ಸಿನಿಮಾ

ಸಿಕ್ಕಿಬಿದ್ದ ವಿನೋದ್ ರಾಜ್ ರವರ ಹಣವನ್ನು ಲಪಟಾಯಿಸಿದ್ದ ಕಳ್ಳ..!

263

ನೆಲಮಂಗಲದಲ್ಲಿ ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.ಕಳೆದ ತಿಂಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್ ಅವರನ್ನು ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿದ್ದರು, ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು.

ಈ ಗ್ಯಾಂಗ್‍ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್‍ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ.
ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ಐಷಾರಾಮಿ ಜೀವನ ಮಾಡುತ್ತಿದ್ದ.ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು ಬ್ರ್ಯಾಂಡೆಂಡ್ ಬರೋಬ್ಬರಿ 5 ರಿಂದ 8 ಸಾವಿರ ಬೆಲೆ ಬಾಳುವಂತದ್ದಾಗಿದೆ.

ಶೂಗಳು, ಗಾಗಲ್ಸ್ ಹಾಕಿಕೊಂಡು ಹೀರೋ ರೇಂಜೆ ಗೆ ಬಿಲ್ಡಪ್ ಕೊಟ್ಟು ಐಶಾರಾಮಿ ಜೀವನ ಮಾಡುತ್ತಿದ್ದ. ಬಂಧಿತನನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಆತನ ಗ್ಯಾಂಗ್ ನ ಇತರ ಸದಸ್ಯರನ್ನು ಬಂಧಿಸಿಲು ಬಲೆ ಬೀಸಿದ್ದಾರೆ.

ಆರೋಪಿ ಬಂಧನದಿಂದ ನಟ ವಿನೋದ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮುಂದೆ ಈ ಖದೀಮರ ಗ್ಯಾಂಗ್ ಯಾರಿಗೂ ದ್ರೋಹ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ವಿನೋದ್ ರಾಜ್ ಕಳೆದುಕೊಂಡಿರುವ ಹಣದ ರಿಕವರಿ ಬಗ್ಗೆ ಇನ್ನುತನಿಖೆ ನಡೆಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ