ಪ್ರಸ್ತುತ ಬಹುತೇಕ ಅಗತ್ಯ ಕೆಲಸಗಳು
ಸ್ಮಾರ್ಟ್ಫೋನ್ ಡಿವೈಸ್ ಮೂಲಕವೇ ಮಾಡಿಬಿಡಬಹುದಾಗಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು
ಕೆಲವು ಆಪ್ಸ್ಗಳು ಅತ್ಯುತ್ತಮ ಸಾಥ್ ನೀಡುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಜನಪ್ರಿಯ ಟಾಟಾಸ್ಕೈ
ಡಿಟಿಎಚ್ ಸಂಸ್ಥೆಯು ವಾಟ್ಸಪ್ ಪ್ಲಾಟ್ಫಾರ್ಮ್ ಬಳಸಿಕಂಡು ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ
ನೀಡಲು ಮುಂದಾಗಿದೆ , ಹೌದು, ಟಾಟಾಸ್ಕೈ ಸಂಸ್ಥೆಯು ಈಗ ವಾಟ್ಸಪ್ ಬ್ಯುಸಿನೆಸ್ ಅಕೌಂಟ್
ಅನ್ನು ತೆರೆದಿದ್ದು, ಈ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಅಗತ್ಯ ಸೇವೆ ನೀಡಲು ಸಜ್ಜಾಗಿದೆ. ಗ್ರಾಹಕರು
ತಮ್ಮ ಟಾಟಾಸ್ಕೈ ಅಕೌಂಟ್ನ ಮಾಹಿತಿಯನ್ನು ತಿಳಿಯಲು, ಡಿಟಿಎಚ್ ರೀಚಾರ್ಜ್ ಮಾಡಿಸಿಕೊಳ್ಳಲು ಮತ್ತು
ರೀಚಾರ್ಜ್ ಮಾಡಿದ ಮೇಲೆ ಅಕೌಂಟ್ ರಿಪ್ರೇಶ್ ಮಾಡಲು ಕಂಪೆನಿಯ ಹೊಸ ವಾಟ್ಸಪ್ ಖಾತೆಯ ನೆರವು ಪಡೆಯಬಹುದಾಗಿದೆ.
ಕಳೆದ ವರ್ಷವೇ 2018ರಲ್ಲಿ ಟಾಟಾಸ್ಕೈ
ಸಂಸ್ಥೆಯು ವಾಟ್ಸಪ್ ಬ್ಯುಸಿನೆಸ್ ಖಾತೆಯನ್ನು ತೆರೆದಿದ್ದು, ಆದ್ರೆ ಇದೀಗ ಆ ಅಕೌಂಟ್ ಕಾರ್ಯರೂಪಕ್ಕೆ
ಬಂದಿದೆ. ಈ ವಾಟ್ಸಪ್ ಅಕೌಂಟ್ನಲ್ಲಿ ಗ್ರಾಹಕರು ಅಕೌಂಟ್ ಬ್ಯಾಲೆನ್ಸ್, ಇನ್ಸ್ಟಂಟ್ ರೀಚಾರ್ಜ್
ಆಯ್ಕೆ, ಅಗತ್ಯ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಲು, ಅಕೌಂಟ್ ರಿಫ್ರೇಶ್ ಮಾಡಿಸಲು ಕಂಪೆನಿಯ
ವಾಟ್ಸಪ್ ಬ್ಯುಸಿನೆಸ್ ಖಾತೆ ಗ್ರಾಹಕರಿಗೆ ಉಪಯುಕ್ತ ಎನಸಲಿದೆ. ಹಾಗಾದರೇ ಟಾಟಾಸ್ಕೈ ವಾಟ್ಸಪ್ ಖಾತೆಯ
ಹೊಸ ಸೇವೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.
ವಾಟ್ಸಪ್ನಲ್ಲಿ ಲಭ್ಯವಾಗುವ ಸೇವೆಗಳು ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರು ವಾಟ್ಸಪ್ನಲ್ಲಿಯೇಈಗ ಹಲವು ಸೇವೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಬ್ಯಾಲೆನ್ಸ್ ಚೆಕ್ ಮಾಡುವುದು,ಪ್ರಸ್ತುತ ಚಾನೆಲ್ ಪ್ಯಾಕ್ ಬಗ್ಗೆ ಮಾಹಿತಿ ತಿಳಿಯುವುದು, ಇನ್ಸ್ಟಂಟ್ (ತ್ವರಿತವಾಗಿ)ರೀಚಾರ್ಜ್ ಮಾಡಿಕೊಳ್ಳುವ ಅವಕಾಶ, ಅಕೌಂಟ್ ರಿಫ್ರೇಶ್ ಮಾಡುವ ಸೌಲಭ್ಯ, ಎಮರ್ಜನ್ಸಿ ಟಾಪ್ಅಪ್ಸೇವೆಗಳನ್ನು ದೊರಕಿಸಲು ಅಣಿಯಾಗಿದೆ.
ಟಾಟಾಸ್ಕೈ ವಾಟ್ಸಪ್ ಸೇವೆ ಪಡೆಯುವುದು ಹೇಗೆ? ಟಾಟಾಸ್ಕೈ ಗ್ರಾಹಕರು ಈಗ ವಾಟ್ಸಪ್ ಮೂಲಕವೇ ತಮ್ಮಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದ್ದು, ಅದಕ್ಕಾಗಿ ಕಂಪೆನಿಯು ಬ್ಯುಸಿನೆಸ್ ಖಾತೆಯನಂಬರ್ +91 1800 208 6633 ನೀಡಿದೆ. ಈ ನಂಬರ್ ಅನ್ನು ಗ್ರಾಹಕರು ತಮ್ಮ ಸ್ಮಾರ್ಟ್ಫೋನ್ನಲ್ಲಿಸೇವ್ ಮಾಡಿಕೊಂಡು ಒಂದು ಮೆಸೆಜ್ ಕಳುಹಿಸಬೇಕು. ಆನಂತರ ಕಂಪೆನಿಯಿಂದ ರಿಪ್ಲೇ ಬರುವುದು ಮತ್ತುವಾಟ್ಸಪ್ ಸೇವೆ ಚಾಲ್ತಿ ಆಗುವುದು. ಮತ್ತು ರಿಜಿಸ್ಟರ್ ಮೊಬೈಲ್ ನಂಬರ್ನಿಂದ 92296-92296ಮಿಸ್ಕಾಲ್ ಮಾಡಿ ಅಥವಾ 56633 ನಂಬರ್ಗೆ WHATSAPP ಎಂದು ಎಸ್ಎಮ್ಎಸ್ ಸಹ ಮಾಡಿ ಟಾಟಾಸ್ಕೈವಾಟ್ಸಪ್ ಸೇವೆ ಪಡೆಯಬಹುದು.
ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ ಟಾಟಾಸ್ಕೈ ಸಂಸ್ಥೆಯ ವಾಟ್ಸಪ್ ಬ್ಯುಸಿನೆಸ್ ಅಕೌಂಟ್ನಲ್ಲಿಒಟ್ಟು ಎಂಟು ಸೇವೆಗಳು ದೊರೆಯಲಿವೆ. ಗ್ರಾಹಕರು ವಾಟ್ಸಪ್ನಲ್ಲಿ ಟಾಟಾಸ್ಕೈ ಬ್ಯಾಲೆನ್ಸ್ ಚೆಕ್ಮಾಡಲು ಕ್ಯಾಪಿಟಲ್ ಅಕ್ಷರದಲ್ಲಿ ‘BALANCE’ ಎಂದು ಬರೆದು ಮೆಸೆಜ್ ಮಾಡಿದರೇ, ಕಂಪೆನಿಯಿಂದಬ್ಯಾಲೆನ್ಸ್ ಎಷ್ಟಿದೆ ಎಂದು ಮರಳಿ ಮೆಸೆಜ್ ಬರುತ್ತದೆ. ಅಂದಹಾಗೇ ಗ್ರಾಹಕರು ಟಾಟಾಸ್ಕೈನಲ್ಲಿರಿಜಿಸ್ಟರ್ ಆದ ಮೊಬೈಲ್ ನಂಬರ್ನಿಂದಲೇ ಮೆಸೆಜ್ ಮಾಡಬೇಕು. ಸೇವೆಯನ್ನು ನಿಲ್ಲಿಸಲು ಅವಕಾಶ: ವಾಟ್ಸಪ್ ಬ್ಯುಸಿನೆಸ್ ಖಾತೆಯನ್ನು ತೆರೆದಿರುವಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನ ನೀಡಲು ಕ್ರಮಕೈಕೊಂಡಿದೆ. ಹಾಗೆಯೇಈ ಸೇವೆಯನ್ನು ಗ್ರಾಹಕರು ಯಾವುದೇ ಸಮಯದಲ್ಲಿ ಬೇಕಾದರು ನಿಲ್ಲಿಸುವ ಅವಕಾಶವನ್ನು ಸಹ ನೀಡಿದೆ. ಅದಕ್ಕಾಗಿಗ್ರಾಹಕರು ತಮ್ಮ ರಿಜಿಸ್ಟರ್ ಖಾತೆಯಿಂದ ಕ್ಯಾಪಿಟಲ್ ಅಕ್ಷರಗಳಲ್ಲಿ ‘STOP’ ಎಂದು ಟೈಪ್ ಮಾಡಿ ಮೆಸೆಜ್ಕಳುಹಿಸಿದರೇ ಆಯಿತು ಸೇವೆ ಸ್ಥಗಿತವಾಗುತ್ತದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ತಮಿಳು ರಾಕರ್ಸ್ ಈ ಹೆಸರನ್ನು ಕೇಳಿದರೆ ಸಾಕು ಇಡೀ ತಮಿಳು ಚಿತ್ರೋದ್ಯಮ ಬೆಚ್ಚಿ ಬೀಳುತ್ತದೆ. ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ. ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ…
ಸ್ಟಾರ್ ನಟರಿಬ್ಬರ ಅಭಿಮಾನಿಗಳಿಗೆ ಥ್ರಿಲ್ ನೀಡಲಿದೆ ಈ ಸುದ್ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದೇ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಇಬ್ಬರೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗತೊಡಗಿದೆ. ‘ನಟಸಾರ್ವಭೌಮ’ ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಅಪ್ಪು ಫೇಸ್ಬುಕ್ ಲೈವ್ಗೆ ಬಂದಿದ್ದ ವೇಳೆ ಸ್ಟಾರ್ ನಟರುಗಳ ಅಭಿಮಾನಿಗಳು ಮಲ್ಟಿಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಪುನೀತ್ ರಾಜ್ಕುಮಾರ್ ಅವರು ಒಂದು ಒಳ್ಳೆಯ ಕಥೆ…
ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ 6000 ರುಪಾಯಿ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಕಂತನ್ನು ನೇರವಾಗಿ ಏಪ್ರಿಲ್ 1 ರಿಂದ ಜುಲೈ…
ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿದ್ದಾರೆ.ಪ್ರಯಾಣಿಕರೊಂದಿಗೆ ಪದ ಬಳಕೆಯ ಬದಲಿಸಿಕೊಳ್ಳಿ. ಸರ್, ಮೇಡಂ, ಅಣ್ಣ ಅಕ್ಕ ಎಂದು ಹೇಳುವುದು ಸೂಕ್ತ ಎಂದು ತಿಳಿಸಿದ್ದಾರೆ. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಸ್ವಂತ ವಾಹನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಾರಿಗೆ ಸಂಸ್ಥೆಗಳ ಮೇಲೆಯು ಅದೇ ಭಾವನೆ ಹೊಂದಬೇಕೆಂದು ತಿಳಿಸಿದ್ದಾರೆ. ಬಸ್ ಚಾಲಕ, ನಿರ್ವಾಹಕರೊಬ್ಬರು ಮಾಡುವ ಕೆಲಸದಿಂದ…
ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ…
ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ.