ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚೆನ್ನೈ ನ 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಬಾಲಕ ಮೂರು ವರ್ಷದವನಿರುವಾಗಲೇ ಆತನ ಬಾಯಿ ಊದಿಕೊಂಡಿರುವುದನ್ನು ಪೋಷಕರು ಗಮನಿಸಿದ್ದರು. ಆದರೆ ಬಲಕನ ಬಾಯಿ ಬಾವು ಬಂದಿರುವ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಅಲ್ಲದೆ, ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಬಾಲಕ ಅಳಲು ಪ್ರಾರಂಭಿಸುತ್ತಿದ್ದ. ಹೀಗಾಗಿ ಪೋಷಕರು ನಿರ್ಲಕ್ಷ್ಯ ವಹಿಸಿದ್ದರು. ಬಾವು ಹೆಚ್ಚಾಗುತ್ತಿದ್ದಂತೆ ಪೋಷಕರು ಭಯಭೀತರಾಗಿದ್ದು, ನಂತರ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಪಿ.ಸೆಂದಿಲ್‍ನಾಥನ್ ತಿಳಿಸಿದ್ದಾರೆ.
ಎಕ್ಸ್-ರೇ ಹಾಗೂ ಸಿಟಿ ಸ್ಕ್ಯಾನ್ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹೆಚ್ಚು ಹಲ್ಲುಗಳಿರುವುದು ಕಂಡು ಬಂತು. ಹೀಗಾಗಿ ಸರ್ಜರಿ ಮಾಡಲು ನಿರ್ಧರಿಸಿದೆವು. ನಂತರ ಅರಿವಳಿಕೆ(ಅನಸ್ತೇಶಿಯಾ) ನೀಡಿ ಬಲಭಾಗದ ದವಡೆಯನ್ನು ತೆರೆದೆವು, ಅಲ್ಲಿ ಒಂದು ಚೀಲದ ರೀತಿ ಕಾಣಿಸಿತು. ಅದು ಸುಮಾರು 200 ಗ್ರಾಂ. ತೂಕವಿತ್ತು. ಆ ಚೀಲದ ತುಂಬ ಹಲ್ಲುಗಳಿದ್ದವು. ತುಂಬಾ ಎಚ್ಚರಿಕೆ ವಹಿಸಿ ಹಲ್ಲುಗಳನ್ನು ಹೊರ ತೆಗೆದೆವು. ಚೀಲ ತೆರೆದು ನೋಡಿದಾಗ ನೋಡಿದಾಗ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಪತ್ತೆಯಾಗಿವೆ ಎಂದು ಪಿ.ಸೆಂದಿಲ್‍ನಾಥನ್ ವಿವರಿಸಿದರು.
ಕೆಲವು ತುಂಬಾ ಸಣ್ಣ ಕಣಗಳಿದ್ದರೂ ಅವುಗಳಲ್ಲಿ ಹಲ್ಲುಗಳ ಗುಣಗಳಿರುತ್ತವೆ. ಆ ಚೀಲದಿಂದ ಹಲ್ಲುಗಳನ್ನು ತೆಗೆಯಲು ಸುಮಾರು 5 ತಾಸು ತೆಗೆದುಕೊಳ್ಳಲಾಗಿದೆ. ಹೊರ ತೆಗೆಯಲಾದ ಹಲ್ಲುಗಳು ಮುತ್ತಿನ ಆಕಾರದಲ್ಲಿವೆ ಎಂದು ವೈದ್ಯರು ತಿಳಿಸಿದ್ದಾರೆ.ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಪ್ಯಾಥೋಲಜಿ ವಿಭಾಗದ ಮುಖ್ಯಸ್ಥೆ ಪ್ರತಿಭಾ ರಮಣಿ ಈ ಕುರಿತು ಮಾಹಿತಿ ನೀಡಿ, ಸರ್ಜರಿ ಮಾಡಿದ ಮೂರು ದಿನಗಳ ನಂತರ ಬಾಲಕ ಸಹಜ ಸ್ಥಿಗೆ ಮರಳಿದ್ದಾನೆ ಎಂದು ತಿಳಿಸಿದ್ದಾರೆ. ಬಾಯಿಯಲ್ಲಿ 526 ಹಲ್ಲುಗಳು ಪತ್ತೆಯಾಗಿದ್ದು ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.
ಜಪಾನ್ ವಾಹನ ತಯಾರಕ ಹೋಂಡಾ ತನ್ನ ಕ್ರೀಡಾ ಆವೃತಿಯ ಇ.ವಿ ಪರಿಕಲ್ಪನೆಯನ್ನು ಟೊಕಿಯೊ ಮೋಟಾರ್ ಪ್ರದರ್ಶನದಲ್ಲಿ ಬಹಿರಂಗಪಡಿಸಿದೆ. ಈ ವಾಹನವು ನಗರ ಇ.ವಿ ಪರಿಕಲ್ಪನೆಯನ್ನು ಆಧರಿಸಿದೆ
ಇಂದು ಮಂಗಳವಾರ, 20/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…
ಮದುವೆಗಳಲ್ಲಿ ಹಲವಾರು ವಿಚಿತ್ರ ಸನ್ನಿವೇಶಗಳು ನಡೆಯುವುದನ್ನ ಕೇಳಿರುತ್ತೇವೆ, ನೋಡಿರುತ್ತೇವೆ.ಅದರಲ್ಲಿ ಕೆಲವೊಂದು ಇನ್ನೇನು ತಾಳಿ ಕಟ್ಟುವ ಸಮಯಕ್ಕೆ ಹುಡುಗಿ ಕಾಣೆಯಾಗುವುದು, ಇಲ್ಲವಾದ್ರೆ ಹುಡುಗನೇ ಇಲ್ಲದಿರುವುದು. ಅಣ್ಣನ ಮದುವೆಯಲ್ಲಿ ತಮ್ಮ ಅಣ್ಣನ ಕೈಯಿಂದ ತಾಳಿ ಕಿತ್ತುಕೊಂಡು ವಧುವಿಗೆ ಕಟ್ಟುವುದು ಇಂತಹ ಹಲವಾರು ಸನ್ನಿವೇಶಗಳನ್ನು ಎಲ್ಲರೂ ನೋಡಿಯೇ ಇರುತ್ತೇವೆ. ಇದೇ ರೀತಿ ಇಲ್ಲಿ ವರ ಮಹಾಶಯನೊಬ್ಬ ವಧುವಿಗೆ ತಾಳಿ ತಾಳಿ ಕಟ್ಟುವ ವೇಳೆ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾನೆ.ಇದನ್ನು ತಿಳಿದೇ ಮಾಡಿದ್ದಾನೋ, ತಿಳಿಯದೇ ಮಾಡಿದ್ದಾನೋ ಗೊತ್ತಿಲ್ಲ ಆ ವಿಡಿಯೋ ಮಾತ್ರ ಈಗ ಸೋಶಿಯಲ್…
ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್ಗಳಿವೆ. ಚೆಫ್ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.