ಗ್ಯಾಜೆಟ್

ಈಗ ಬರುತ್ತಿದೆ jio DTH ಬೇರೆ DTH ಸರ್ವಿಸ್ ಗಳಿಗೆ ಶುರುವಾಗಿದೆ ಭಯ..!ತಿಳಿಯಲು ಈ ಲೇಖನ ಓದಿ…

1295

ಜಿಯೋ ಸೆಟ್‌ ಟಾಪ್‌ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್‌ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗ‌ಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗ‌ಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.

ದೂರವಾಣಿ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದ Jio ಈಗ ಭಾರತೀಯ DTH ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬರುತ್ತಿದೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಜಿಯೋ ಡಿಟಿಎಚ್‌ ಸೆಟಪ್‌ ಬಾಕ್ಸ್‌ಗಳು ಈಗಾಗಲೇ ಸಿದ್ದವಾಗಿ ಕುಳಿತಿವೆ. ಅಂತೆಯೇ ರಿಲಯನ್ಸ್‌ ಜಿಯೋ ಕಂಪೆನಿ ಈ ಎಪ್ರಿಲ್‌ ತಿಂಗಳಲ್ಲೇ ಡಿಜಿಟಲ್‌ ಸ್ಯಾಟಲೈಟ್‌ ಸೇವಾಕ್ಷೇತ್ರಕ್ಕೆ ಇಳಿಯುವುದು ಸ್ಪಷ್ಟವಾಗತೊಡಗಿದೆ.

ಬ್ರಾಡ್ಬ್ಯಾಂಡ್ ಸೇವೆಗೆ Jio.?

ಜಿಯೋ ಡಿಟಿಎಚ್‌ ಸೆಟಪ್‌ ಬಾಕ್ಸ್‌ ಜಿಯೋ ಬ್ರಾಡ್‌ಬ್ಯಾಂಡ್‌ ಸಂಪರ್ಕ ಮೂಲಕ ಚಾಲನೆಗೊಳ್ಳುತ್ತದೆ ಮತ್ತು ಇದಕ್ಕೆ 1 ಜಿಬಿಪಿಎಸ್‌ ವರೆಗೆ ಸ್ಟ್ರೀಮಿಂಗ್‌ ಸ್ಪೀಡ್‌ ಇರುತ್ತದೆ.

ತಿಂಗಳ ಶುಲ್ಕವೇಷ್ಟು

ಬಲ್ಲ ಮೂಲಗಳ ಪ್ರಕಾರ ಮೊದಲ ೩ ತಿಂಗಳು ಅಂದರೆ ೯೦ ದಿನಗಳು ಯಾವುದೇ ರೀತಿಯಲ್ಲಿ ಶುಲ್ಕವಿರುವುದಿಲ್ಲ ಅಂದರೆ ಮೊದಲ ೩ ತಿಂಗಳು ಜಿಯೊ ಸೇವೆ ಸಂಪೂರ್ಣ ಉಚಿತವಾಗಿರಲಿದೆ! ೩ ತಿಂಗಳ ನಂತರ ಪ್ರತೀ ತಿಂಗಳು ಕನಿಷ್ಠ ೧೮೦ ಪಾವತಿಸಿದರೆ ಬೇಸಿಕ್ ಪ್ಲಾನ್ ಸಿಗಲಿದೆ.

ಬೇರೆ DTH  ಸೇವೆಗಳಿಗೆ ನಡುಕ..!

ಕಳೆದ ೬ ತಿಂಗಳಿನಿಂದ ಅಕ್ಷರಶಃ ದೂರಸಂಪರ್ಕ ಕ್ಷೇತ್ರವನ್ನು ಆಳುತ್ತಿರುವ jio ಈಗ DTH  ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಬೇರೆ ಡಿಜಿಟಲ್‌ ಸ್ಯಾಟಲೈಟ್‌ ಸೇವಾರಂಗವನ್ನು (ಡಿಟಿಎಚ್‌) ಎಲ್ಲಿಲ್ಲದಂತೆ ಯೋಚನೆಗೆ ದೂಡಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ