ಸುದ್ದಿ

ದೇವಸ್ತಾನದಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅನಾರೋಗ್ಯ…!

36

ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ.

ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಆಗಿದ್ದೇನು?:

ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಶಿರಾ ಮೂಲದ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ತೊಟ್ಟಿಯ ನೀರು ಬಳಸಿ ಹರಿಸೇವೆ ಪ್ರಸಾದ ತಯಾರಿಸಿದ್ದಾರೆ.

ಕರಿಕಡಬು, ಪಲ್ಯ, ಬೆಳೆಕಾಳು ಸಾರು, ಚಿತ್ರಾನ್ನ ಸೇವಿಸಿದ ಬಳಿಕ 20ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ವೀರಭದ್ರ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಆತನನ್ನು ಬರಗೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಬಾಲಕನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ವೀರಭದ್ರ ಪ್ರಾಣ ಬಿಟ್ಟಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಚುಕ್ಕೆ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ, ನಿಮಗೆ ತಿಳಿದಿಲ್ಲ ಇದರ ಈ ರಹಸ್ಯ.!

    ಬಾಳೆ ಹಣ್ಣು ಯಾರು ತಾನೇ ತಿನ್ನಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಬಾಳೆ ಹಣ್ಣನ್ನ ತಿನ್ನುತ್ತಾರೆ, ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ, ಬಾಳೆಹಣ್ಣು ತ್ವರಿತ ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ. ಎರಡು ಬಾಳೆಹಣ್ಣು ತಿಂದರೆ 90 ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯನದಿಂದ ತಿಳಿದು ಬಂದಿದೆ, ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ…

  • ಆರೋಗ್ಯ

    ಬೆಳ್ಳುಳ್ಳಿಯನ್ನು ತಿಂದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಈ ಮಾಹಿತಿ ನೋಡಿ.

    ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ. 1….

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(29 ಡಿಸೆಂಬರ್, 2018) ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ -ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರೇಮ…

  • ದೇಶ-ವಿದೇಶ

    ಹಾಡು ಹಗಲಲ್ಲೇ ಯುವತಿಯ ಮೇಲೆ ಕಾಮುಕರ ಗುಂಪಿನ ಅಟ್ಟಹಾಸ, ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ !!!

    ಇಲ್ಲಿನ ಅರಣ್ಯ ಪ್ರದೇಶವೊಂದರಲ್ಲಿ 12 ರಿಂದ 14 ಮಂದಿ ಪುಂಡ ಕಾಮುಕರ ಗುಂಪೊಂದು ರಸ್ತೆಯಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿ ಅಟ್ಟಹಾಸ ಗೈದ ವಿಡಿಯೋ ಇದೀಗ ವೈರಲ್‌ ಆಗಿದೆ.

  • ಸುದ್ದಿ

    ಸ್ಕೂಟಿ ಹತ್ತಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್. ಎದ್ನೋ ಬಿದ್ನೋ ಅಂತ ಓಡಿದ ಯುವಕ!

    ಸ್ಕೂಟಿ ಹರಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಮೊಹ್ಮದ್ ಆಯಾತುಲ್ಲಾ ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರ ಹಾವಿನ ಮೇಲೆ ಸ್ಕೂಟಿ ಹತ್ತಿಸಿದ್ದಾರೆ. ಈ ವೇಳೆ ಚಕ್ರಕ್ಕೆ ಸಿಲುಕಿದ ಪರಿಣಾಮ ಸವಾರ ಮೊಹ್ಮದ್ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾರೆ. ಆಗ ನಾಗರಹಾವು ಆತನ ಕಾಲಿಗೆ ಅಟ್ಯಾಕ್ ಮಾಡಿದೆ. ಇದರಿಂದ ಹೆದರಿದ ಮೊಹ್ಮದ್ ಎದ್ನೋ ಬಿದ್ನೋ…

  • ಕರ್ನಾಟಕ

    ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಧರಂಸಿಂಗ್ ಇನ್ನಿಲ್ಲ…

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, 80 ವರ್ಷದ ಧರಂಸಿಂಗ್’ರವರು ಉಸಿರಾಟದ ತೊಂದರೆ, ಅಸ್ತಮಾ, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ