inspirational, ಆರೋಗ್ಯ, ಉಪಯುಕ್ತ ಮಾಹಿತಿ

ಕೆಲವೇ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಿ 5 ಕೆಜಿ ತೂಕ..!ಹೇಗೆ ಗೊತ್ತಾ..?

250

ತೂಕ ಜಾಸ್ತಿಯಾಗಿದೆ ಎನ್ನುವ ಚಿಂತೆ ಕಾಡ್ತಿದೆಯಾ. ತೆಳ್ಳಗಾಗಲು ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕೈ ಖಾಲಿ ಮಾಡಿಕೊಂಡು ಕುಳಿತಿದ್ದೀರಾ? ಹಾಗಿದ್ರೆ ಖರ್ಚಿಲ್ಲದೆ ಮನೆಯಲ್ಲಿಯೇ ಆರಾಮವಾಗಿ ತೂಕ ಇಳಿಸಿಕೊಳ್ಳೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ಕೇವಲ 10 ದಿನಗಳಲ್ಲಿ 5 ಕೆ.ಜಿ ತೂಕ ಇಳಿಸಿಕೊಳ್ಳುವ ಉಪಾಯ ಇಲ್ಲಿದೆ.

ನೈಸರ್ಗಿಕ ಔಷಧಿ ವಾಟರ್ ಥೆರಪಿ ಮೂಲಕ ತೂಕ ಇಳಿಸಿಕೊಳ್ಳಬಹುದು. ಬ್ರಿಟನ್ ನ ಫಿಟ್ನೆಸ್ ಕೋಚ್ ಶೌನ್ ವಾಕರ್ ವಾಟರ್ ಥೆರಪಿಯ ಕೆಲವೊಂದು ಪ್ರಯೋಗಗಳನ್ನು ಮಾಡಿದ್ದಾರೆ. ವಾಕರ್ ಹೇಳುವಂತೆ ವಾಟರ್ ಥೆರಪಿ ಮೂಲಕ 10 ದಿನಗಳಲ್ಲಿ 4-5 ಕೆ.ಜಿ ತೂಕ ಇಳಿಸಿಕೊಳ್ಳಬಹುದು. ವ್ಯಕ್ತಿಗಳ ಆಹಾರ ವಿಧಾನ ಹಾಗೂ ಮಲಗುವ ಸಮಯ ಬೇರೆ ಬೇರೆಯಾಗಿರುವುದರಿಂದ ಫಲಿತಾಂಶ ಕೂಡ ಭಿನ್ನವಾಗಿರುತ್ತದೆ.

ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಬಿದ್ದಾಗ ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡುತ್ತವೆ. ಇದರಿಂದ ಜೀರ್ಣಕ್ರಿಯೆ ಕೂಡ ಸರಿಯಾಗಾಗುತ್ತದೆ. ಚಯಾಪಚಯ ಸರಿಯಾದಲ್ಲಿ ತೂಕ ಕೂಡ ಕಡಿಮೆಯಾಗುತ್ತದೆ.

ನೀರು ಕುಡಿಯುವ ವಿಧಾನ :

*ಟೀ ಅಥವಾ ಕಾಫಿ ಕುಡಿಯುವ ಮುನ್ನ ನೀರನ್ನು ಕುಡಿಯಿರಿ.

*ಎದ್ದ 1-2 ಗಂಟೆ ನಂತ್ರ, ಉಪಹಾರ ಸೇವನೆಗೆ ಮೊದಲು ಹಾಗೂ ನಂತ್ರ ಒಂದು ಗ್ಲಾಸ್ ನೀರು ಕುಡಿಯಿರಿ.

*ಊಟಕ್ಕಿಂತ 20 ನಿಮಿಷ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ. ದಿನದಲ್ಲಿ ಕನಿಷ್ಠ 9,10 ಬಾರಿ ನೀರನ್ನು ಕುಡಿಯಲು ಮರೆಯಬೇಡಿ.

*ಟೀ ಕುಡಿಯಬೇಕೆನಿಸಿದಾಗೆಲ್ಲ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಿನಿಮಾಗೆ ಎಂಟ್ರಿ ಕೊಟ್ಟ ಐ.ಪಿ.ಎಸ್. ಅಣ್ಣಾಮಲೈ. ಮೊದಲ ಚಿತ್ರಕ್ಕೆ ಅಣ್ಣಾಮಲೈ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ.

    ಅಣ್ಣಾಮಲೈ ಅವರು ಅರಬ್ಬಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಸಿನಿಮಾ ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿಯನ್ನು ತಂದು ಕೊಟ್ಟಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ, ಭಾರತದ ಹೆಮ್ಮೆ ಎನಿಸಿರುವ ಪ್ಯಾರಾ ಈಜುಪಟು ಕೆ.ಎಸ್.ವಿಶ್ವಾಸ್ ಅವರ ಜೀವನಾಧಾರಿತ ಸಿನಿಮಾ ಆಗಿದೆ. ಸಣ್ಣ ವಯಸ್ಸಿನಲ್ಲೇ ವಿದ್ಯುತ್ ಅವಘಡದಿಂದ ತನ್ನ ಕೈಗಳನ್ನು ಕಳೆದುಕೊಂಡರೂ, ಗುರಿ ಸಾಧನೆಯ ಛಲ ಬಿಡದೆ ಸಾಧಕೆನಾಗಿ ಮೆರದ ವಿಶ್ವಾಸ್ ಅವರ ಜೀವನಾಧಾರಿತ ಸಿನಿಮಾ…

  • ಸುದ್ದಿ

    ‘ಇಂಟರ್ ನ್ಯಾಷನಲ್ ರೆಲಿಜಿಯಸ್ ಫ್ರೀಡಂಅವಾರ್ಡ್’ ತನ್ನದಾಗಿಸಿಕೊಂಡ 83 ವರ್ಷದ ಅಬೂಬಕರ್ ಅಬ್ದುಲ್ಲಹಿ….!

    ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19:  ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು  ಅಮೆರಿಕಾ ಸರಕಾರ ಗೌರವಿಸಿದೆ. ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ  2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್…

  • ಆರೋಗ್ಯ

    ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ. ಈ ಅರೋಗ್ಯ ಮಾಹಿತಿ ನೋಡಿ.

    ಜಗತ್ತಿನಲ್ಲಿ ಬಿಸಿ ನೀರು ಕುಡಿಯುವರ ಸಂಖ್ಯೆ ಬಹಳ ಕಮ್ಮಿ ಹೇಳಿದರೆ ತಪ್ಪಾಗಲ್ಲ, ವೈದ್ಯರು ಸಲಹೆಯನ್ನ ನೀಡಿದರು ಕೂಡ ಜನರು ಬಿಸಿ ನೀರನ್ನ ಕುಡಿಯಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನು ಒಬ್ಬ ಮನುಷ್ಯ ಆಹಾರವಿಲ್ಲದೆ ಬಹಳ ಕಾಲ ಬದುಕಬಹುದು ಆದರೆ ನೀರಿಲ್ಲದೆ ಬಹಳ ಕಾಲ ಬದುಕಲು ಸಾಧ್ಯವಿಲ್ಲ, ನಮ್ಮ ದೇಹದಲ್ಲಿ ಎಷ್ಟು ನೀರು ಇರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಬಲವಾಗಿರುತ್ತದೆ. ಇನ್ನು ಬಿಸಿ ನೀರನ್ನ ದಿನಾಲೂ ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳಿದರೆ ಒಮ್ಮೆ…

  • ಸ್ಪೂರ್ತಿ

    ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ ಈಗ ಆಕೆ ಐಎಎಸ್ ಅಧಿಕಾರಿ!

    ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ…

  • ಚುನಾವಣೆ

    ಕೋಲಾರ ಜಿಲ್ಲೆ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023

    ಕೋಲಾರ ಜಿಲ್ಲೆಯ 6 ವಿಧಾನ ಸಭಾ ಮತ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಪೂರ್ಣ; ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ; ನಿಗಾವಹಿಸಲು ವಿವಿಧ ತಂಡಗಳ ರಚನೆ: ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಕೋಲಾರ(ಕರ್ನಾಟಕ ವಾರ್ತೆ)ಮಾ.29:  ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು…