ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ.
ಅಹಮದಾಬಾದ್ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ.
ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ ಮೇಲ್ಮೈಗೆಸಗಣಿ ಸಾರಿಸಿದ್ದಾರೆ. ರೂಪೇಶ್ ಗುರಂಗದಾಸ್ ಎಂಬುವವರು ಈ ಕಾರಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು “ನಾನು ನೋಡಿದ ಸಗಣಿಯ ಉತ್ತಮ ಬಳಕೆ’ ಎಂದು ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿರುವ ಅವರು, ಕಾರನ್ನು ತಂಪಾಗಿಸಲು ಕಂಡುಕೊಂಡಿರುವ ಉತ್ತಮ ಪ್ರಯತ್ನ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಆಕೆಯ ಚಾಲಾಕಿತನವನ್ನು ಹೊಗಳಿ ಪ್ರಶಂಸೆಯ ಸುರಿಮಳೆಯಮನ್ನೇ ಹರಿಸಿದ್ದಾರೆ. ಭಾರತದಲ್ಲಿ ಸಗಣಿಯನ್ನು ಮನೆಯ ಗೋಡೆ, ಮಹಡಿಗಳಿಗೆ ಹಚ್ಚುವುದು ಸಾಮಾನ್ಯ. ಸಗಣಿಯ ಬೆರಣಿಯನ್ನು ಉರುವಲಾಗಿ ಹಾಗೂ ಔಷಧವಾಗಿ ಬಳಸಲಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೋಗ ಜಲಪಾತದ ನೆತ್ತಿ ಪ್ರದೇಶದ ಜಲಪಾತಕ್ಕೆ ಧುಮುಕಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಇದ್ದದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.
ಐಎಂಎ ಜ್ಯುವೆಲ್ಲರ್ಸ್ ನಿಂದ ಮೋಸಕ್ಕೊಳಗಾಗಿರುವವರ ಕಂಪ್ಲೆಂಟ್ ಸಂಖ್ಯೆ 11 ಸಾವಿರಕ್ಕೇರಿದೆ. ಶಿವಾಜಿನಗರ ಸಮದ್ ಹೌಸ್ ಚೌಟ್ರಿಯಲ್ಲಿ ಬಂಡಲ್ ಬಂಡಲ್‍ಗಟ್ಟೆ ಕಂಪ್ಲೆಂಟ್‍ಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ. ಎಸ್‍ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಸಲೀಂ ನೇಮಕ ಬಹುತೇಕ ಖಚಿತ ಅಂತ ತಿಳಿದು ಬಂದಿದೆ. ಮುಸ್ಲಿಂ ಸಮುದಾಯದವರೇ ಆಗಿರುವ ಸಲೀಂ ನಿಯೋಜಿಸಿದ್ರೆ ಉತ್ತಮ, ತನಿಖೆಗೆ ಸಹಕಾರಿಯಾಗುತ್ತದೆ ಅನ್ನೋದು ಗೃಹ ಸಚಿವ ಎಂ.ಬಿ. ಪಾಟೀಲರ ಭಾವನೆ. ಹೀಗಾಗಿ, ಇಂದು ಗೃಹ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ. ಒಂದು ವೇಳೆ, ಸಲೀಂ ಹಿಂದೆ ಸರಿದರೆ, ಎಡಿಜಿಪಿ…
ಭಾರತದ ತಂಡದ ಆಟಗಾರರಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿ ಇರುವ ಆಟಗಾರ ಅಂದರೆ ವಿರಾಟ್ ಕೊಹ್ಲಿ ಎಂದು ಹೇಳಿದರೆ ತಪ್ಪಾಗಲ್ಲ, ಸದ್ಯದ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆಯ ಮೇಲೆ ಸಾಧನೆಯನ್ನ ಮಾಡುತ್ತಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ಪ್ರಥಮ ಸ್ಥಾನದಲ್ಲಿ ಇದ್ದಾರೆ, ಇನ್ನು ಪ್ರಪಂಚದ ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಬಿಟ್ಟರೆ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಆಟಗಾರ ಅಂದರೆ ಅದೂ ವಿರಾಟ್ ಕೊಹ್ಲಿ ಮಾತ್ರ. ಒಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಆಟವಾಡುತ್ತಿದ್ದಾರೆ ಅಂದರೆ ರನ್ ಗಳ…
ರಾಜಸ್ಥಾನದ ರಾಜ್‍ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ. ಈ ಯಶೋಗಾಥೆಯ…
ಈಗಾಗಲೇ ಕನ್ನಡದ ಜೀ ವಾಹಿನಿಯ ಸರಿಗಮಪ ಶೋನಲ್ಲಿ ಹಾಡುತ್ತಿರುವ ಕೊಪ್ಪಳದ ಗಂಗಮ್ಮ ಕರ್ನಾಟಕದ ಮನೆ ಮಾತಾಗಿದ್ದಾರೆ.ಈಗ ಇವರು ಮ್ಯೂಸಿಕ್ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಗಂಗಮ್ಮ ಭೇಟಿ ಮಾಡಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಗಂಗಮ್ಮ ಹಾಡಿ ಎಲ್ಲರನ್ನು ಗಮನ ಸೆಳೆದಿರುವುದರ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದು, 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ…
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ…