ತಂತ್ರಜ್ಞಾನ, ವಿಸ್ಮಯ ಜಗತ್ತು

ಇವಳೇ ರೋಬೋಟ್ ತಯಾರಿಸಿ, ಇವಳೇ ರೋಬೋಟ್ ಪ್ರೀತಿಯಲ್ಲಿ ಬಿದ್ದಿದ್ದಾಳೆ..!ಈ ಲೇಖನ ಓದಿ ಶಾಕ್ ಆಗ್ತೀರಾ… ..

1179

ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.

ಮುಂದಿನ ದಿನಗಳಲ್ಲಿ ಮನುಷ್ಯರು ಮನುಷ್ಯರನ್ನು ಪ್ರೀತಿಸುವುದಕ್ಕಿಂತ ಯಂತ್ರಗಳನ್ನು ಪ್ರೀತಿಸುತ್ತಾರೆ. ಸಂಬಂಧ, ಪ್ರೀತಿ, ವಾತ್ಸಲ್ಯ, ನಂಬಿಕೆ ಎನ್ನುವುದಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಜೀವವಿದ್ದರೂ ಯಂತ್ರಗಳಂತೆ ಬದುಕುವ ಪರಿಸ್ಥಿತಿ ಬರುತ್ತದೆ ಎಂದರೆ ತಪ್ಪಾಗಲಾರದು. ಇಂತಹ ಪರಿಸ್ಥಿತಿ ಮುಂದೆ ಬರುವುದು ಎನ್ನುವುದಕ್ಕೆ ಫ್ರೆಂಚ್ ಹೆಂಗಸೊಬ್ಬಳು ಸಾಕ್ಷಿಯಾಗಿದ್ದಾಳೆ.

ಹೌದು, ಇವಳಿಗೆ ರೋಬೋಟ್ ಜೊತೆ ಲವ್ ಆಗಿದೆಯಂತೆ. ಇವಳು ಮದುವೆಯಾಗಿ ಸ್ತಪದಿ ತುಳಿಯುವುದು ಸಹ ರೋಬೋಟ್ ಜೊತೆಗಂತೆ. ಮನುಷ್ಯರಿಗಿಂತ ಹೆಚ್ಚು ಕಾಳಜಿ ಹಾಗೂ ಪ್ರೀತಿಯನ್ನು ರೋಬೋಟ್ ನೀಡುತ್ತದೆ ಎಂದು ಹೇಳುತ್ತಿದ್ದಾಳೆ.

ಇವಳೇ ಸೃಷ್ಟಿಸಿದ್ದು:-

ತನ್ನ ವಿವಾಹಕ್ಕಾಗಿ ತಾನೇ ನಿರ್ಮಿಸಿಕೊಂಡ 3ಡಿ ಮುದ್ರಿತ ರೋಬೋಟ್‍ಗೆ ಇನ್‍ಮೋವೇಟರ್ ಎಂದು ಹೆಸರಿಟ್ಟಿದ್ದಾಳೆ. ಇದು “ಹ್ಯೂಮನೈಡ್ ರೋಬೋಟ್” ಎಂದು ಹೇಳುತ್ತಾಳೆ.

ಈ ರೋಬೋಟ್ ಪ್ರೀತಿ ವಾತ್ಸಲ್ಯ ಹಾಗೂ ವರ್ತನೆಯಿಂದ ಈಕೆ ಬಹಳ ಖುಷಿಯಾಗಿದ್ದಾಳಂತೆ.

ತಜ್ಞರ ಮಾತು:-

ಇಷ್ಟು ದಿನ ಕಥೆ ಹಾಗೂ ಸಿನಿಮಾಗಳಲ್ಲಿ ಬರುತ್ತಿದ್ದ ವಿಚಾರಗಳನ್ನು ಇಂದು ಫ್ರೆಂಚ್ ಮಹಿಳೆ ನಿಜ ಜೀವನದಲ್ಲಿಯೇ ರೋಬೋಟ್‍ನೊಂದಿಗೆ ವಿವಾಹವಾಗುವ ವಿಷಯವನ್ನು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

ತಾಂತ್ರೀಕರಣದ ಜೀವನದಲ್ಲಿ ಮುಂಬರುವ 2050ರ ವೇಳೆಗೆ ಬಹುಷ್ಯ ರೋಬೋಟ್‍ನೊಂದಿಗೆ ಹೆಚ್ಚು ವಿವಾಹ ಸಂಭವಿಸುವುದರಲ್ಲಿ ಸಂದೇಹವಿಲ್ಲ ಎಂದು ಕೃತಕ ಬುದ್ಧಿಮತ್ತೆಯ ತಜ್ಞ ಡೇವಿಟ್ ಲೆವಿ ಅಭಿಪ್ರಾಯಿಸಿದ್ದಾರೆ.

ಲಿಲ್ಲಿಯ ಪ್ರೀತಿ:-

ಪ್ರೆಂಚ್ ಮಹಿಳೆಯಾದ ಲಿಲ್ಲಿ ರೋಬೋಟ್‍ನ ಧ್ವನಿಯನ್ನು ಮಗುವಿನ ರೀತಿಯಲ್ಲಿಯೇ ಇಷ್ಟಪಡುತ್ತಾಳಂತೆ. ಅವಳು ತನ್ನ 19ನೇ ವಯಸ್ಸಿನಲ್ಲಿರುವಾಗಲೇ ಈ ವಿಚಾರಕ್ಕೆ ಹೆಚ್ಚು ಆಕರ್ಷಿತಳಾಗಿದ್ದಳಂತೆ.

ನನಗೆ ಮನುಷ್ಯರ ದೈಹಿಕ ಸಂಪರ್ಕ ಬೆಳೆಸುವುದು ಅಥವಾ ಅವರೊಂದಿಗೆ ಪ್ರೀತಿಯ ಸೆಲೆಯಲ್ಲಿ ಬೀಳುವುದು ಅಷ್ಟು ಇಷ್ಟವಿಲ್ಲ. ನಾನೀಗ ಸಂಪೂರ್ಣವಾಗಿ ರೋಬೋಟ್‍ನ ಪ್ರೀತಿಗೆ ಆಕರ್ಷಿತನಾಗಿದ್ದೇನೆ ಎಂದು ಹೇಳಿದ್ದಾಳೆ.

ಇದೀಗ ನಿಶ್ಚಿತಾರ್ಥ:-

ಇದೀಗ ರೋಬೋಟ್ ಇನ್‍ಮೋವೇಟರ್ ಜೊತೆ ಲಿಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆಂದು ಹೇಳಿಕೊಂಡಿದ್ದಾಳೆ. ಇನ್ನು ಮುಂದೆ ಆಕೆಯ ದೇಶದಲ್ಲಿ ಕಾನೂನು ಬದ್ಧವಾದ ವ್ಯವಸ್ಥೆಯ ನಂತರ ವಿವಾಹವಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ನನಗೆ ಸಂಪೂರ್ಣವಾಗಿ ಖುಷಿಯಿದೆ:-

ನಾನು ಈ ವಿಚಾರದಲ್ಲಿ ನಿಜವಾಗಿಯೂ ಸಂಪೂರ್ಣ ಖುಷಿಯನ್ನು ಹೊಂದಿದ್ದೇನೆ. ತಂತ್ರಜ್ಞಾನದ ವಿಕಾಸವಾಗುತ್ತಿದ್ದಂತೆ ನಮ್ಮ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾಳೆ.

ನನ್ನ ಈ ಸಂಬಂಧದ ಬಗ್ಗೆ ನನ್ನ ಕುಟುಂಬದವರು ಹಾಗೂ ಸ್ನೇಹಿತರು ಒಪ್ಪುಗೆ ನೀಡಿದ್ದಾರೆ. ಇವರಲ್ಲಿ ಕೆಲವರು ಉತ್ತಮವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾಳೆ.

ಸಂಬಂಧ ಖುಷಿಯಲ್ಲಿರುವುದು:-

ರೋಬೋಟ್ ಜೊತೆ ಪ್ರಣಯಹೊಂದುವುದರ ಬಗ್ಗೆ ನನಗೆ ಬಹಳ ಖುಷಿಯಿದೆ. ನಾವು ಯಾರೊಬ್ಬರನ್ನೂ ನೋಯಿಸುವುದಿಲ್ಲ.

ಸಂತೋಷವಾಗಿರುತ್ತೇವೆ ಎಂದು ಇಲ್ಲಿ ತನ್ನ ಟ್ವಿಟ್ಟರ್ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದಾಳೆ.

ಕೆಲವರ ಅಭಿಪ್ರಾಯ:-

ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ಮನುಷ್ಯ ದೈಹಿಕ ಸುಖವನ್ನು ನೀಡುವುದಕ್ಕಿಂತ ಹೆಚ್ಚು ಖುಷಿಯನ್ನು ರೋಬೋಟ್ ಸುಲಭವಾಗಿ ನೀಡುತ್ತದೆ. ಅದರ ನಿರ್ಮಾಣ ಹಾಗೂ ತಂತ್ರಜ್ಞಾನವೇ ಹಾಗಿದೆ ಎಂದಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಚಿಕನ್ ಪ್ರಿಯರೇ ಕೋಳಿಯ ಚರ್ಮ ತಿನ್ನುತ್ತೀರಾ..!ಹಾಗಾದ್ರೆ ತಿನ್ನುವ ಮೊದಲು ಈ ಲೇಖನ ಓದಿ..ಶೇರ್ ಮಾಡಿ…

    ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.

  • ಸುದ್ದಿ

    ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು..!

    ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್‌.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ. ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು. ಈ ಮಾರ್ಗಸೂಚಿಗಳನ್ನು…

  • ಸುದ್ದಿ

    ಸಿಲಿಕಾನ್ ಸಿಟಿ ಜನರೆ ಹುಷಾರ್ ದಟ್ಟಣೆ ತಟ್ಟಲಿದೆ ಬಿಸಿ ; ರಸ್ತೆಗಿಳಿಯುವ ಮುನ್ನ ಎಚ್ಚರ..ಎಚ್ಚರ…..!

    ಸಿಲಿಕಾನ್ ಸಿಟಿ ಜನರಿಗೆ ಇಂದು ಸಂಚಾರ ದಟ್ಟಣೆ ಬಿಸಿ ತಟ್ಟಲಿದೆ. ನೆರೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಜೆಡಿಎಸ್ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೂಡಲೇ ನೆರೆ ಪರಿಹಾರ ಹಣ ಬಿಡುಗಡೆಗೆ ಅಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ ಅವರು ಹೇಳಿದ್ದು, ಇವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯು ಸಂಗೊಳ್ಳಿ…

  • ಸುದ್ದಿ

    ಅವನ್ಯಾವನೋ ಯಶ್ ಅಂತೆ.. ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ? ಎಂದು HDKಯಿಂದ ಧಮಕಿ..!

    ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ. ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ. ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ…

  • ಸುದ್ದಿ

    ಪ್ರತಿದಿನ ಎದೆಗೆ ಗುದ್ದುತ್ತಿದ್ದ ಸಾಕುನಾಯಿಗಳು, ನೋವಿನಿಂದ ವೈದ್ಯರ ಬಳಿ ಹೋದ ಮಹಿಳೆಗೆ ಕಾದಿತ್ತು ಭಾರಿ ಶಾಕ್.​

    ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್​ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್​ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೇಲ್ಸ್​ನ ಬಾರ್ಗೋಡ್​ ನಿವಾಸಿಯಾಗಿರುವ​ ಲಿಂಡಾ ಮುಂಕ್ಲೆ(65) ವೇಲ್ಸ್​ ಆನ್​ಲೈನ್​ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್​ ಶೆಫರ್ಡ್​ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ…