ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಕ್ಷಿಣ ಭಾರತದ ಪ್ರಮುಖ ಬ್ರೇಕ್ಫಾಸ್ಟ್ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.
ವೆಜಿಟೇಬಲ್ ಇಡ್ಲಿ:-

ಸಾದಾ ಇಡ್ಲಿಗಿಂತ ಭಿನ್ನವಾಗಿರುವ ವೆಜಿಟೇಬಲ್ ಇಡ್ಲಿ ಮಕ್ಕಳಿಗೆ ಹೇಳಿ ಮಾಡಿಸಿದ ವೆರೈಟಿ. ಇಡ್ಲಿ ಹಿಟ್ಟಿಗೆ ಕ್ಯಾರೆಟ್ ತುರಿ, ಬಟಾಣಿ, ಬೀನ್ಸ್ ತುಣುಕು ಇತ್ಯಾದಿಗಳನ್ನು ಹಾಕಿ ಇದನ್ನು ಮಾಡಲಾಗುತ್ತದೆ.
ಸ್ಟಫ್ಡ್ ಇಡ್ಲಿ:-

ವಿವಿಧ ತರಕಾರಿಗಳು, ಮೊಳಕೆ ಬಂದ ಕಾಳುಗಳ ಸ್ಟಫ್ಫಿಂಗ್ ಮಾಡಿ ಬೇಯಿಸಲಾಗುವ ಈ ಇಡ್ಲಿ ಬೆಳಗ್ಗಿನ ಬ್ರೇಕ್ಫಾಸ್ಟ್ಗೆ ಬೆಸ್ಟ್. ಇದರ ಹೂರಣಕ್ಕೆ ಮೊಳಕೆ ಬಂದ ಕಾಳುಗಳು, ಶುಂಠಿ ತುರಿ, ಪುದೀನ ಎಲೆ, ಹಸಿ ಮೆಣಸಿನಕಾಯಿ ಚಟ್ನಿ ಇತ್ಯಾದಿಗಳನ್ನು ಬಳಸುತ್ತಾರೆ.
ಅಕ್ಕಿ-ಹೆಸರುಬೇಳೆ ಇಡ್ಲಿ:-
ಉದ್ದಿನಬೇಳೆಯಿಂದ ಮಾಡಿದ ಇಡ್ಲಿಗಿಂತ ಸ್ವಲ್ಪ ಭಿನ್ನ ರುಚಿ ಹೊಂದಿರುವ ಈ ಇಡ್ಲಿಯನ್ನು ಅಕ್ಕಿ ಮತ್ತು ಹೆಸರುಬೇಳೆ ಹಾಕಿ ಮಾಡುತ್ತಾರೆ. ಇಧರ ಹಿಟ್ಟಿಗೆ ಕ್ಯಾರೆಟ್ ತುರಿ, ಸ್ಟ್ರಿಂಗ್ ಆನಿಯನ್ ಮುಂತಾದ ತರಕಾರಿಗಳನ್ನೂ ಹಾಕುತ್ತಾರೆ. ಹೆಸರುಬೇಳೆ ಹಾಕಿದ ಕಾರಣ ಬಣ್ಣವೂ ಕೊಂಚ ಹಳದಿಯಾಗಿರುತ್ತದೆ.
ರವೆ ಇಡ್ಲಿ:-

ಅಕ್ಕಿ ಇಡ್ಲಿಯನ್ನು ಇಷ್ಟಪಡದವರಿಗೆ ರವೆ ಇಡ್ಲಿ ಬೆಸ್ಟ್. ಇದನ್ನು ತುಂಬಾ ಸುಲಭವಾಗಿ ತಯಾರಿಸಬಹುದು. ಮೈಕ್ರೊವೇವ್ನಲ್ಲಿಟ್ಟು ಕೂಡಾ ಮಾಡಬಹುದು.
ಪೆಪ್ಪರ್ ಇಡ್ಲಿ:-

ಸಣ್ಣ ಸಣ್ಣ ಬಟನ್ ಇಡ್ಲಿಗಳನ್ನು ಅಥವಾ ಇಡ್ಲಿಯ ತುಣುಕುಗಳನ್ನು ಕಾಳುಮೆಣಸಿನ ಪುಡಿ, ಈರುಳ್ಳಿ, ಟೊಮೇಟೊ ಒಗ್ಗರಣೆಗೆ ಹಾಕಿ ಮಾಡಿದ ಈ ಇಡ್ಲಿ ರುಚಿಯಲ್ಲಿ ಕೊಂಚ ಖಾರವಿರುತ್ತದೆ. ಸಪ್ಪೆ ಇಡ್ಲಿ ಇಷ್ಟವಿಲ್ಲದವರು ಪೆಪ್ಪರ್ ಇಡ್ಲಿಯನ್ನು ಟ್ರೈ ಮಾಡಬಹುದು.
ಓಟ್ಸ್ ಇಡ್ಲಿ:-

ಈಗಿನ ಫಿಟ್ನೆಸ್ ಫ್ರೀಕ್ ಪೀಳಿಗೆಗೆ ಇಷ್ಟವಾಗುವ ಇಡ್ಲಿ ವೆರೈಟಿಯಿದು. ಅಕ್ಕಿ ಮತ್ತು ಉದ್ದು ಹಾಕಿದ ಇಡ್ಲಿ ತಿಂದರೆ ದೇಹ ತೂಕ ಹೆಚ್ಚುತ್ತದೆ ಎನ್ನುವವರು ಓಟ್ಸ್ ಇಡ್ಲಿಯತ್ತ ಮುಖ ಮಾಡುತ್ತಿದ್ದಾರೆ. ಇದು ಆರೋಗ್ಯಕ್ಕೂ ಒಳ್ಳೆಯದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರೈತ ನಾಯಕ ,ಶಾಸಕ ಕೆ ಎಸ್ ಪುಟ್ಟಣ್ಣಯ್ಯ (69) ಹೃದಯಾಘಾಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಡಣ್ಣಾಯಕನಪುರ ಎಂಬ ಗ್ರಾಮ ಈ ಒಂದು ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಮಗು ತೊಟ್ಟಿಲಿನಲ್ಲಿ ಅಳುತ್ತಿದ್ದ ಸಮಯದಲ್ಲಿ ಮನೆಯೊಳಗೆ ಬರುವ ಈ ಬಸಪ್ಪ ಎಂಬ ಎತ್ತು ತೊಟ್ಟಿಲನ್ನು ತೂಗಿ ಮಗುವನ್ನು ಮಲಗಿಸಿದೆ. ಜೊತೆಗೆ ತನ್ನ ಕೊಂಬಿನಲ್ಲಿ ಕಟ್ಟಿದ್ದ ನೋಟಿನ ಕಂತೆಯನ್ನು ತೊಟ್ಟಿಲಿಗೆ ಬೀಳಿಸಿದೆ. ಇದನ್ನು ನೋಡಿದ ಜನತೆ ಇದು ದೈವ ಸ್ವರೂಪಿ ಬಸವಣ್ಣನ ಪವಾಡ ಎಂದರು. ಈ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮನಗರದ ಕವಾಣಪುರ ಗ್ರಾಮದಲ್ಲಿ ನೂರಾರು ವರ್ಷಗಳ…
ಮತ್ತೆ ನಮ್ಮ ಗಣೇಶ ಬಂದ. ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬುಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ನಮ್ಮ ಭಾರತೀಯ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸ್ತೋತ್ರ ಮತ್ತು ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ.
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…