ಮನರಂಜನೆ, ಸುದ್ದಿ

ಸರಿಗಮಪ ಗ್ರಾಂಡ್ ಫಿನಲೆಯಲ್ಲಿ ರನ್ನರ್ ಅಪ್ ಆದ ಹನುಮಂತನಿಗೆ ಸಿಕ್ಕಿದ್ದು ಎಷ್ಟು ಲಕ್ಷ ಗೊತ್ತಾ?ಇದೇ ಮೊದಲ ಬಾರಿಗೆ ರನ್ನರ್ ಅಪ್ ಗೆ ಬಾರೀ ಮೊತ್ತದ ಬಹುಮಾನ!

425

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹಾವೇರಿಯ ಚೀಲೂರು ಬಡ್ನಿ ತಾಂಡಾದ ಹನುಮಂತ ಅವರು ರನ್ನರ್ ಆಗಿದ್ದಾರೆ.
ಕೀರ್ತನ್ ಹೊಳ್ಳ ಆರಂಭದಿಂದಲೂ ಅದ್ಭುತವಾಗಿ ಹಾಡುವ ಮೂಲಕ ಜಡ್ಜಸ್ ಗಳು ಹಾಗೂ ಮಹಾಗುರುಗಳ ಮೆಚ್ಚುಗೆ ಗಳಿಸಿದ್ದರು. ಅದೇ ರೀತಿ ಹನುಮಂತ ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದರು.

ಶನಿವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಿಹಾಲ್ ತಾವ್ರೊ, ಹನುಮಂತ, ಕೀರ್ತನ ಹೊಳ್ಳ, ವಿಜೇತ್, ಹೃತ್ವಿಕ್ ಹಾಗೂ ಸಾಧ್ವಿನಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಅವರಲ್ಲಿ ಕೀರ್ತನ್ ಹೊಳ್ಳ, ಸಾದ್ವಿನಿ ಮತ್ತು ಹನುಮಂತ ಗ್ರಾಂಡ್ ಫಿನಾಲೆಗೆ ಪ್ರವೇಶಿಸಿದ್ದು, ಅಂತಿಮವಾಗಿ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹನುಮಂತ ರನ್ನರ್ ಅಪ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ ‘ಸರಿಗಮಪ’ ಶೋನಲ್ಲಿ ರನ್ನರ್ ಅಪ್ ಆದವರಿಗೆ ಭಾರಿ ಮೊತ್ತದ ಬಹುಮಾನ ನೀಡಲಾಗಿದೆ. ಹನುಮಂತ ಅವರಿಗೆ 15 ಲಕ್ಷ ರೂ. ಮೊತ್ತದ ಸೈಟ್ ಬಹುಮಾನವಾಗಿ ಸಿಕ್ಕಿದೆ. ಇನ್ನು ಮುಗ್ಧತೆಯಿಂದಲೇ ತಮ್ಮ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಹನುಮಂತ ಅವರಿಗೆ ಬಂಪರ್ ಆಫರ್ ಸಿಕ್ಕಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಈ ಮಾಹಿತಿಯನ್ನು ‘ಸರಿಗಮಪ’ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ರೌಂಡ್ ನಲ್ಲಿ ಹನುಮಂತ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ’ ಹಾಡನ್ನು ಹಾಡಿದ್ದು, ಜಡ್ಜಸ್ ಗಳು ಹನುಮಂತ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅರ್ಜುನ್ ಜನ್ಯ, ಹನುಮಂತ ಅವರಿಗೆ ದೊಡ್ಡ ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿದೆ. ಅವರಿಗಾಗಿ ದೊಡ್ಡ ನಿರ್ದೇಶಕರು ಕಾಯುತ್ತಿದ್ದಾರೆ. ಆ ಸಿನಿಮಾದಲ್ಲಿ ಹನುಮಂತ ಹಾಡಲಿದ್ದಾರೆ. ಇನ್ನು 2-3 ದಿನದಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಗಾಯಕರಾದ ವಿಜಯ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಂಸಲೇಖ ಅವರು, ಜನಪದ ನಾಯಕ ಹನುಮಂತ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ