ಆರೋಗ್ಯ

“ಅನ್ನ” ತಿನ್ನುವುದಕ್ಕೆ ಮುಂಚೆ ಸ್ವಲ್ಪ ಇದನ್ನು ಓದಿ! ಬೇರೆಯವರೆಗೂ ತಿಳಿಸಿ…..

411

ಅಕ್ಕಿ ಯನ್ನು ಉಪಯೋಗಿಸದವರು ಯಾರಿದ್ದಾರೆ ಹೇಳಿ ನೋಡೋಣ, ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿರುವುದನ್ನು ಕೇಳಿರುತ್ತೀರಿ. “ಅನ್ನಂ ಪರಬ್ರಂಹ ಸ್ವರೂಪಮ್” ಎಂದು ದೊಡ್ಡವರು ಹೇಳಿದ್ದಾರೆ. ಆದರೆ ಧನದಾಸೆಯ ದುರುಳರು ನಮ್ಮ ಅನ್ನದ ರೂಪದಲ್ಲಿ ಈ ವಿಷವನ್ನುಣಿಸಲು ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಆತಂಕಕಾರಿ.

ಈ ಅಕ್ಕಿ ನಿಜವಾದ ಅಕ್ಕಿಯನ್ನು ಎಷ್ಟು ಮಟ್ಟಿಗೆ ಚೆನ್ನಾಗಿ ಹೋಲುತ್ತದೆ ಎಂದರೆ, ಅಕ್ಕಿ ವ್ಯಾಪಾರಿಗಲಿಂದಲೂ ಕೂಡ ಕಂಡುಹಿಡಿಯಲು ಕಷ್ಟವಾಗಿದೆ. ಅಷ್ಟೇ ಅಲ್ಲ, ಇದು ಮಾಮೂಲಿ ಅನ್ನದಂತೆಯೇ ಬೆಂದು ಅರಳುತ್ತದೆ ಸಹಾ.

ಅಷ್ಟೇ ಅಲ್ಲದೇ ಇದರ ಸೇವನೆಯಿಂದ ಹಿರಿಯರ ಸಹಿತ ಮಕ್ಕಳ ಆರೋಗ್ಯಕ್ಕೂ ಮಾರಕವಾಗಬಹುದಾಗಿದ್ದು ಇದನ್ನು ಸೇವಿಸುವ ಮುನ್ನ ಇದು ನಿಜವಾದದ್ದೇ ಅಲ್ಲವೇ ಎಂದು ಪ್ರಮಾಣಿಸಿಕೊಳ್ಳುವುದೇ ಜಾಣತನದ ಕ್ರಮ. ನಿಜವಾದ ಅಕ್ಕಿಯಲ್ಲಿ ಪ್ರಮುಖವಾಗಿ ಪಿಷ್ಟವಿದ್ದರೆ ಪ್ಲಾಸ್ಕಿಕ್ ಅಕ್ಕಿಯಲ್ಲಿ ಥಾಲೇಟ್ (phthalate) ಎಂಬ ಅಂಶವಿರುತ್ತದೆ. ಇವು ಪಿಷ್ಟಕ್ಕೆ ಹೆಚ್ಚು ಕಡಿಮೆ ಸರಿಸಮನಾಗಿದ್ದು ಅಕ್ಕಿಯಂತೆಯೇ ಬೆಂದು ಅರಳುತ್ತದೆ.

ಆದರೆ ಹೊಟ್ಟೆಗೆ ಹೋದ ಬಳಿಕ ಇವು ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುವುದು ಮಾತ್ರವಲ್ಲ, ಹಾರ್ಮೋನುಗಳನ್ನು ಏರುಪೇರುಗೊಳಿಸುವ ಮೂಲಕ ಸಂತಾನಶಕ್ತಿಯನ್ನೂ ಹೀರಿಬಿಡುತ್ತದೆ.

ಆದ್ದರಿಂದ ಈ ಅಕ್ಕಿಯನ್ನು ಗುರುತಿಸಿ ತಿನ್ನದೇ ಇರುವುದು ಹಾಗೂ ಸಂಬಂಧಪಟ್ಟವರಿಗೆ ಹಾಗೂ ಸುತ್ತಮುತ್ತಲಿನವರಿಗೆ ಸೂಚನೆ ನೀಡುವ ಮೂಲಕ ಎದುರಾಗಬಹುದಾದ ಅಪಾಯದಿಂದ ತಪ್ಪಿಸಬಹುದು.

ಹಾಗಾದರೆ ಇದನ್ನು ಕಂಡುಹಿಡಿಯುವುದಾದರು ಹೇಗೆ? ಇಲ್ಲಿವೆ ಕೆಲುವು ಸೂಚನೆಗಳು…. 

  • ಒಂದು ವೇಳೆ ಅನುಮಾನ ಬಂದರೆ  ಒಂದು ದೊಡ್ಡ ಚಮಚದಷ್ಟು ಅನುಮಾನವಿರುವ ಅಕ್ಕಿಯನ್ನು ತೆಗೆದುಕೊಂಡು ಬೆಂಕಿಕಡ್ಡಿ ಗೀರಿ ಬೆಂಕಿಯನ್ನು ನೇರವಾಗಿ ಅಕ್ಕಿಗೆ  ತಾಕುವಂತೆ ಮಾಡಿ.

  • ಒಂದು ವೇಳೆ ಪ್ಲಾಸ್ಟಿಕ್ ಸುಟ್ಟ ವಾಸನೆ ಬಂದರೆ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂದು ಅರ್ಥ. ನಿಜವಾದ ಅಕ್ಕಿಯಾದರೆ ಜ್ವಾಲೆ ತಾಕಿದ ಭಾಗ ಸುಟ್ಟು ಬೇರೆಯೇ ವಾಸನೆ ಬರುತ್ತದೆ.

  • ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಕಾವಲಿಯ ಮೇಲೆ ಇರಿಸಿ ಒಣಗಿರುವಂತೆಯೇ ಹುರಿಯಿರಿ. ನಿಜವಾದ ಅಕ್ಕಿಯಾದರೆ ಬಾಣಲಿ ತಾಕಿದ ಭಾಗ ಕಂದು ಬಣ್ಣ ತಳೆಯುತ್ತದೆ.

 

  •  ಪ್ಲಾಸ್ಟಿಕ್ ಅಕ್ಕಿಯಾದರೆ ಅಕ್ಕಿ ಕಾವಲಿಗೆ ಅಂಟಿದ ಭಾಗ ಕರಗಿ ಚಿಕ್ಕ ವೃತ್ತಾಕಾರದ ಪದರ ರೂಪುಗೊಳ್ಳುತ್ತದೆ. ಈ ಅಕ್ಕಿಯನ್ನು ಸರ್ವಥಾ ಸೇವಿಸಕೂಡದು.

  • ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕಲಕಿ. ನಿಜವಾದ ಅಕ್ಕಿ ನೀರಿನಲ್ಲಿ ಮುಳುಗುತ್ತದೆ ಹಾಗೂ ಅಡ್ಡಲಾಗಿರುತ್ತದೆ. ಪ್ಲಾಸ್ಟಿಕ್ ಅಕ್ಕಿಯಾದರೆ ನೀರಿನಲ್ಲಿ ತೇಲುತ್ತದೆ.

  • ಒಂದು ವೇಳೆ ತೇಲದೇ ಇದ್ದರೂ ಅಕ್ಕಿಯಂತೆ ತಕ್ಷಣವೇ ಮುಳುಗದೇ ತಿರುಗುತ್ತಿರುವ ನೀರಿನಲ್ಲಿ ಕೊಂಚ ಹೊತ್ತು ತಿರುಗುತ್ತಲೇ ಇರುತ್ತದೆ ಹಾಗೂ ಇನ್ನೂ ಒಂದು ವೇಳೆ ಆಳಕ್ಕಿಳಿದರೂ ಅಕ್ಕಿಯಂತೆ ಅಡ್ಡಲಾಗಿರದೇ ನೇರವಾಗಿ ನಿಲ್ಲುತ್ತದೆ.
  • ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಕುದಿನೀರಿನಲ್ಲಿ ಹಾಕಿ ಅನ್ನ ಮಾಡಿ. ಕೊಂಚ ಹೊತ್ತಿನ ಬಳಿಕ ಪಾತ್ರೆಯಲ್ಲಿರುವ ನೀರಿನ ಮೇಲ್ಪದರವನ್ನು ಗಮನಿಸಿ.
  • ಇಲ್ಲಿ ದಪ್ಪನೆಯ ಬಿಳಿಯಾದ ಪದರವೊಂದು ರೂಪುಗೊಳ್ಳುತ್ತಿರುತ್ತದೆ. ಇದು ಪ್ಲಾಸ್ಟಿಕ್ ಕರಗಿ ಗಾಳಿಗೆ ಗಟ್ಟಿಯಾದ ಪದರವಾಗಿದೆ.
  •  ಕೆಲವು ಪ್ಲಾಸ್ಟಿಕ್ ಅಕ್ಕಿ ಮೇಲಿನ ಯಾವುದೇ ವಿಧಾನಕ್ಕೆ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ. ಇದನ್ನು ಕಂಡುಕೊಳ್ಳಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕು. ಅನ್ನವನ್ನು ಬೇಯಿಸಿ ಎರಡು ದಿನಗಳ ಕಾಲ ಗಾಳಿಗೆ ತೆರೆದಿಡಿ.
  •  ನಿಜವಾದ ಅಕ್ಕಿಯಾದರೆ ಒಂದೇ ದಿನಕ್ಕೆ ಬೂಸು ಬರುತ್ತದೆ. ಎರಡನೆಯ ದಿನಕ್ಕೆ ಬೂಸು, ಶಿಲೀಂಧ್ರ ಎಲ್ಲವೂ ಬರಲೇಬೇಕು. ಆದರೆ ಪ್ಲಾಸ್ಟಿಕ್ ಅಕ್ಕಿಗೆ ಯಾವುದೇ ವಾಸನೆ ಬರುವುದಿಲ್ಲ.
  •  ಕೆಲವರು ನೀಡಿರುವ ಸಲಹೆಯ ಪ್ರಕಾರ ಒಂದು ಮುಷ್ಟಿಯಷ್ಟು ಬಿಸಿ ಅನ್ನವನ್ನು ಕೈಬೆರಳುಗಳಿಂದಲೇ ಉಂಡೆಕಟ್ಟಿ ಸತತವಾಗಿ ಒಂದು ಅಥವಾ ಎರಡು ನಿಮಿಷಗಳ ಕಾಲ ಚೆಂಡಿನ ಆಕೃತಿ ಬರಿಸಿ. ತಣ್ಣಗಾದ ಬಳಿಕ ಈ ಚೆಂಡನ್ನು ಮೇಜಿನ ಮೇಲೆ ಬಡಿಯಿರಿ.

  •  ಒಂದು ವೇಳೆ ಇದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಚೆಂಡಿನಂತೆಯೇ ಪುಟಿಯುತ್ತದೆ, ಒಡೆಯುವುದಿಲ್ಲ. ನಿಜವಾದ ಅಕ್ಕಿಯನ್ನು ಎಷ್ಟೇ ಉಂಡೆಗಟ್ಟಿದರೂ ಕೆಳಗೆ ಬಿದ್ದ ತಕ್ಷಣ ಒಡೆದು ಚೂರುಚೂರಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಪೊಲೀಸ್ ಅಧಿಕಾರಿ ಮುಂದೆಯೇ, ಠಾಣಾಧಿಕಾರಿಯ ಸೀಟ್ನಲ್ಲಿ ಕುಳಿತ ಸ್ವಘೋಷಿತ ದೇವ ಮಹಿಳೆ..!

    ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹಿಮ್ ಸಿಂಗ್ ಜೈಲು ಪಾಲಾಗಿದ್ದಾರೆ.ಇದರ ಬೆನ್ನಲ್ಲೇ ಸ್ವಯಂಘೋಷಿತ ದೇವ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿದ್ದಾರೆ.

  • ಉಪಯುಕ್ತ ಮಾಹಿತಿ

    ಬೇಲದ ಹಣ್ಣಿನಲ್ಲಿರುವ ಈ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

    ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉತ್ತಮವಾದ ಔಷಧಿ. ಬೇಸಿಗೆ ಕಾಲದಲ್ಲಿ ಈ ಹಣ್ಣಿನ ಸೇವನೆ ಉತ್ತಮ. ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಗ್ಯಾಸ್ಟ್ರಿಕ್, ಅಲ್ಸರ್, ಮೂತ್ರಪಿಂಡದ ಸಮಸ್ಯೆ, ಮಲಬದ್ಧತೆ, ಅಜೀರ್ಣ ಸಮಸ್ಯೆಯಿದ್ದರೆ ಈ ಹಣ್ಣನ್ನು ತಿನ್ನಬಹುದು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಲಾಗುತ್ತದೆ. ತೂಕ ಇಳಿಸಲು ಬಯಸುವವರು ಈ ಹಣ್ಣನ್ನು…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ 4 ಆರೋಪಿಗೆ ಜೀವಿತಾವಧಿವರೆಗೂ ಸಜೆ

    ಕೋಲಾರ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಬಿನ್ ಮುನಿವೆಂಕಟಪ್ಪ ಮತ್ತು ಕೆ.ಜಿ.ಎಫ್. ತಾಲ್ಲೂಕು, ಕ್ಯಾಸಂಬಳ್ಳಿ ಹೋಬಳಿ, ತಿಮ್ಮಾಪುರ ಗ್ರಾಮದ ವಾಸಿ ಕಾಂತ್‌ರಾಜ್ ಬಿನ್ ವೆಂಕಟೇಶಪ್ಪ ಮತ್ತು ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ವಾಸಿ ಪ್ರವೀಣ್ ಕೆ. ಬಿನ್ ಕೋದಂಡಪ್ಪ, ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವಾಸಿ ವೇಣು ಬಿನ್ ಗೋವಿಂದಪ್ಪರವರುಗಳು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು…

  • ಜ್ಯೋತಿಷ್ಯ

    ಮನಿ ಪ್ಲಾಂಟ್’ನ್ನು ಮನೆಯಲ್ಲಿ,ಎಲ್ಲಿ ಬೆಳೆಸಿದ್ರೆ ಶುಭ,ಅಶುಭಗಳು ಆಗುತ್ತವೆ ಗೊತ್ತಾ..?

    ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ ಹೆಸರು ಮನಿಪ್ಲಾಂಟ್‌.

  • ಸಿನಿಮಾ

    ಅಂಜನಿಪುತ್ರನಿಗೆ ಕೋರ್ಟ್ ಶಾಕ್..!

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.

  • ಮನಮಿಡಿಯುವ ಕಥೆ

    ಹೆಣ್ಣು ಮಗಳು ಹುಟ್ಟಿದ್ರೆ ಅವಳಿಗೆ ನಾನ್ಯಾಕೆ ಕಲಿಸಬೇಕು.?ಎಂದ ಗಂಡ ನಂತರ ಹೇಳಿದ್ದು ಏನು.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಗಂಡ_ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು. ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ..? ಗಂಡ ಕಿಟಕಿಯಿಂದ ಹೊರಗೆ…