ಸಿನಿಮಾ

ಆ ಆರೋಪವನ್ನು ಪ್ರೂವ್ ಮಾಡಿದ್ರೆ ಮಂಡ್ಯ ಅಲ್ಲ, ರಾಜ್ಯವನ್ನೇ ಬಿಟ್ಟು ಹೋಗ್ತೀನಿ ಎಂದು ದಳಪತಿಗಳಿಗೆ ಸವಾಲು ಹಾಕಿದ ಯಶ್.!?

92

ನಾನು ಜೆಡಿಎಸ್​​ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ.

ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ ಇಲ್ಲಿಯೇ ಇರಲ್ಲ, ನಿಜವಾಗ್ಲೂ ರಾಜ್ಯಾನ ಬಿಡ್ತೀನಿ..ಬರೀ ಬಾಯಿಮಾತಿಗೆ ಹೇಳೋದು ಅಲ್ಲಪ್ಪ.. ನಿಜವಾಗ್ಲೂ ಹೇಳ್ತಾ ಇದ್ದೀನಿ. ಅರ್ಥಾ ಆಗಿರೋರಿಗೆ ಅರ್ಥಾ ಆಗಿರುತ್ತೆ ಅಂತಾ ಮಾರ್ಮಿಕವಾಗಿ ನುಡಿದ್ರು.

ಈ ಮೂಲಕ ಕಳೆದ ಬಾರಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದ ಯಶ್, ಈ ಬಾರಿ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ದೇವೇಗೌಡರಿಗೆ ಪರೋಕ್ಷ ಟಾಂಗ್ ಕೂಡ ನೀಡಿದ್ರಾ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಇಲ್ಲಿ ಯಶ್ ಯಾರದ್ದೇ ಹೆಸರನ್ನೂ ಪ್ರಸ್ತಾಪಿಸದಿದ್ದರೂ ‘ಬರೀ ಬಾಯಿಮಾತಿಗೆ ಹೇಳೋದು ಅಲ್ಲಪ್ಪ.. ನಿಜವಾಗ್ಲೂ ಹೇಳ್ತಾ ಇದ್ದೀನಿ ಅರ್ಥಾ ಆಗಿರೋರಿಗೆ ಅರ್ಥಾ ಆಗಿರುತ್ತೆ’ ಅಂತಾ ಹೇಳಿದ್ದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

ಏಕಂದ್ರೆ ಕಳೆದ ಲೋಕಸಭೆ ಚುನಾವಣೆ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ದೇವೇಗೌಡರು, ನರೇಂದ್ರ ಮೋದಿ ಪ್ರಧಾನಿ ಆದ್ರೆ ನಾನು ರಾಜ್ಯಾನೇ ಬಿಡ್ತೀನಿ ಅಂತಾ ಘೋಷಿಸಿದ್ರು. ಇನ್ನು ಈಗಾಗಲೇ ಸಚಿವ ಹೆಚ್​.ಡಿ ರೇವಣ್ಣ ಕೂಡ, ಮತ್ತೆ ಮೋದಿ ಪ್ರಧಾನಿಯಾದ್ರೆ ರಾಜಕಾರಣ ಬಿಡ್ತೀನಿ ಅಂತಾ ಘೋಷಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕ್ರೀಡೆ

    ನಿಮ್ಮ ಬಾಲ್ಯದ ಈ ಆಟಗಳು ನೆನಪಿದೆಯಾ ???

    ಗೋಲಿ ಆಟ : ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.

  • ಮನರಂಜನೆ

    ಸಿರಿಯಲ್’ಗಳಲ್ಲಿ ಮನೆ ಮಾತಾಗಿದ್ದ ಈ ನಟಿ,ದೋಸೆ ಕ್ಯಾಂಟಿನಲ್ಲಿ ಕೆಲಸಮಾಡುತ್ತಿರೋದು ಯಾಕೆ ಗೊತ್ತಾ .?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಈ ಕಿರುತೆರೆ ನಟಿ ಮಲೆಯಾಳಂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟ ನಟಿಯರು ಎಂದರೆ ತಮ್ಮ ಜೀವನದ ಶೈಲಿಯೇ ಬೇರೆ ತರಹ ರೂಪಿಸಿ ಕೊಂಡಿರುತ್ತಾರೆ. ಎಲ್ಲದರಲ್ಲೂ ವೈಭವದ ಜೀವನ ನಡೆಸುತ್ತಾರೆ… ಅಂತದ್ರಲ್ಲಿ ಈ ನಟಿ ದೋಸೆ ಕ್ಯಾಂಟಿನಲ್ಲಿ ಕೆಲಸಮಾಡುವಂತದ್ದು ಯಾಕೆ ಗೊತ್ತಾ .? ಮುಂದೆ ಹೇಳ್ತಿವಿ ನೋಡಿ… ಈ ಕಿರುತೆರೆ ನಟಿಯು ಮಗನ ಶಿಕ್ಷಣಕ್ಕಾಗಿ ಕ್ಯಾಂಟೀನ್ ಓಪನ್ ಮಾಡಿ ಅದರಲ್ಲಿ ದೋಸೆ ಹಾಕುವಂತ ಕೆಲಸವನ್ನು ಮಾಡುತ್ತಿದ್ದಾರೆ. ಜೀವನದಲ್ಲಿ ಈಗ ಆರ್ಥಿಕ ಸಂಕಷ್ಟ ಎದುರಾಗಿದ್ದು ಇದರಿಂದಾಗಿ ಮೆಟ್ಟಿನಿಲ್ಲಲು ಹೈವೇ ಪಕ್ಕದಲ್ಲಿ ಕ್ಯಾಂಟಿನ್…

  • ಸುದ್ದಿ

    ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡು ರಸ್ತೆ ಮಧ್ಯದಲ್ಲಿ ಅಮಾನವೀಯ ರೀತಿ ವರ್ತಿಸಿದ ಮಹಿಳೆ.

    ಕೊರೊನಾ ಮಹಾಮಾರಿ ದೇಶ ಅದರಲ್ಲೂ ರಾಜ್ಯವನ್ನು ವಕ್ಕರಿಸಿದ ಬಳಿಕ ಅನೇಕ ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ. ಕೆಲವೊಂದು ಮಾನವೀಯ ಕೆಲಸಗಳು ಕೂಡ ನಡೆದಿವೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಪೌರಕಾರ್ಮಿಕರ ಮೇಲೆ ಮಹಿಳೆಯೊಬ್ಬರು ಅಮಾನವೀಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ಹೌದು. ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡ ಮಹಿಳೆ ಅವರನ್ನು ನಿಂದಿಸಿದ್ದಲ್ಲದೇ, ಬಾಟಲಿಯಲ್ಲಿ ನೀರು ತುಂಬಿಸಿ ನಂತರ ಅದನ್ನು ರಸ್ತೆ ಮಧ್ಯದಲ್ಲಿಟ್ಟು ಬಂದಿದ್ದಾರೆ. ಈ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಅಲ್ಲೆ ಇದ್ದ ಕೆಲವರು ತಮ್ಮ ಮೊಬೈಲ್…

  • Place

    ಕೇದಾರನಾಥ ದೇವಾಲಯ

    ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ. ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ…

  • ಸುದ್ದಿ, ಸ್ಪೂರ್ತಿ

    ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ 19ರ ಯುವಕ ಟ್ರಂಪ್ ಆಹ್ವಾನಿಸಿದರೂ ಅಮೆರಿಕಕ್ಕೆ ತೆರಳಲಿಲ್ಲ, ಭಾರತದಲ್ಲೇ ರಿಸರ್ಚ್ ಮಾಡ್ತೇನೆ ಎಂದ ಗೋಪಾಲ್.

    ಬಿಹಾರದ ಬಾಗಲ್‍ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ. 19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ….