ಸುದ್ದಿ

ʼಚಿನ್ನʼ ಪ್ರಿಯರಿಗೆ ಬಿಗ್‌ ಶಾಕ್: 39 ಸಾವಿರ‌ ರೂ. ಗಡಿ ದಾಟಿದ ಚಿನ್ನದ ಬೆಲೆ

31

ಚಿನ್ನ ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ. ನಿರಂತರವಾಗಿ ಬಂಗಾರದ ಬೆಲೆ ಏರಿಕೆಯಾಗ್ತಿದೆ. ಸತತ 6ನೇ ದಿನವೂ ಬಂಗಾರದ ಬೆಲೆ ಹೆಚ್ಚಾಗಿದೆ. ಚಿನ್ನ ಈವರೆಗೆ ಶೇಕಡಾ 25 ರಷ್ಟು ಏರಿಕೆ ಕಂಡಿದ್ದು, ಸೋಮವಾರ 10 ಗ್ರಾಂ ಚಿನ್ನದ ಬೆಲೆ 39,196 ರೂಪಾಯಿಯಾಗಿದೆ.

ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಶೇಕಡಾ 1ರಷ್ಟು ಹೆಚ್ಚಳ ಕಂಡಿದೆ. ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 45,058 ರೂಪಾಯಿಗೆ ಮಾರಾಟವಾಗ್ತಿದೆ. ಶುಕ್ರವಾರ ಕೆ.ಜಿ. ಬೆಳ್ಳಿ 45,148 ರೂಪಾಯಿಯಿತ್ತು. ಇದು 2016ರ ನಂತ್ರ ಗರಿಷ್ಠ ಬೆಲೆಯಾಗಿದೆ.

ಯುಎಸ್ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವ್ಯಾಪಾರ ಯುದ್ಧ, ಚಿನ್ನದ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

ಈ ಎರಡು ದೇಶಗಳ ವ್ಯಾಪಾರ ಗಲಾಟೆಯಿಂದಾಗಿ ಹೂಡಿಕೆದಾರರು ಬಂಗಾರದ ಮೇಲೆ ಹಣ ಹೂಡಿಕೆ ಶುರು ಮಾಡಿದ್ದಾರೆ. ಶುಕ್ರವಾರ ಬಂಗಾರದ ಬೆಲೆ 25 ರೂಪಾಯಿ ಏರಿಕೆ ಕಂಡು 38,995 ರೂಪಾಯಿಯಾಗಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ