ಸುದ್ದಿ

ಒಳ ಉಡುಪಿಗೆ ಕೈ ಹಾಕಿ ಲೈಂಗಿಕ ದೌರ್ಜನ್ಯ: ಮಹಿಳೆ ಒಬ್ಬಳು ಟ್ರಂಪ್ ವಿರುದ್ಧ ಆರೋಪ ಮಾಡಿದ್ದಾಳೆ…

242

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ನಿಯತಕಾಲಿಕೆಯ ಲೇಖಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.ಮ್ಯಾನ್‍ಹಟನ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ತನ್ನ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 75 ವರ್ಷದ ಇ ಜೀನ್ ಕ್ಯಾರೋಲ್ 1995-96 ರಲ್ಲಿ ಮ್ಯಾನ್‍ಹಟನ್‍ನ ಬರ್ಗ್‍ಡ್ರಾಫ್ ಅಂಗಡಿಯಲ್ಲಿ ನಡೆದಿರುವ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಆಗ ಟ್ರಂಪ್‍ಗೆ 40-50 ವರ್ಷ ಆಗಿರಬಹುದು. 49-50 ವಯಸ್ಸಿನ ನನ್ನನ್ನು, ತನ್ನ ಸ್ನೇಹಿತೆಗೆ ಯಾವ ಉಡುಗೊರೆ ನೀಡಬಹುದು ಎಂದು ಕೇಳಿದ್ದರು. ಅದಕ್ಕೆ ನಾನು ಬೂದು ಬಣ್ಣದ ಲೇಸಿ ಸೀ-ಬಾಡಿಸೋಟ್‍ನ್ನು ಅಯ್ಕೆ ಮಾಡಿದ್ದೆ. ತದನಂತರ ಅದನ್ನು ನನಗೆ ಕೊಟ್ಟು, ಹೇಗೆ ಕಾಣಿಸುತ್ತದೆಂದು ತೋರಿಸಲು ಆ ಬಟ್ಟೆ ಧರಿಸುವಂತೆ ಒತ್ತಾಯಿಸಿದರು. ಹೀಗಾಗಿ ನಾನು ಆ ಬಟ್ಟೆ ತೆಗೆದುಕೊಂಡು ಟ್ರಯಲ್ ರೂಂ ಗೆ ತೆರಳಿದೆ. ಅಲ್ಲಿಗೆ ಬಂದ ಟ್ರಂಪ್ ನನ್ನ ಮೇಲೆ ಸುಮಾರು 3 ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.

ನನ್ನ ಎರಡು ತೋಳುಗಳನ್ನು ಬಿಗಿಯಾಗಿ ಹಿಡಿದು ಗೋಡೆ ಕಡೆಗೆ ನನ್ನನ್ನು ತಳ್ಳಿದರು. ನನ್ನ ಒಳ ಉಡುಪಿಗೆ ಕೈ ಹಾಕಿ ಅದನ್ನು ಎಳೆದು ಲೈಂಗಿಕವಾಗಿ ಬಳಸಿಕೊಂಡರು. ನಾನು ಅವರನ್ನು ಬಲವಾಗಿ ತಳ್ಳಿ ಅಲ್ಲಿಂದ ಪರಾರಿಯಾದೆನು ಎಂದು ಆರೋಪಿಸಿ ತಮ್ಮ ನಿಯತಕಾಲಿಯಲ್ಲಿ ಬರೆದಿದ್ದಾರೆ.ಇದು ನಡೆದ 25 ವರ್ಷಗಳ ನಂತರ ಹೊರಬಂದಿರುವ ಕಾರಣ ಇದು ಶುದ್ಧ ಸುಳ್ಳು. ಅಧ್ಯಕ್ಷರನ್ನು ಕೆಟ್ಟವರೆಂದು ಬಿಂಬಿಸಲು ಈ ರೀತಿ ಮಾಡಿದ್ದಾರೆ ಶ್ವೇತಭವನದ ವಕ್ತಾರರೊಬ್ಬರು ಮಹಿಳೆಯ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ನಾನು ಈ ಮಹಿಳೆಯನ್ನೂ ಎಂದಿಗೂ ಭೇಟಿಯೇ ಮಾಡಿಲ್ಲ. ಅದಲ್ಲದೆ ಆಕೆ ತಮ್ಮ ನಿಯತಕಾಲಿಕೆಯಲ್ಲಿ ಇದೆಲ್ಲವನ್ನೂ ಬರೆದಿರುವುದು ಪುಸ್ತಕದ ಮಾರಾಟವನ್ನು ಹೆಚ್ಚಿಸಲು ಅಷ್ಟೇ. ಏಕೆ ಅವರ ಬಳಿ ಚಿತ್ರಗಳಿಲ್ಲವೇ, ಸಾಕ್ಷಿಗಳಿಲ್ಲವೆ ಏಕೆ ಅದೆಲ್ಲವನ್ನು ಬರವಣಿಗೆಯಲ್ಲಿ ಗುರುತಿಸಿಲ್ಲ. ಏಕೆಂದರೆ ಈ ಘಟನೆ ಸಂಭವಿಸಿಲ್ಲವೆಂಬುದು ಖಚಿತವಾಗಿದೆ. ನಮ್ಮ ಡೆಮಾಕ್ರಟಿಕ್ ಪಕ್ಷ ನಿಯತಕಾಲಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಹೊಂದಿರುವವರು ಆದಷ್ಟು ಬೇಗ ತಿಳಿಸಿ ಎಂದರು.

ಈ ಹಿಂದೆಯೂ ಸುಮಾರು 15ಕ್ಕೂ ಹೆಚ್ಚು ಮಹಿಳೆಯರು ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು..!ತಿಳಿಯಲು ಈ ಲೇಖನ ಓದಿ..

    ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.

  • ಸುದ್ದಿ

    ಆಷಾಢದಲ್ಲೂ ಮದುವೆ ಸಂಬ್ರಮ ಹೊಸ ಜೀವನಕ್ಕೆ ಕಾಲಿಟ್ಟ 32 ನವಜೋಡಿಗಳು

    ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ. ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು…

  • ಸುದ್ದಿ

    ಮನೆಗೆ ಹೋದ ದಿವಾಕರ್ ಪತ್ನಿಯಿಂದ ಈ ಸುದ್ದಿ ಕೇಳಿ ಶಾಕ್ ಆದ್ರು..!ಏನದು ಸುದ್ದಿ ಗೊತ್ತಾ..?

    ‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ಎಲ್ಲರೂ ಜಯರಾಂ ಕಾರ್ತಿಕ್(ಜೆಕೆ) ಅವರಿಗೆ ‘ಬಿಗ್ ಬಾಸ್ ಪಟ್ಟ ಸಿಗಬಹುದು, ಎಂದುಕೊಂಡಿದ್ದವರಿಗೆ ಶಾಕ್ ನೀಡಿದ್ದಾನೆ ಬಿಗ್ ಬಾಸ್. ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.

  • ಗ್ಯಾಜೆಟ್

    ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ..? ಕೂಡಲೆ ತೆಗೆದುಬಿಡಿ..!

    ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್‌ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್‌ನಿಂದ…

  • ಸರ್ಕಾರಿ ಯೋಜನೆಗಳು

    ನೀವು ನಿಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಿರಾ ಹಾಗಾದರೆ ಸರ್ಕಾರದಿಂದ ನಿಮಗೆ ಸಿಗಲಿದೆ 3ಲಕ್ಷ ರೂ. ಪರಿಹಾರ,.!

    ‘ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈನಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಆದ ತಪ್ಪಿನಿಂದ ದೃಷ್ಟಿಕಳೆದುಕೊಂಡವರಿಗೆ ಸರ್ಕಾರ ತಲಾ 3 ಲಕ್ಷರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ. ಆದರೆಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥ…