ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
 
            ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ.

ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ.

ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಸರಳ, ಕ್ಲಿಷ್ಟ, ಮೊದಲಾದ ರೀತಿಯ ಕೆಲಸವನ್ನು ಅವರಿಗೆ ವಹಿಸಲಾಗಿತ್ತು ಅದರಲ್ಲಿ ಉಗುರು ಕಚ್ಚುವವರು ತಮಗೆ ನೀಡಲಾಗಿದ್ದ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಈ ಸ್ವಭಾವ ಹೊಂದಿರದವರು ಒತ್ತಡ ತಡೆದುಕೊಳ್ಳಲಿಕ್ಕೆ ಸಾಧ್ಯವಾಗದೇ ಉಗುರು ಕಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಲಾಗಿದೆ. ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿದ್ದಾರೆಂಬುದು ಅಧ್ಯಯನದಲ್ಲಿ ತಿಳಿದುಬಂದಿದ್ದು, ಇಂತವರಿನ್ನು ಖುಷಿಪಡಬಹುದು. ಕೆಲವರು ತಮಗೆ ವಹಿಸಿದ ಕೆಲಸ ಪೂರ್ಣಗೊಳಿಸದಿದ್ದಾಗ ಒತ್ತಡಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ.

ಉಗುರು ಕಚ್ಚುವುದು ಕ್ಯಾಲ್ಶಿಯಂ ಕೊರತೆಯ ಲಕ್ಷಣ ಎನ್ನುವವರೂ ಇದ್ದಾರೆ. ಅದೇನೇ ಇದ್ದರೂ ಈ ದುಶ್ಚಟ ಬಿಡುವ ಸರಳ ಉಪಾಯ ಏನಿದೆ ನೋಡೋಣ.ನಮಗೆ ನೆನಪಿರಬಹುದು. ಚಿಕ್ಕ ಮಗುವಾಗಿದ್ದಾಗ ತಾಯಿ ಎದೆ ಹಾಲು ಬಿಡಿಸಲು ಕಹಿ ಸವರುವ ಉಪಾಯ. ಅದನ್ನೇ ಇಲ್ಲೂ ಅಳವಡಿಸಿಕೊಳ್ಳಬಹುದು. ಕೈಗೆ ನೈಲ್ ಪಾಲಿಶ್ ಅಥವಾ ಕಹಿಯಾದ ವಸ್ತುವನ್ನೇನಾದರೂ ಸವರಿಕೊಳ್ಳುವುದು ಉತ್ತಮ ಉಪಾಯ.

ಉಗುರು ಕಚ್ಚುವುದರಿಂದ ದೇಹದ ಮೇಲಾಗುವ ಪರಿಣಾಮಗಳೂ ಅಷ್ಟೇ ಗಂಭೀರ. ಉಗುರಿನಲ್ಲಿರುವ ಕಶ್ಮಲ ಹೊಟ್ಟೆ ಸೇರುವುದರಿಂದ ಜಂತು ಹುಳದ ತೊಂದರೆ ಅನುಭವಿಸಬೇಕಾದೀತು. ಉಗುರಿನ ಸುತ್ತಲಿನ ಚರ್ಮ ಅಂದಗೆಡುವುದು ಮಾತ್ರವಲ್ಲ, ಊದಿಕೊಂಡಂತೆ ಆಗಬಹುದು.

ಅಲ್ಲದೆ ಉಗುರು ಕಚ್ಚುವುದರಿಂದ ಹಲ್ಲು ಬಲಹೀನವಾಗಬಹುದು ಮತ್ತು ಅಂದಗೆಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕೈ ಬೆರಳುಗಳು ಅಂದಗೆಡುವುದು ಮಾತ್ರವಲ್ಲ, ನೋಡುಗರಿಗೆ ಅಸಹ್ಯವಾಗಿ ಕಾಣಬಹುದು. ಹಾಗಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬಿಡುವುದು ಒಳ್ಳೆಯದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ಚಳಿಗೂ ಹಾರ್ಟ್ ಅಟ್ಯಾಕ್‌ಗೂ ಅದೇನೋ ಸಖ್ಯ! ಚಳಿಗಾಲದಲ್ಲಿ, ಅದೂ ನಸುಕಿನಲ್ಲೇ ಹೃದಯಾಘಾತ ಘಟಿಸುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆಆಗುವುದರಿಂದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚು ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದ್ರೋಗಗಳು ಉಲ್ಬಣಿಸುವ ಸಾಧ್ಯತೆ ಅಧಿಕ. ಇವೆಲ್ಲ ಕಾರಣಗಳಿಂದ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಲಭಿಸದೆ ಹೃದಯಾಘಾತ ಆಗುತ್ತದೆ. ಚಳಿಗಾಲದಲ್ಲಿ…
ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….
ನೀವು ಸೇವಿಸುವ ಆಹಾರವನ್ನೇ ಅಡುಗೆ ಮನೆಯಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ಬಳಸಬಹುದು ಎಂಬುದನ್ನು ನೀವು ಅರಿತಿದ್ದೀರಾ? ಅಡುಗೆ ಮನೆಯಲ್ಲಿ ಜಿಡ್ಡಿನ ಅಂಶಗಳನ್ನು ತೊಡೆದು ಹಾಕಲು, ನಲ್ಲಿಯನ್ನು ಸ್ವಚ್ಛಗೊಳಿಸಲು ನಾವು ರಾಸಾಯನಿಕ ಸ್ವಚ್ಛಕಗಳನ್ನು ಬಳಸುತ್ತೇವೆ ಆದರೆ ಅವುಗಳು ಯಾವುದೂ ನೈಸರ್ಗಿಕದಂತಿರುವ ಶುಭ್ರತೆಯನ್ನು ಒದಗಿಸುವುದಿಲ್ಲ, ಬದಲಿಗೆ ಸ್ವಲ್ಪ ದಿನ ಬೆಳ್ಳಗಾಗಿದ್ದು ಪುನಃ ಹಳೆಯ ರೂಪಕ್ಕೆ ತಿರುಗುತ್ತವೆ.
ಶ್ರದ್ಧೆ ಹಾಗೂ ಬದ್ಧತೆಗೆ ಹೆಸರಾಗಿರುವ ಆಟಗಾರ ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಹಲವು ಶ್ರೇಷ್ಠ ಆಟಗಾರರಿಂದ ‘ಕಿಂಗ್ ಕೊಹ್ಲಿ’ ಎಂದು ಕರೆಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ, ಸಚಿನ್ ನಿರ್ವಿುಸಿದ್ದ ದಾಖಲೆಗಳನ್ನು ಒಂದೊಂದಾಗಿ ಹಿಮ್ಮೆಟ್ಟಿಸುತ್ತ ಸಾಗುತ್ತಿದ್ದಾರೆ. ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಮಾಡಿರುವ ಕಿಂಗ್ ಕೊಹ್ಲಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ಟೆಸ್ಟ್ ನಾಯಕತ್ವ ಮತ್ತು ಬ್ಯಾಟಿಂಗ್ನಲ್ಲಿ ಯಶಸ್ಸು ಕಂಡಿರುವ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್ನಿಂದ ಬಿಡುವು ಪಡೆದಿದ್ದು, ಪತ್ನಿ ಅನುಷ್ಕಾ ಶರ್ಮಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇಂದು 31ನೇ ವರ್ಷದ ಜನ್ಮ…