಳೆಯೋಕೆ ಬ್ಯಾಂಕ್‌ಗಳು ಆಮಿಷ ಒಡ್ಡಬಹುದು. ಇಲ್ಲವಾದರೆ ಭ್ರಷ್ಟಾಚಾರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಜಿಯೋ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್!ಮಾಹಿತಿಗೆ ಈ ಸುದ್ದಿ ನೋಡಿ

    ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಪ್ರತಿ ದಿನ 1.5 ಜಿಬಿ ಡೇಟಾದಿಂದ 4 ಜಿಬಿ ಡೇಟಾವರೆಗೆ ಬೇರೆ ಬೇರೆ ಸಿಂಧುತ್ವದ ಪ್ಲಾನ್ ಶುರು ಮಾಡಿದೆ. ಇದ್ರ ಜೊತೆ ಅನಿಯಮಿತ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಲಭ್ಯವಾಗಲಿವೆ. ಜಿಯೋದ ಹೊಸ ಪ್ಲಾನ್ ಕಾಂಬೋ ಪ್ಯಾಕ್ ಆಗಿದೆ. ಇದ್ರಲ್ಲಿ 197 ರೂಪಾಯಿ ಪ್ಲಾನ್ ಗ್ರಾಹಕರನ್ನು ಸೆಳೆದಿದೆ. 197 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದ್ದು, 2ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯದ…

  • inspirational

    ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

    ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ದ್ವಿಚಕ್ರ ವಾಹನಗಳು ಪೆಟ್ರೋಲ್ ಎಂಜಿನ್ ಸಹಾಯದಿಂದ ಚಲಿಸುತ್ತಿರುವುದು ಎಂದು ನಮಗೆಲ್ಲಾ ತಿಳಿದೇ ಇದೆ. ಜೊತೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಕೂಡಾ ಬಿಡುಗಡೆಯಾಗುತ್ತಿದ್ದು, ಪೆಟ್ರೋಲ್ ಎಂಜಿನ್ ಬೈಕ್‌ಗಳಿಗೆ ಟಕ್ಕರ್ ನೀಡುವುದಕ್ಕೆ ಸಜ್ಜಾಗುತ್ತಿವೆ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ಕೋಕಾಕೋಲಾದಿಂದ ಬೈಕ್ ಚಾಲನೆ ಮಾಡುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾನೆ. ವಾಹನಗಳ ಇಂಧನಗಳ ಬೆಲೆ ಕಡಿತಗೊಳಿಸುವುದಕ್ಕೆ ಜಗತ್ತಿನಾದ್ಯಂತ ಹಲವು ಹೊಸ ಇಂಧನ ಮಾದರಿಗಳನ್ನು ಪತ್ತೆಹಚ್ಚಲು ಹತ್ತಾರು ಸಂಶೋಧನೆಗಳು ನಡೆಯುತ್ತಿದ್ದು, ಇಲ್ಲೊಬ್ಬ ಯುವಕ ಮಾತ್ರ ಒಂದು ಸಾಧಾರಣ ಕೂಲ್…

  • ಉಪಯುಕ್ತ ಮಾಹಿತಿ

    ಕನ್ನಡ ಡಿಜಿಟಲ್ ಗ್ರಂಥ ಭಂಡಾರ.ನಿಮ್ಗೆ ಬೇಕಾದ ಮಾಹಿತಿಗಾಗಿ ಈ ಲೇಖನಿ ಓದಿ…

    ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…

  • ಉಪಯುಕ್ತ ಮಾಹಿತಿ

    ಕೆಲಸ ಹುಡುಕಲು ಸಹಾಯವಾಗುವ ಉತ್ತಮ ವೃತ್ತಿಪರ ಸಂಪರ್ಕಗಳ ಬೆಳವಣಿಗೆಗೆ ಬೇಕಾಗುವ ಸಲಹೆಗಳು ಯಾವುದು ಗೊತ್ತಾ?

    ಓದು ಮುಗಿಸಿದ ನಂತರ ಉದ್ಯೋಗ ಹುಡುಕುವುದು, ಒಂದು ಜಾಬ್‌ನಲ್ಲಿ ಇದ್ದು ಮೊತ್ತೊಂದು ಉದ್ಯೋಗ ಸರ್ಚ್‌ ಮಾಡುವುದು ಹಲವರಿಗೆ ತುಂಬಾ ಕಷ್ಟದ ಕೆಲಸ.ಇದನ್ನು ಸರಳಗೊಳಿಸುವುದು, ಎಲ್ಲರೂ ಬೆಳೆಸಿಕೊಂಡ ವೃತ್ತಿಪರ ಸಂಪರ್ಕಗಳು ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ. ಉತ್ತಮ ಸಂವಹನ ಬೆಳವಣಿಗೆಗಾಗಿ ಇರುವ ಹಲವು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಖಾಸಗಿ ಕ್ಷೇತ್ರಗಳಲ್ಲಿ ಆಗಲಿ, ಸರ್ಕಾರಿ ಇಲಾಖೆಗಳ ಖಾಯಂ ಮತ್ತು ಗುತ್ತಿಗೆ ಆಧಾರದ ಕೆಲಸಗಳೇ ಆಗಲಿ, ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ವೃತ್ತಿ ಪರ ಸಂಪರ್ಕಗಳು ಮತ್ತು ಅವರೊಂದಿಗಿನ ಉತ್ತಮ ಸಂವಹನ ಮಾತ್ರ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ ಕೋಲಾರ:- ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ, ಅತ್ತಿಗಿರಿಕೊಪ್ಪ ಗ್ರಾಮದ ನಾಗೇಂದ್ರ @ ಚಿನ್ನಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಬೂದಿಕೋಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಕಲಂ 6 ಪೋಕ್ಸೋ ಕಾಯ್ದೆ ಹಾಗೂ…