ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಕ್ಕಳು ಮೊಬೈಲ್ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಗಳಿಗಾಗಿ 30 ಗೇಮ್ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ.

ಈ ಬಾಲಕನ ಹೆಸರು ಬೇಸಿಕ್ ಓಕ್ಪರಾ ಜ್ಯೂ. ಲಾಗೋಸ್ ನಿವಾಸಿಯಾಗಿರುವ ಈ ಬಾಲಕನ ತಂದೆ, ಈತನನ್ನು ಬೂಟ್ ಕ್ಯಾಂಪ್ಗೆ ಸೇರಿಸಿದ್ದರು. ಅಲ್ಲಿಆತ ಗೇಮ್ ಕೋಡಿಂಗ್ ಕಲಿತಿದ್ದ. ನಾಲ್ಕನೇ ವರ್ಷದಲ್ಲೇ ಬೇಸಿಕ್, ಟ್ಯಾಬ್ನಲ್ಲಿಸಾಕಷ್ಟು ಗೇಮ್ಗಳನ್ನು ಆಡುತ್ತಿದ್ದ.

7ನೇ ವರ್ಷವಿದ್ದಾಗ ಬೇಸಿಕ್ ಇಡೀ ದಿನ ಗೇಮಿಂಗ್ನಲ್ಲೇ ನಿರತನಾಗಿದ್ದ. ಇದನ್ನು ನೋಡಿದ ಆತನ ತಂದೆ, ”ನೀನು ಯಾಕೆ ನಿನ್ನದೇ ಆದ ಸ್ವಂತ ಗೇಮ್ ಮಾಡಬಾರದು. ಅದನ್ನು ಇತರರು ಆಡುವಂತಾಗಲಿ,” ಎಂದು ಬಿಟ್ಟರು. ಬಳಿಕ 9ನೇ ವರ್ಷವಿದ್ದಾಗ ಬೇಸಿಕ್, ಗೇಮ್ ಅಭಿವೃದ್ಧಿಪಡಿಸುವುದನ್ನು ತಿಳಿದುಕೊಂಡ ಬಾಲಕ, ನಾಲ್ಕು ತಿಂಗಳಲ್ಲೇ 30 ಗೇಮ್ಗಳನ್ನು ಸೃಷ್ಟಿಸಿದ್ದಾನೆ. ಬಿಜೆಆರ್ ಗೇಮ್ಸ್ ಟ್ಯಾಗ್ನಡಿ ಈ ಗೇಮ್ಗಳನ್ನು ನೀವು ಗೂಗಲ್ ಪ್ಲೇ ಸ್ಟೋರ್ನಲ್ಲಿನೋಡಬಹುದು.

ಸ್ಮಾರ್ಟ್ಫೋನ್ ಆ್ಯಪ್ ಮತ್ತು ಗೇಮಿಂಗ್ ಬಹಳ ಬೇಡಿಕೆಯ ಕ್ಷೇತ್ರವಾಗಿದ್ದು, ಉದ್ಯೋಗ ಮತ್ತು ಹವ್ಯಾಸಕ್ಕೂ ದಾರಿಯಾಗಿದೆ. ಜತೆಗೆ ಹೊಸ ಅಯ್ಕೆಗಳ ಅನ್ವೇಷಣೆಗೂ ದಾರಿಮಾಡಿಕೊಡುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ…
ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…
ಈ ಹೊಸ 1,999 ರಲ್ಲಿನ Jio-Fi ಹಾಟ್ಸ್ಪಾಟ್ ಸಾಧನವನ್ನು ಖರೀದಿಸಿದ ನಂತರ ಗ್ರಾಹಕರನ್ನು ಮೂರು ಮೊದಲ ರೀಚಾರ್ಜ್ ಆಯ್ಕೆಗಳ ನಡುವೆ ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಆಯ್ಕೆಯನ್ನು ಜಿಯೋ ಎಂಟು ರೀಚಾರ್ಜ್ಗಳಿಗಾಗಿ (ಕಡಿಮೆ ಎಂಟು ತಿಂಗಳಲ್ಲಿ) ದಿನಕ್ಕೆ 1.5GBಗೆ 4G ಡೇಟಾವನ್ನು ಒದಗಿಸುತ್ತಿದೆ. ರಿಲಾಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಡಿವೈಸ್ ಬಿಡುಗಡೆ ಮಾಡಿದೆ. ಇದೊಂದು ಹಾಟ್ಸ್ಪಾಟ್ ಸಾಧನವಾಗಿದೆ. ಜಿಯೋದ ಈ JioFi JMR815 ಸಾಧನವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ. ಜಿಯೋ JioFi…
ನಿನ್ನೆಯ ಬಿಗ್ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ,
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ವರಕವಿ ಬೇಂದ್ರೆಯವರ ಈ ಕವನ ಯಾರಿಗೆ ತಾನೇ ಗೊತ್ತಿಲ್ಲ.. ನಮ್ಮ ತಂಡದಿಂದ ಯುಗಾದಿ ಮತ್ತು ಹೊಸವರ್ಷದ ಆರ್ಥಿಕ ಶುಭಾಶಯಗಳು… ಯುಗಾದಿ ಅಂದ್ರೆ ಏನು… ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು….
ಕೋಲಾರ: ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಮಾಲೂರು ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ WRRC (Wildlife Rescue and Rehabilitation Centre) ಅವರು ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ಬೆಂಗಳೂರಿನಿಂದ ದುರ್ಗಾ, ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿ ಎಂಬ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಸದ್ಯ ನಾಲ್ಕು ಆನೆಗಳಿದ್ದು, ಮುಂದಿನ…