ಸುದ್ದಿ

ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ

31

ಎಂಜಿನಿಯರಿಂಗ್ ಪದವಿ ಕೋರ್ಸ್ ಸೇರುವ ಸಂದರ್ಭದಲ್ಲಿ ಪ್ರಾಂಶುಪಾಲರು ನನಗೆ ಮೂರು ಷರತ್ತುಗಳನ್ನು ವಿಧಿಸಿದ್ದರು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ವಿಧಿಸುವ ಷರತ್ತುಗಳ ಕುರಿತು ವಿವರಿಸಿದ್ದಾರೆ. ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರಾಗಿದ್ದು, ತಮ್ಮ ಎಂಜಿನಿಯರಿಂಗ್ ಪದವಿಯನ್ನು ಹಾವೇರಿಯ ಬಿವಿಬಿ (ಈಗಿನ ಕೆಎಲ್‍ಇ) ಕಾಲೇಜಿನಲ್ಲಿ ಓದಿದ್ದಾರೆ. ಈ ಕುರಿತು ಹಿಂದಿಯ ಖಾಸಗಿ ವಾಹಿನಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಇದರ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಧಾಮೂರ್ತಿಯವರು ಭಾಗವಹಿಸಿರುವ ಕಾರ್ಯಕ್ರಮ ನವೆಂಬರ್ 29ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಬಿಗ್ ಬಿ ಕೇಳುವ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಸುಧಾಮೂರ್ತಿಯವರು ಉತ್ತರಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ಓದಿನಲ್ಲಿ ಮುಂದಿದ್ದ ನಾನು ಎಂಜಿನಿಯರಿಂಗ್ ಓದುವ ಬಯಕೆಯನ್ನು ಹೊಂದಿದ್ದೆ. 1968ರಲ್ಲಿ ಎಂಜಿನಿಯರಿಂಗ್ ಓದುವ ಹುಡುಗಿಯರೇ ಇರಲಿಲ್ಲ.

ಹೀಗಾಗಿ ಎಂಜಿನಿಯರಿಂಗ್ ಓದಿದರೆ ಯಾವ ಹುಡುಗನೂ ಸಿಗುವುದಿಲ್ಲ ಎಂಬ ಭಯ ನಮ್ಮ ಮನೆಯವರಲ್ಲಿತ್ತು. ಆದರೆ ಹೇಗೋ ಮನೆಯವರ ಮನವೊಲಿಸಿ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ಪ್ರೋಮೋದಲ್ಲಿ ಸುಧಾಮೂರ್ತಿಯವರು ಬಡವರಿಗೆ, ಹಳ್ಳಿಗಳಲ್ಲಿನ ಮಕ್ಕಳಿಗೆ, ನಿರ್ಗತಿಕರಿಗೆ ಮಾಡಿರುವ ಸಮಾಜಮುಖಿ ಕೆಲಸಗಳನ್ನು ಸಹ ತೋರಿಸಲಾಗಿದೆ. ಪ್ರೋಮೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಹಲವರು ಸುಧಾಮೂರ್ತಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದರೆ ಏನು ಮಾಡಬೇಕು,ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ‌.

    ನೀವು ಎಂದಾದರೂ ಚೆಕ್ ಬೌನ್ಸ್ ಆದ ಸಂದರ್ಭವನ್ನು ಎದುರಿಸಿದ್ದೀರಾ? ಇದು ಮುಜುಗರದ ವಿಚಾರ ಮಾತ್ರವಲ್ಲ, ನಿಮ್ಮ ಹಣಕಾಸಿನ ಅರ್ಹತೆ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರವೂ ಹೌದು. ನಾನಾ ಕಾರಣಗಳಿಗೋಸ್ಕರ ಚೆಕ್ ಬೌನ್ಸ್ ಆಗಬಹುದು. ಹಾಗಂತ ಇವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಚೆಕ್ ಬೌನ್ಸ್ ಆಗಲು ಮುಖ್ಯ ಕಾರಣಗಳೇನೆಂದು ತಿಳಿಯೋಣ. ನೀವು ಬರೆದ ಅಥವಾ ಪಡೆದ ಚೆಕ್ ಹಿಂತಿರುಗಿತು ಎಂದರೆ ಬ್ಯಾಂಕ್ ಅದನ್ನು ಮಾನ್ಯಗೊಳಿಸಿಲ್ಲ ಎಂದರ್ಥ. ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವು ನೀವು ಬರೆದ ಅಥವಾ ಪಡೆದ…

  • ಸುದ್ದಿ

    ಜನವರಿ 8ರಿಂದ ಬ್ಯಾಂಕ್ ಗಳು ಬಂದ್ ಆಗಲಿವೆ. ಏನಾದರೂ ಬ್ಯಾಂಕ್ ವ್ಯವಹಾರಗಳು ಇದ್ದರೆ ಈಗಲೇ ಮುಗಿಸಿಕೊಳ್ಳಿ…

    ಜನವರಿ 8 ಮತ್ತು 9 ಭಾರತ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರದ್ಧ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕೇಂದ್ರ ಸರ್ಕಾರವು ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕಾರ್ಮಿಕ ಸಂಘಟೆಗಳು ಅಪಾದಿಸಿವೆ. ಇದಕ್ಕೆ ಇಂಡಿಯನ್ ಬ್ಯಾಂಕ್​ ಅಸೋಸಿಯೇಷನ್ ಸಹ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ.ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಮತ್ತು ಬ್ಯಾಂಕ್ ಎಂಫ್ಲಾಯಿಸ್​ ಫೆಡರೇಷನ್ ಆಫ್ ಇಂಡಿಯಾ ಅಸೋಸಿಯೇಷನ್​​ (ಬಿಇಎಫ್​ಐಎ) ಸಂಘಟನೆಗಳು ಬ್ಯಾಂಕ್ ಆಫ್ ಇಂಡಿಯಾ…

  • ಸುದ್ದಿ

    ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬರಲು ಕಾರಣವೇನು ಗೊತ್ತಾ?

    ‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ. 5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು…

  • ಮನೆ

    ಮನೆಯ ವಾಸ್ತು ಖರ್ಚಿಲ್ಲದೇ ಅಳವಡಿಸಿಕೊಳ್ಳಿ. ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ವಾಸ್ತು ಪ್ರಕಾರ ಮನೆ ಕಟ್ಟಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಆದರೆ ಯಾವುದೋ ಕಾರಣದಿಂದ ಸಾಧ್ಯವಾಗಿರುವುದಿಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅವಷ್ಯಕತೆ ಇಲ್ಲ.. ಇಲ್ಲಿ ನೋಡಿ ನಿಮಗಾಗಿ ಸಿಂಪಲ್ ವಾಸ್ತು.

  • ದಿನಕ್ಕೊಂದು ನೀತಿ ಕಥೆ

    ಬ್ರಹ್ಮದತ್ತನ ಗುಣ ಮತ್ತು ದೋಷ…..ಓದಿ ದಿನಕ್ಕೊಂದು ನೀತಿ ಕಥೆ…..

    ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.