ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಕೃತಿಯ ವೈಚಿತ್ರ್ಯಒಮ್ಮೊಮ್ಮೆ ಎಲ್ಲರನ್ನೂ ಬೆರಗಾಗಿಸುತ್ತದೆ. ಬರೀ ಕಲ್ಪನೆಯಲ್ಲಿ ಮಾತ್ರ ಇದ್ದಂತಹ ವಸ್ತುಗಳು, ಜೀವಿಗಳು ಇದ್ದಕ್ಕಿದ್ದಂತೆ ಧುತ್ತನೆ ನಮಗೆದುರಾಗುತ್ತವೆ. ಸದ್ಯ ಚೀನಾದಲ್ಲಿ ಆಗಿರುವುದು ಇದೇ. ಮತ್ಸ್ಯಕನ್ಯೆ ಎಂಬ ಕಲ್ಪನೆ ನಮ್ಮಲ್ಲಿದೆ. ಈ ಹೆಸರು ಹೇಳಿದ ತಕ್ಷಣ ನಮಗೆ ಅರ್ಧ ಮೀನಿನ ದೇಹ, ಅರ್ಧ ಸುಂದರಿಯ ದೇಹ ಕಣ್ಣೆದುರು ಸುಳಿಯುತ್ತದೆ.

ನಿಜವಾಗಿಯೂ ಮತ್ಸ್ಯ ಕನ್ಯೆಯನ್ನು ಕಂಡವರಿಲ್ಲ. ಇವೆಲ್ಲ ಬರೀ ನಮ್ಮ ಕಲ್ಪನೆಯ ಪರಿಧಿಯಲ್ಲಿ ಇರುವ ಅಂಶಗಳು. ಆದರೆ,ಕೆಲವೊಮ್ಮೆ ನಮ್ಮ ಕಲ್ಪನೆಯಲ್ಲಿರುವ ವಸ್ತುಗಳೇ ಧುತ್ತನೆ ಪ್ರತ್ಯಕ್ಷವಾಗಿ ನಮ್ಮನ್ನೇ ಒಂದು ಕ್ಷಣ ಆಶ್ಚರ್ಯ ಚಕಿತರನ್ನಾಗಿಸುತ್ತವೆ. ಸದ್ಯ ಚೀನಾದಲ್ಲಿ ಒಂದು ಮೀನು ತುಂಬಾ ಅಚ್ಚರಿಗೆ ಕಾರಣವಾಗಿದೆ. ಕಾರಣ, ಈ ಮೀನಿನ ಮುಖ ಮನುಷ್ಯನ ಮುಖವನ್ನು ಹೋಲುತ್ತಿದೆ.

ದಕ್ಷಿಣ ಚೀನಾದ ಕುನ್ಮಿಂಗ್ ನಗರದ ಪ್ರವಾಸಿ ತಾಣವಾದ ಮಿಯಾವೋ ಗ್ರಾಮಕ್ಕೆ ಪ್ರವಾಸಿಗರೊಬ್ಬರು ಹೋಗಿದ್ದ ಸಂದರ್ಭದಲ್ಲಿ ಈ ಮೀನು ಕ್ಯಾಮೆರಾಕ್ಕೆ ಸೆರೆಯಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೀನಿಗೆ ಮನುಷ್ಯರಂತೆ ಮೂಗು, ಕಿವಿ ಬಾಯಿ ಇದ್ದಂತೆ ಗೋಚರಿಸುತ್ತದೆ.

ಸದ್ಯ 15 ಸೆಕೆಂಡಿನ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಕೆಲವರು ಈ ಮೀನನ್ನು ಕಂಡು ಅಚ್ಚರಿಗೊಳಗಾಗಿದ್ದರೆ, ಇನ್ನು ಕೆಲವರು ಈ ಮೀನನ್ನು ತಿನ್ನುವ ಧೈರ್ಯ ಯಾರಿಗೆ ಬರಬಹುದು ಎಂದು ಪ್ರಶ್ನಿಸಿದ್ದಾರೆ. ಈ ಮೀನಿನ ವಿಡಿಯೋ ನೋಡಿದಾಗ ನಿಜಕ್ಕೂ ಒಂದು ಕ್ಷಣ ನಾವೆಲ್ಲಾ ಬೆರಗಾಗುತ್ತೇವೆ… ನಮ್ಮ ಪ್ರಕೃತಿಯಲ್ಲಿ ಇಂತಹ ಇನ್ನೆಷ್ಟು ವೈಚಿತ್ರ್ಯಗಳು ಅಡಗಿವೆಯೋ… ಆ ಪ್ರಕೃತಿ ಮಾತೆಗೇಗೊತ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ನಟಿ ಕಮ್ ರಾಜಕಾರಣಿ ರಮ್ಯಾ ಅವರಿಗೆ ಶಿಲ್ಪಾ ಗಣೇಶ್ ಅವರು ಕಾಲೆಳೆದಿದ್ದಾರೆ. ದೇಶಾದ್ಯಂತ ಬಿಜೆಪಿ ಭರ್ಜರಿ ಜಯ ಗಳಿಸಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾಗೆ ಶಿಲ್ಪಾ ಗಣೇಶ್ ಅವರು ಟ್ವೀಟ್ ಮಾಡಿ ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ…
ಮೈಸೂರು ಮಹಾರಾಜ ಯದುವೀರ ಪತ್ನಿ, ರಾಣಿ ತ್ರಿಷಿಕಾರವರಿಗೆ ಜನಿಸಿದ ಪುಟ್ಟ ರಾಜಕುಮಾರನಿಗೆ ಈಗ ನಾಮಕರಣದ ಸಂಭ್ರಮ.
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಅ.17ರಿಂದಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗುರುವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಒಟ್ಟು 13 ದಿನ ನಡೆಯಲಿದೆ. ಅಶ್ವೀಜಮಾಸದ ಮೊದಲ ಗುರುವಾರ ಮಧ್ಯಾಹ್ನ12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತ ಸಾಗರಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು…
‘ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈನಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಆದ ತಪ್ಪಿನಿಂದ ದೃಷ್ಟಿಕಳೆದುಕೊಂಡವರಿಗೆ ಸರ್ಕಾರ ತಲಾ 3 ಲಕ್ಷರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ. ಆದರೆಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥ…
ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…
ಮೂಲಂಗಿ ಕೆಲವರಿಗೆ ಹಿಡಿಸುವುದಿಲ್ಲ. ಮತ್ತೆ ಕೆಲವರು ಹಾಗೇ ಹಸಿ ಹಸಿ ತಿನ್ನುವುದನ್ನೇ ಇಷ್ಟ ಪಡುತ್ತಾರೆ. ನಿಜಕ್ಕೂ ಮೂಲಂಗಿ ಹಾಗೂ ಅದರ ಬೀಜ ದೇಹಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನ ತಿಳಿಯೋಣ. * ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ. * ಹೊಟ್ಟೆ ಉಬ್ಬರ, ಗ್ಯಾಸ್ ಹೆಚ್ಚಿದ್ದರೆ ಬಾರ್ಲಿಯನ್ನು ಬೇಯಿಸಿ ಅದಕ್ಕೆ…