ಸುದ್ದಿ

ಯಶ್ ತುಂಬಿಸಿದ್ರು ಕೆರೆ, ಆಫಿಸರ್ಸ್ ತುಂಬಿಕೊಂಡ್ರು ಜೇಬು..!

116

ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ.

ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ತಲ್ಲೂರು ಕೆರೆ ಅಭಿವೃದ್ದಿ ಪಡಿಸಿದ್ರು. ಅವರ ಶ್ರಮದಂತೆ ತಲ್ಲೂರು ಕೆರೆಯೂ ಸಂಪೂರ್ಣವಾಗಿ ಭರ್ತಿಯಾಗಿ 25 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯೋ ನೀರು ಒದಗಿಸುತ್ತಿದೆ. ಆದ್ರೆ ಕೊಪ್ಪಳದ ಸಣ್ಣನೀರಾವರಿ ಇಲಾಖೆ ಮಾತ್ರ 2015-16ರಲ್ಲಿ ಕಾಟಾಚಾರಕ್ಕೆ ಅಲ್ಪಸ್ವಲ್ಪ ಕಾಮಗಾರಿ ನಡೆಸಿ ಬರೊಬ್ಬರಿ 1 ಕೋಟಿ ಹಣ ಗುಳುಂ ಮಾಡಿದ್ದಾರೆ. ಈ ಬಗ್ಗೆ ಟಿವಿ5ಗೆ ದಾಖಲೆಗಳು ಲಭ್ಯವಾಗಿದ್ದು, ಸಣ್ಣನೀರಾವರಿ ಇಲಾಖೆ ಕೆರೆಯನ್ನು ಅಭಿವೃದ್ದಿ ಪಡಿಸಿದ್ರೆ, ಯಶ್ ಯಾಕೆ ಇಲ್ಲಿ ಬಂದು ಅಷ್ಟೊಂದು ಹಣ ಖರ್ಚು ಮಾಡಿ ಕೆರೆ ಅಭಿವೃದ್ದಿ ಪಡಿಸ್ತಾ ಇದ್ರು ಎನ್ನುವ ಮಾತುಗಳು ಕೇಳಿಬಂದಿದೆ.

ಇಲಾಖೆಯ ಅಧಿಕಾರಿಗಳು ತಲ್ಲೂರು ಕೆರೆಯ ತಡೆಗೊಡೆ ನಿರ್ಮಾಣ, ಊಳೆತ್ತುವುದು ಸೇರಿದಂತೆ ಕೆರೆಗೆ ನೀರು ಹರಿಯುವುದಕ್ಕೆ ಕಾಲುವೆಗಳನ್ನು ನಿರ್ಮಾಣ ಮಾಡಿದ್ಧೇವೆ ಅಂತಾ ಬರೊಬ್ಬರಿ 1 ಕೋಟಿ 4 ಲಕ್ಷ ರೂ ಹಣ ಎತ್ತುವಳಿ ಮಾಡಿದ್ದಾರೆ. ಕೇವಲ 5 ರಿಂದ 10 ಲಕ್ಷ ರೂ ಹಣ ಮಾತ್ರ ಅಧಿಕಾರಿಗಳು ಖರ್ಚು ಮಾಡಿ ಕೋಟಿ ರೂ ಹಣ ಕಮಾಯ್ ಮಾಡಿದ್ದಾರೆ. ತಕ್ಷಣ ಈ ಬಗ್ಗೆ ಸಣ್ಣನೀರಾವರಿ ಇಲಾಖೆಯ ಸಚಿವರು ಇತ್ತ ಕಡೆ ಗಮನಹರಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಹಿಂದೆ ಕೊಪ್ಪಳ ಸಣ್ಣನೀರಾವರಿ ಇಲಾಖೆಯ ನಡೆದಿದ್ದ ಹಗರಣ ಸಿಐಡಿ ತನಿಖೆಯಲ್ಲಿ ಇರುವಾಗಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಇಲಾಖೆಯ ವಿರುದ್ದ ಜನ್ರು ಛೀಮಾರಿ ಹಾಕ್ತಾ ಇದ್ದಾರೆ.. ಈಗಲಾದ್ರೂ ಯಶ್ ನ ಕನಸಿನ ಕೂಸು ತಲ್ಲೂರು ಕೆರೆಯ ಹಗರಣವನ್ನು ಸಣ್ಣನೀರಾವರಿ ಸಚಿವರಾದ ಸಿ.ಎಸ್ ಪುಟ್ಟರಾಜು ತನಿಖೆ ನಡೆಸ್ತಾರಾ ಕಾದು ನೋಡಬೇಕಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…

  • ಸುದ್ದಿ

    ಅನಾಮಧೇಯ 40 ಲಕ್ಷ ರೂ. ಬ್ಯಾಂಕಿಗೆ ಬಂತೆಂದು ಎಗ್ಗಿಲ್ಲದೆ ಖರ್ಚು ಮಾಡಿದ ದಂಪತಿಗೆ ಮುಂದೆ ಕಾದಿತ್ತು ಶಿಕ್ಷೆ!

    ಚೆನ್ನೈ,  ತಮ್ಮ ಬ್ಯಾಂಕ್ ಖಾತೆಗೆ ಅನಾಮಧೇಯವಾಗಿ ಬಂದ 40 ಲಕ್ಷ ರೂ. ಹಣವನ್ನು ಖರ್ಚು ಮಾಡಿದ ಕಾರಣಕ್ಕಾಗಿ ಸ್ಥಳೀಯ ಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿದ ಘಟನೆ ತಮಿಳುನಾಡಿನ ತಿರುಪೂರಿನಲ್ಲಿ ನಡೆದಿದೆ. ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ. ಗುಣಶೇಖರನ್ ಹಾಗೂ ಆತನ ಪತ್ನಿ ರಾಧಾ ಶಿಕ್ಷೆಗೆ ಒಳಗಾಗಿರುವ ದಂಪತಿ. 2012ರಲ್ಲಿ ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ.ಗುಣಶೇಖರನ್ ಎಂಬುವವರ ಅಕೌಂಟಿಗೆ ಅನಾಮಧೇಯವಾಗಿ 40 ಲಕ್ಷ ರೂ. ಜಮೆಯಾಗಿತ್ತು. ಹಣ ಬಂದ ಖುಷಿಗೆ ಎಲ್ಲಿಂದ…

  • ಸುದ್ದಿ

    ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್,.!!

    ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್  ಎಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ  ಜೋಡಿ. ರಾಧಿಕಾ ಪಂಡಿತ್ ಅವರು  ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು  ಮಗು ಇಬ್ಬರು  ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದವರು ತಿಳಿಸಿದ್ದಾರೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್  ಮನೆಯವರು  ಮತ್ತು  ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ತುಂಬಾ  ಖುಷಿಯಾಗಿದ್ದಾರೆ. ಇತ್ತೀಚೆಗೆ ರಾಧಿಕಾ ಪಂಡಿತ್…

  • ಸ್ಪೂರ್ತಿ

    ಮಸೀದಿಯಲ್ಲಿ ತಯಾರದ ಶಿವ ಭಂಡಾರಾದ ಅಡುಗೆ ……!

    ಇತ್ತೀಚಿಗೆ ಅಯೋಧ್ಯೆಯ ಸೀತಾರಾಮ ದೇವಸ್ಥಾನ, ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಬಾಂಧವ್ಯದ ಬೆಸುಗೆಯನ್ನು ಎತ್ತಿ ಹಿಡಿದಿತ್ತು. ಇದೀಗ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಮೀರಥ್‌ನ ಜಾಮಾ ಮಸೀದಿಯಲ್ಲಿ ಶಿವ ಭಂಡಾರಾದ ಊಟದ ತಯಾರಿ ನಡೆಸಲು ಮುಂದಾಗುವ ಮೂಲಕ ಸಾಮರಸ್ಯವನ್ನು ಸಾರಿದೆ. ನಗರದಲ್ಲಿರುವ ಸೋಮನಾಥ ಶಿವ ದೇವಸ್ಥಾನದ 150ನೇ ಪ್ರತಿಷ್ಠಾಪನೆಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಶಿವ ಭಂಡಾರವನ್ನು ಏರ್ಪಡಿಸಿದ್ದು, ಈ ವೇಳೆ ಜಾಮಿಯಾ ಮಸೀದಿಯ ಮುಖ್ಯ ಖಾಝಿ ಜೇನ್-ಉಸ್-ಸಜಿದಿನ್ ಆಹಾರ ವ್ಯವಸ್ಥೆಯನ್ನು ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ತರಕಾರಿ…

  • ಸಿನಿಮಾ, ಸುದ್ದಿ

    ಮಗು ಮುಖ ನೋಡುವ ಮುನ್ನವೇ ಎಲ್ಲರನ್ನು ಅಗಲಿದ ಚಿರಂಜೀವಿ ಸರ್ಜಾ! ನಿಜಕ್ಕೂ ಶಾಕ್

    ನಟ ಚಿರಂಜೀವಿ ಸರ್ಜಾ ಅವರು ದು ಎಲ್ಲರನ್ನು ಅಗಲಿದ್ದಾರೆ. ಯಾವಾಗಲೂ ನಗುತ್ತಲೇ ಇರುತ್ತಿದ್ದ ನಟ ಚಿರಂಜೀವಿ ಅವರು ಇಂದು ಇನ್ನಿಲ್ಲ ಎಂಬ ಸುದ್ದಿ ಕೇಳಿ ಕರ್ನಾಟಕದ ಜನತೆಗೆ ನಿಜಕ್ಕೂ ಶಾಕ್ ಆಗಿದೆ. ಎರಡು ವರ್ಷಗಳ ಹಿಂದೆ ಚಿರಂಜೀವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿರಂಜೀವಿ ಅವರು ನಿಧನರಾಗಿದ್ದಾರೆ. 2018ರಂದು ಅವರು ನಟಿ ಮೇಘನಾ ರಾಜ್ ಜೊತೆ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಮೂಲಕ ಮದುವೆಯಾಗಿದ್ದರು. ಇವರಿಬ್ಬರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. 10 ವರ್ಷಗಳಿಂದ ಇವರು ಪ್ರೀತಿ ಮಾಡುತ್ತಿದ್ದರು. ಇವೆರಡೂ ಕುಟುಂಬದವರು…