ವಿಸ್ಮಯ ಜಗತ್ತು

ಈ ಹೂ ಇಡೀ ಭೂಮಂಡಲದಲ್ಲಿಯೇ, ಅತೀ ಹೆಚ್ಚು ಬೆಲೆಬಾಳುತ್ತದೆ..!ನಿಮಗೆ ಗೊತ್ತಿರಲಿಕ್ಕಿಲ್ಲ?ತಿಳಿಯಲು ಈ ಲೇಖನಿ ಓದಿ…

2622

ನೋಡುಗರ ಮನವನ್ನು ಕೆರಳಿಸುವ ಬ್ರಹ್ಮ ಕಮಲ ಸೂರ್ಯನ ಬೆಳಕಿನಿಂದ ಮೊಗ್ಗಾಗಿ ರಾತ್ರಿ ಚಂದ್ರ ಬರುವವರೆಗೂ ಕಾದು  11 ಗಂಟೆಯ ನಂತರ ಅರಳಿ ಬೆಳಗಾಗುವ ಹೊತ್ತಿಗೆ ಕಮರುವುದೇ ಬ್ರಹ್ಮ ಕಮಲ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.

ಮುಡಿಯುವುದಕ್ಕಿಂತ ಪೂಜೆ ಮಾಡುತ್ತಾರೆ!

ರಾತ್ರಿಯ ರಾಣಿ ಈ ಹೂವನ್ನು ಮುಡಿಯುವುದಕ್ಕಿಂತ ಧಾರ್ಮಿಕ ಪೂಜನಿಯವಾಗಿ ಉಪಯೋಗಿಸುತ್ತಾರೆ ಈ ಹೂ ಅರಳುವುದನ್ನು ನೋಡುವವರೆ ಅದೃಷ್ಟವಂತರು. ರಾತ್ರಿಯ ವೇಳೆ ಈ ಹೂವು ಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ, ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ಈ ಹೂವಿನ ಹೆಸರಿನ, ಹಿಂದೆ ಇದೆ ಒಂದು ಪುರಾಣ ಕಥೆ…

ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್‌ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ ಕಮಲಭವ ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ. ಕೇವಲ ವರ್ಷಕೊಮ್ಮೆ ಅರಳುವ ಈ ಹೂವು ರಾತ್ರಿ ವೇಳೆ ಅರಳಿ ರಾತ್ರಿಯೇ ಬಾಡಿಹೋಗುತ್ತೆ. ಹೂವುಗಳಲ್ಲೇ ಈ ಥರದ ಸ್ವಭಾವವನ್ನು ತೋರಿಸುವ ಹೂವು ಇದೊಂದೇ.

ಈ ಹೂವು ಹೇಗೆ ಅರಳುತ್ತದೆ ಗೊತ್ತಾ?

ಎಲ್ಲ ಗಿಡಗಳು ಬೇರು, ಕಾಂಡ ಅಥವಾ ಬೀಜದಿಂದ ಬೆಳೆದರೆ ಬ್ರಹ್ಮ ಕಮಲ ಎಲೆಯಿಂದಲೇ ದೊಡ್ಡದಾಗುತ್ತದೆ. ಗಿಡದ ಎಲೆಯನ್ನು ನೆಟ್ಟರೆ ಗಿಡವಾಗಿ ಬೆಳೆಯುತ್ತದೆ! ಒಂದೂವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ.
ಬ್ರಹ್ಮ ಕಮಲ ಹೂವು ಬಿಡುವುದು ಜೂನ್- ಜುಲೈ ತಿಂಗಳಿನಲ್ಲಿ. ಕೇವಲ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಒಮ್ಮಲೆ ಹತ್ತು ಹದಿನೈದು ಮೊಗ್ಗುಗಳು ಹೂವಾಗಿ ಅರಳುವುದೇ ವಿಸ್ಮಯ.

ಬೆಳೆಯುವುದೆಲ್ಲಿ…

ಹಿಮಾಲಯದ ಆಸುಪಾಸಿನಲ್ಲಿ ಈ ಗಿಡ ಹೆಚ್ಚಾಗಿ ಬೆಳೆಯುತ್ತದೆ. ಇದು ಪೊದೆಯಂತೆ ಎತ್ತರಕ್ಕೆ ಹೋದಂತೆ ಕಾಂಡ ಕೂಡ ದಪ್ಪದಾಗುತ್ತಾ ಹೋಗುತ್ತದೆ. ಬೆಳ್ಳನೆಯ ಹೂವಿನ ದಳಗಳು ದಪ್ಪವಾಗಿರುತ್ತವೆ. ಅದೇರೀತಿ ಗಿಡದ ಎಲೆಗಳು ದಪ್ಪದಾಗಿದ್ದು, ಹಸಿರಾಗಿ ಎರಡರಿಂದ ಮೂರು ಅಡಿ ಉದ್ದಕ್ಕೆ ಬೆಳೆಯುತ್ತವೆ.

ಔಷಧಗಳಲ್ಲಿ ಬಳಕೆ :-

ಇದರ ಎಲೆ, ಹೂವು, ಕಾಂಡ ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತವೆ. ಬೇರನ್ನು ತೇಯುವ ಮೂಲಕ ಗಾಯಗಳಿಗೆ ಲೇಪನ ಮಾಡಿದರೆ, ಬೇಗ ಗುಣವಾಗುತ್ತದೆಯಂತೆ. ಪುಷ್ಪದ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ.

ಈ ಹೂವಿಗೆ ರಾತ್ರಿ ರಾಣಿ ಎಂದು ಕರೆಯುತ್ತಾರೆ…

ಈ ಹೂವಿನ ಸೌಂದರ್ಯ ಒಂದು ರಾತ್ರಿಗೆ ಮಾತ್ರ ಸೀಮಿತ. ಆದರೆ, ಅಪರಿಮಿತ ಪರಿಮಳವನ್ನು ಸುತ್ತಮುತ್ತಲೂ ಪಸರಿಸುತ್ತದೆ. ಈ ಹೂವಿನ ಸೌಂದರ್ಯ ಸವಿಯಬೇಕಾದರೆ, ಹೂವುಬಿಟ್ಟು ನಾಲ್ಕೈದು ದಿನಗಳವರೆಗೆ ಕಾದು ಜಾಗರಣೆ ಮಾಡಬೇಕು. ರಾತ್ರಿ ಅರಳುವುದರಿಂದ ಇದನ್ನು ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ