ಸಿನಿಮಾ

“ಆಂಧ್ರ”ದಲ್ಲೂ “ಸುದೀಪ್‌ರ ಫ್ಯಾನ್ಸ್‌ ಕ್ಲಬ್‌” !!!

757

ನಟ “ಸುದೀಪ್‌”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ  ಟ್ವಿಟ್ಟರ್‌. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್‌ರವರು ಟ್ವಿಟ್ಟರ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನೊಂದು ಪ್ರಮುಖ ವಿಷಯವೇನೆಂದರೆ, ಸುದೀಪ್‌ಗೆ ಈಗ ಹೈದರಾಬಾದ್‌ನಲ್ಲೂ “ಅಭಿಮಾನಿ  ಸಂಘ” ಪ್ರಾರಂಭವಾಗಿದೆ.

ಸುದೀಪ್‌ ಈಗ ಕನ್ನಡದ ನಟ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ  ಚಿತ್ರರಂಗದಲ್ಲೂ ಅವರು ಹೆಸರುವಾಸಿಯಾಗಿದ್ದಾರೆ. “ಈಗ” ಚಿತ್ರದ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಅವರ ಅಭಿನಯಕ್ಕೆ ಆಂಧ್ರದಲ್ಲೂ ಜನ ಕೂಡ  ಅವರ ನಟನೆಗೆ ಮನಸೋತಿದ್ದಾರೆ.

ಹಾಗಾಗಿ ಈಗ ಅಲ್ಲೂ “ಸುದೀಪ್‌ರ ಫ್ಯಾನ್ಸ್‌ ಕ್ಲಬ್‌” ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಕನ್ನಡದ ಇನ್ನೊಬ್ಬ ನಟ ಪರಭಾಷೆಯಲ್ಲಿ ಗುರುತಿಸಿಕೊಂಡಂತಾಗಿದೆ. ನಟ ದರ್ಶನ್‌ರಿಗೂ ಅಲ್ಲಿ ಫ್ಯಾನ್ಸ್‌ ಇದ್ದಾರೆ. ಇಲ್ಲಿ ಓದಿ :-ಸುದೀಪ್ ಹೇರ್ ಸ್ಟೈಲ್ ಕಾಪಿ ಮಾಡಿದ ಬಾಲಿವುಡ್ ನಟ !!!

ಸುದೀಪ್‌ರ ತೆಲುಗು ಫ್ಯಾನ್ಸ್‌ ಫೇಸ್‌ ಬುಕ್‌ ಮತ್ತು ಟ್ವಿಟ್ಟರ್‌ ಖಾತೆ ತೆರೆದಿದ್ದಾರೆ. ಅದರಲ್ಲಿ ಸುದೀಪ್‌ರ ಫೋಟೋಗಳು ರಾರಾಜಿಸುತ್ತಿವೆ.

ಟ್ವಿಟ್ಟರ್‌ನಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಇನ್ನೊಂದು ವಿಶೇಷ. ತಮಗೆ ಟ್ವೀಟ್‌ ಮಾಡುವ ಎಲ್ಲರಿಗೂ ಸುದೀಪ್‌ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇವರನ್ನು ಹೊರತು ಪಡಿಸಿದರೆ ನಟ ಜಗ್ಗೇಶ್‌ ಟ್ವಿಟ್ಟರ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಸ್ಟಾರ್‌ ನಟರಾರ‍ಯರೂ ಸಾಮಾಜಿಕ ಜಾಲ ತಾಣವನ್ನು ಅಷ್ಟಾಗಿ ಬಳಸುತ್ತಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಏಪ್ರಿಲ್ ನಲ್ಲಿ ಹುಟ್ಟಿದ ತಿಂಗಳು ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ ನೋಡಿ!

    ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಗುಣಗಳು ಯಾವುದು. ಹಾಗೇ ಅವರು ಯಾವ ಗುಣಗಳಿಂದಾಗಿ ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು ಅಂತ ತಿಳಿಯೋಣ. * ಈ ತಿಂಗಳಲ್ಲಿ ಹುಟ್ಟಿರುವ ಜನರು ತುಂಬಾ ಸ್ವತಂತ್ರರಾಗಿರುವರು. ಈ ವ್ಯಕ್ತಿಗಳು ಯಾವುದಾದರೂ ಉದ್ಯಮವನ್ನು ಆರಂಭಿಸುವರು ಮತ್ತು ಅದರಲ್ಲಿ ಇವರು ಉನ್ನತಿ ಪಡೆಯುವರು. * ಇವರು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಲ್ಲಿ ಇರುವಂತಹ ಆಕರ್ಷಣೀಯ ಗುಣವು ಬೇರೆಯವರನ್ನು ಆಕರ್ಷಣೆ ಮಾಡುವುದು. * ಹಣ ಸಂಪಾದನೆ ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ತಮ್ಮ…

  • ಆರೋಗ್ಯ

    ಹುಳುಕು ಹಲ್ಲಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು.

    ಹುಳುಕು ಹಲ್ಲಿನ ಸಮಸ್ಯೆ ದೊಡ್ಡೋರಿಂದ ಚಿಕ್ಕವರವರೆಗೆ ಇದ್ದೆ ಇರುತ್ತದೆ ಈ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಮನೆಯಲ್ಲಿಯೇ ಇದೆ ಮನೆಮದ್ದು ಇದನ್ನು ಹೇಗೆ ಬಳಸಿ ಇದರ ಅನುಕೂಲತೆಯನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಇಲ್ಲಿ ನೋಡಿ. ಇತ್ತೀಚಿಗೆ ಮಕ್ಕಳು ಹೆಚ್ಚು ಸಿಹಿ ತಿನ್ನೋದು ಅಥವಾ ಚಾಕೊಲೇಟ್ ತಿನ್ನುವುದು ಅಭ್ಯಾಸವಾಗಿದೆ. ಅದನ್ನು ತಿನ್ನುವುದು ಹೆಚ್ಚಾದಂತೆ ಹಲ್ಲುಗಳು ಕೂಡ ಹುಳುಕು ಆಗುತ್ತವೆ. ಆದ್ದರಿಂದ ಕೆಲಸಂದರ್ಭದಲ್ಲಿ ನಾವು ಹಲ್ಲನ್ನೇ ತೆಗೆಸಿ ಬಿಡುತ್ತೇವೆ. ಆದ್ದರಿಂದ ಅದಕ್ಕಿಂತ ನಿಮ್ಮ ಮನೆಯಲ್ಲಿ ಇವೆ ಈ ಸಮಸ್ಯೆಗೆ ಮದ್ದು….

  • ಸುದ್ದಿ

    ಅತಿ ಚಿಕ್ಕ ಪಕ್ಷಿ ಎಂದಾದರೂ ನೋಡಿದೀರಾ ಹಾಗಾದರೆ, ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ.

    ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್‌ ಬರ್ಡ್‌ ಎಂದು ಹೇಳಲಾಗಿದೆ. ‘ಬ್ಯಾನ್‌ ಬಾಯ್‌ ಸಹೀದ್‌’ ಎನ್ನುವ ಫೇಸ್‌ಬುಕ್‌ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್‌ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್‌ ಬರ್ಡ್‌. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್‌ ಆಗುತ್ತಿದ್ದು 15000 ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. ಆದರೆ ನಿಜಕ್ಕೂ ಇದು…

  • ಆಧ್ಯಾತ್ಮ

    ಗರುಡ ಪುರಾಣದ ಪ್ರಕಾರ ಈ ಮೂರನ್ನು ಬಿಟ್ಟರೆ???ನಿಮ್ಮ ಜೀವನ ಪಕ್ಕಾ ಸುಖಮಯ….

    ನಮ್ಮ ಈ ಜೀವನದಲ್ಲಿ ಸುಖವಾಗಿರಬೇಕೆಂಬುದು ಎಲ್ಲರ ಮಹದಾಸೆ. ತಾವು ಹಾಯಾಗಿ ಜೀವನ ಕಳೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ದಿನನಿತ್ಯ ಬೆಳಗ್ಗೆ ಎದ್ದ ಕೂಡಲೆ ನಮ್ಮ ಜೀವನ ಶುರುವಾಗುತ್ತದೆ, ಎದ್ದೆನೋ ಬಿದ್ದೆನೋ ಎಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ. ಇನ್ನೇನೋ ಪಡೆಯಬೇಕೆಂಬ ಹೋರಾಟ.

  • ವಿಚಿತ್ರ ಆದರೂ ಸತ್ಯ

    ನಾಯಿಗಳು ಕಾಲನ್ನು ಮೇಲೆತ್ತಿ ವಾಹನಗಳ ಟೈರುಗಳ ಮೇಲೆ ಮೂತ್ರವಿಸರ್ಜನೆ ಮಾಡುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ …

    ಮನುಷ್ಯರು ಟಾಯ್ಲೆಟ್ ನಲ್ಲಿ ಮೂತ್ರ ಮಾಡುತ್ತಾರೆ. ಆದರೆ ಪ್ರಾಣಿಗಳು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತದೆ. ಅದರಲ್ಲೂ ನಾಯಿಗಳು ವಾಹನಗಳ ಚಕ್ರಕ್ಕೆ ಅಥವಾ ಮರಕ್ಕೆ ತಾಗಿ ಮೂತ್ರ ಮಾಡುತ್ತದೆ. ಆದರೆ ಅದ್ಯಾಕೆ ಅನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

  • ಸುದ್ದಿ

    ಗ್ರಾಹಕರಿಗೊಂದು ಸಿಹಿ ಸುದ್ದಿ ನಿಡಿದ SBI ಬ್ಯಾಂಕ್….!

    ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಬದಲಾವಣೆಯಗಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು, ಆಗಸ್ಟ್ 1ರಿಂದ ಹಲವಾರು ನಿಯಮಗಳು ಬದಲಾವಣೆಯಾಗಲಿವೆ. ಬ್ಯಾಂಕ್‌ನಲ್ಲಿ ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್‌ಟಿ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇದು ಸಿಹಿಸುದ್ದಿ. ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ಹಣ ವರ್ಗಾವಣೆ ಶುಲ್ಕವನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದ ಬೆನ್ನಲ್ಲೇ, ಎಸ್‌ಬಿಐ ಜು.1ರಿಂದ ಅನ್ವಯವಾಗುವಂತೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.ಬ್ಯಾಂಕ್‌ನಲ್ಲಿ ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್‌ಟಿ ಮೂಲಕ…