ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.

ಹಿಗಿರುವಾಗ ಜರ್ಮನ್ ದೇಶದ ಮಹಿಳೆ ನಮ್ಮ ದೇಶದಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರ. ಹೌದು ನಮ್ಮ ದೇಶದಲ್ಲಿ ಪ್ರಕೃತಿಯ ತಾಣಗಳು ಹಾಗು ನಮ್ಮ ದೇಶದ ಸಂಸ್ಕೃತಿ ವೇಷ ಭೂಷಣಗಳು ಎಲ್ಲವು ಅದ್ಭುತವೇ ಅಂತಹ ಸೊಬಗನ್ನು ನೋಡಲು ವಿದೇಶಗಳಿಂದ ಪ್ರವಾಸಿಗರು ಬರುತ್ತಿರುತ್ತಾರೆ.

ಇದೆ ರೀತಿಯಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದಂತ ಫ್ರೈಡರೈಕ್ ಐರಿನಾ ಬ್ರುನಿಂಗ್ 59 ವರ್ಷದ ಈ ಮಹಿಳೆ ಜರ್ಮನಿಯವರು. ಇಂದು ಉತ್ತರ ಪ್ರದೇಶದ ಮಥುರಾದಲ್ಲಿ 1200 ಕ್ಕೂ ಹೆಚ್ಚು ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗು ಹಾಲು ಕೊಡದೆ ಇರುವಂತ ಹಸುಗಳನ್ನು ಹಾಗು ಅನಾರೋಗ್ಯದಿಂದ ಬಳಲುತ್ತಿರುವ ಗೋವುಗಳಿಗೆ ಇವರು ತಮ್ಮ ಆಶ್ರಮದಲ್ಲಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣವಾದ ಮೇಲೆ ಗೋ ಶಾಲೆಗಳಿಗೆ ಕಳಿಸುತ್ತಾರೆ.

MS ಬರ್ನಿಂಗ್ 35-40 ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಥುರಾದಲ್ಲಿರುವಾಗ ಒಂದು ಹಸುವನ್ನು ಸಾಕಲು ಖರೀದಿಸಿದ್ದರು, ನಂತರ ಜೀವನದಲ್ಲಿ ಬದಲಾವಣೆಯಾದಾಗ. ಈ ಸೇವೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಕೆಲ ಜನರು ಹಾಲು ಕೊಡದ ಹಸುವನ್ನು ಹಾಗು ಅನಾರೋಗ್ಯದಿಂದ ಬಳಲುವ ಹಸುವನ್ನು ತ್ಯಜಿಸುತ್ತಾರೆ. ಇವರು ಅಂತಹ ಹಸುಗಳನ್ನು ಗಮನಿಸಿದಾಗ ಈ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ.

ಈ ರೀತಿಯ ಹಸುಗಳಿಗೆ ತಮ್ಮ ಆಶ್ರಮದಲ್ಲಿ ಸಾಕಿ ಅವುಗಳನ್ನು ಚಿಕಿತ್ಸೆ ಕೊಟ್ಟು ನೋಡಿ ಕೊಳ್ಳುತ್ತಾರೆ. ಗುಣಮುಖವಾದ ನಂತರ ಹತ್ತಿರದ ಗೋಶಾಲೆಗಳಿಗೆ ಕಳಿಸುತ್ತಾರೆ. ಇವರು ೫೦-೬೦ ಜನರನ್ನು ಈ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಹಾಗು ಇದರ ಖರ್ಚು ತಿಂಗಳಿಗೆ 22ಲಕ್ಷ ರೂ. ಆದರೆ ಇದಕ್ಕೆ ನಮ್ಮ ಸ್ಥಳೀಯ ಯಾವ ಸಹಕಾರವು ಪಡೆಯುತ್ತಿಲ್ಲ.

ಇದುವರೆಗೂ ತಾವು ಸೇವೆ ಮಾಡಿದ ಹಸುಗಳ ಸಂಖ್ಯೆ 10000 ಕ್ಕೂ ಹೆಚ್ಚು ಆದರೆ ಇವರಲ್ಲಿ ಜಾಗದ ಕೊರತೆ ಇರುವ ಕಾರಣದಿಂದಾಗಿ ಎಲ್ಲ ಹಸುಗಳನ್ನು ಗೋಶಾಲೆಗೆ ತಲುಪಿಸಿದ್ದಾರೆ ಸದ್ಯಕ್ಕೆ ಇವರ ಹತ್ತಿರ ಚಿಕಿತ್ಸೆ ಪಡೆಯುತ್ತಿರುವ ಹಸುಗಳು 1200 ಗಳು. ಪ್ರವಾಸಾಕೆಂದು ಬಂದ ಇವರ ವೀಸಾ ತಾತ್ಕಾಲಿಕವಾದದ್ದು ಆಗಾಗಿ ಇವರು ಪ್ರತಿವರ್ಷ ನವೀಕರಣ ಮಾಡಿಸುತ್ತಾರೆ.

ಮತ್ತೊಂದು ವಿಷಯ ಎಲ್ಲರಿಗೂ ಅನಿಸುವಂತದ್ದು ಇದು ತಿಂಗಳಿಗೆ ೨೨ ಲಕ್ಷ ಖರ್ಚು ಬರುತ್ತಿದೆ ಅಂದರೆ ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಅನ್ನೋ ಪ್ರಶ್ನೆ. ಆದರೆ ಇದಕ್ಕೆ ವರು ಹೇಳುವ ಮಾತುಗಳು ನಮ್ಮ ಊರಿನಲ್ಲಿ ನನ್ನ ಅಸ್ತಿ ಹೆಚ್ಚಿದೆ ಹಾಗು ಬಾಡಿಗೆ ಪಡೆಯುತ್ತಿದ್ದೇನೆ ಅದರಿಂದ ಬರುವ ಹಣವನ್ನು ಈ ಸೇವೆಗೆ ಬಳಸುತ್ತಿದ್ದೇನೆ ಅಲ್ಲದೆ ನಮ್ಮ ತಂದೆಯವರು ನನಗೆ ಸಹಾಯ ಮಾಡುತ್ತಿದ್ದರು ಆದರೆ ಈಗ ಆವರಿಗೆ ವಯಸ್ಸಾಗಿದೆ ಅವರು ಹಿರಿಯ ನಾಗರೀಕರಾಗಿದ್ದಾರೆ ಎಂದು ಹೇಳುತ್ತಾರೆ.

ಅದೇನೇ ಇರಲಿ ನಿಜಕ್ಕೂ ಇವರ ಈ ಸೇವೆಗೆ ಮೆಚ್ಚಲೇ ಬೇಕು ಆ ಹಸುಗಳನ್ನು ಚಿಕಿತ್ಸೆ ಕೊಟ್ಟು ತಮ್ಮ ಸ್ವಂತ ಹಣದಲ್ಲಿ ಎಷ್ಟೊಂದು ದೊಡ್ಡ ಸೇವೆ ಮಾಡುತ್ತಿರುವುದು ಅದ್ಭುತವೇ ಅನ್ನಬಹುದು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಯೊಂದರ ಲಾಭ ಪಡೆದು ಮಧುರೈ ಮಹಿಳೆಯೊಬ್ಬಳು ಕೋಟ್ಯಾಧಿಪತಿಯಾಗಿದ್ದಾರೆ. ಅರುಲ್ಮೋಜಿ ಸರ್ವ್ನಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದ್ರಾ ಯೋಜನೆ ಲಾಭ ಪಡೆದು ತನ್ನದೇ ಸ್ವಂತ ವ್ಯಾಪಾರ ಶುರು ಮಾಡಿದ್ದಾರೆ. ಅರುಲ್ಮೋಜಿ ಕೇವಲ 234 ರೂಪಾಯಿಗೆ ವ್ಯಾಪಾರ ಶುರು ಮಾಡಿದ್ದರು. ಈಗ ಕಂಪನಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಪ್ರಧಾನ ಮಂತ್ರಿ ಕಚೇರಿಗೆ ಥರ್ಮೋಪ್ಲೆಕ್ಸ್ ಅವಶ್ಯಕತೆಯಿದೆ ಎಂಬುದು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ ನಿಂದ ಅರುಲ್ಮೋಜಿಗೆ ಗೊತ್ತಾಗಿದೆ. ತಕ್ಷಣ ಅರುಲ್ಮೋಜಿ ಈ ಬಗ್ಗೆ…
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದ ಐದು ಸಾವಿರ ಸೈಟ್ಗಳ ಹಂಚಿಕೆಗೆ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಮತ್ತೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ.
ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…
ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.
ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿರುವ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷಾ ಹಾಲ್ ನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮೆರಾ ನೋಡಿದ್ದೆವೆ. ಆದರೆ ಹಾವೇರಿಯ ನಗರದ ದನದ ಮಾರುಕಟ್ಟೆಯ ಎದುರಿಗಿರುವ ಭಗತ್ ಪಿಯುಸಿ ಕಾಲೇಜಿನಲ್ಲಿ ಮಕ್ಕಳು ಕಾಪಿ ಮಾಡಬಾರದು ಎಂದು ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿದ್ದಾರೆ. ಗುರುವಾರ ನಡೆದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ…
ಕನ್ನಡ ಚಿತ್ರರಂಗದ ದೊಡ್ಮನೆ ಅಣ್ಣಾವ್ರ ಮನೆಯಲ್ಲಿ ಮದುವೆ ಸಂಭ್ರಮ ನಡೆದಿದೆ. ಇದು ದೊಡ್ಮನೆಯ ಮೂರನೇ ತಲೆಮಾರಿನ ಮದುವೆಯಾಗಿದ್ದು, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಮಗ ಶಾನ್ (ಷಣ್ಮುಖ) ರ ಮದುವೆ ಮಾರ್ಚ್ 26 ರಂದು ಶಿವಮೊಗ್ಗದಲ್ಲಿ ನಡೆದಿದೆ. ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಬಿಮಾನಿಗಳು ಮದುವೆಗೆ ಬನ್ನಿ ಎಂದು ಎಲ್ಲರನ್ನೂ ಆಹ್ವಾನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ಮದುವೆ…