ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಸ್ತುತ ಬಹುತೇಕ ಅಗತ್ಯ ಕೆಲಸಗಳು ಸ್ಮಾರ್ಟ್‌ಫೋನ್ ಡಿವೈಸ್ ಮೂಲಕವೇ ಮಾಡಿಬಿಡಬಹುದಾಗಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಆಪ್ಸ್‌ಗಳು ಅತ್ಯುತ್ತಮ ಸಾಥ್ ನೀಡುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಜನಪ್ರಿಯ ಟಾಟಾಸ್ಕೈ ಡಿಟಿಎಚ್ ಸಂಸ್ಥೆಯು ವಾಟ್ಸಪ್ ಪ್ಲಾಟ್‌ಫಾರ್ಮ್ ಬಳಸಿಕಂಡು ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ ನೀಡಲು ಮುಂದಾಗಿದೆ , ಹೌದು, ಟಾಟಾಸ್ಕೈ ಸಂಸ್ಥೆಯು ಈಗ ವಾಟ್ಸಪ್ ಬ್ಯುಸಿನೆಸ್ ಅಕೌಂಟ್ ಅನ್ನು ತೆರೆದಿದ್ದು, ಈ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಅಗತ್ಯ ಸೇವೆ ನೀಡಲು ಸಜ್ಜಾಗಿದೆ. ಗ್ರಾಹಕರು ತಮ್ಮ ಟಾಟಾಸ್ಕೈ ಅಕೌಂಟ್‌ನ ಮಾಹಿತಿಯನ್ನು ತಿಳಿಯಲು, ಡಿಟಿಎಚ್ ರೀಚಾರ್ಜ್ ಮಾಡಿಸಿಕೊಳ್ಳಲು ಮತ್ತು ರೀಚಾರ್ಜ್ ಮಾಡಿದ ಮೇಲೆ ಅಕೌಂಟ್ ರಿಪ್ರೇಶ್ ಮಾಡಲು ಕಂಪೆನಿಯ ಹೊಸ ವಾಟ್ಸಪ್ ಖಾತೆಯ ನೆರವು ಪಡೆಯಬಹುದಾಗಿದೆ.

ಕಳೆದ ವರ್ಷವೇ 2018ರಲ್ಲಿ ಟಾಟಾಸ್ಕೈ ಸಂಸ್ಥೆಯು ವಾಟ್ಸಪ್ ಬ್ಯುಸಿನೆಸ್ ಖಾತೆಯನ್ನು ತೆರೆದಿದ್ದು, ಆದ್ರೆ ಇದೀಗ ಆ ಅಕೌಂಟ್ ಕಾರ್ಯರೂಪಕ್ಕೆ ಬಂದಿದೆ. ಈ ವಾಟ್ಸಪ್ ಅಕೌಂಟ್‌ನಲ್ಲಿ ಗ್ರಾಹಕರು ಅಕೌಂಟ್ ಬ್ಯಾಲೆನ್ಸ್, ಇನ್‌ಸ್ಟಂಟ್ ರೀಚಾರ್ಜ್ ಆಯ್ಕೆ, ಅಗತ್ಯ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಲು, ಅಕೌಂಟ್ ರಿಫ್ರೇಶ್ ಮಾಡಿಸಲು ಕಂಪೆನಿಯ ವಾಟ್ಸಪ್ ಬ್ಯುಸಿನೆಸ್ ಖಾತೆ ಗ್ರಾಹಕರಿಗೆ ಉಪಯುಕ್ತ ಎನಸಲಿದೆ. ಹಾಗಾದರೇ ಟಾಟಾಸ್ಕೈ ವಾಟ್ಸಪ್ ಖಾತೆಯ ಹೊಸ ಸೇವೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ವಾಟ್ಸಪ್‌ನಲ್ಲಿ ಲಭ್ಯವಾಗುವ ಸೇವೆಗಳು ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರು ವಾಟ್ಸಪ್‌ನಲ್ಲಿಯೇಈಗ ಹಲವು ಸೇವೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಬ್ಯಾಲೆನ್ಸ್ ಚೆಕ್ ಮಾಡುವುದು,ಪ್ರಸ್ತುತ ಚಾನೆಲ್ ಪ್ಯಾಕ್ ಬಗ್ಗೆ ಮಾಹಿತಿ ತಿಳಿಯುವುದು, ಇನ್‌ಸ್ಟಂಟ್ (ತ್ವರಿತವಾಗಿ)ರೀಚಾರ್ಜ್ ಮಾಡಿಕೊಳ್ಳುವ ಅವಕಾಶ, ಅಕೌಂಟ್ ರಿಫ್ರೇಶ್ ಮಾಡುವ ಸೌಲಭ್ಯ, ಎಮರ್ಜನ್ಸಿ ಟಾಪ್ಅಪ್‌ಸೇವೆಗಳನ್ನು ದೊರಕಿಸಲು ಅಣಿಯಾಗಿದೆ.
ಟಾಟಾಸ್ಕೈ ವಾಟ್ಸಪ್ ಸೇವೆ ಪಡೆಯುವುದು ಹೇಗೆ? ಟಾಟಾಸ್ಕೈ ಗ್ರಾಹಕರು ಈಗ ವಾಟ್ಸಪ್ ಮೂಲಕವೇ ತಮ್ಮಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದ್ದು, ಅದಕ್ಕಾಗಿ ಕಂಪೆನಿಯು ಬ್ಯುಸಿನೆಸ್ ಖಾತೆಯನಂಬರ್ +91 1800 208 6633 ನೀಡಿದೆ. ಈ ನಂಬರ್ ಅನ್ನು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿಸೇವ್ ಮಾಡಿಕೊಂಡು ಒಂದು ಮೆಸೆಜ್ ಕಳುಹಿಸಬೇಕು. ಆನಂತರ ಕಂಪೆನಿಯಿಂದ ರಿಪ್ಲೇ ಬರುವುದು ಮತ್ತುವಾಟ್ಸಪ್ ಸೇವೆ ಚಾಲ್ತಿ ಆಗುವುದು. ಮತ್ತು ರಿಜಿಸ್ಟರ್ ಮೊಬೈಲ್ ನಂಬರ್‌ನಿಂದ 92296-92296ಮಿಸ್‌ಕಾಲ್ ಮಾಡಿ ಅಥವಾ 56633 ನಂಬರ್‌ಗೆ WHATSAPP ಎಂದು ಎಸ್‌ಎಮ್‌ಎಸ್ ಸಹ ಮಾಡಿ ಟಾಟಾಸ್ಕೈವಾಟ್ಸಪ್ ಸೇವೆ ಪಡೆಯಬಹುದು.

ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ ಟಾಟಾಸ್ಕೈ ಸಂಸ್ಥೆಯ ವಾಟ್ಸಪ್ ಬ್ಯುಸಿನೆಸ್ ಅಕೌಂಟ್‌ನಲ್ಲಿಒಟ್ಟು ಎಂಟು ಸೇವೆಗಳು ದೊರೆಯಲಿವೆ. ಗ್ರಾಹಕರು ವಾಟ್ಸಪ್‌ನಲ್ಲಿ ಟಾಟಾಸ್ಕೈ ಬ್ಯಾಲೆನ್ಸ್ ಚೆಕ್ಮಾಡಲು ಕ್ಯಾಪಿಟಲ್ ಅಕ್ಷರದಲ್ಲಿ ‘BALANCE’ ಎಂದು ಬರೆದು ಮೆಸೆಜ್ ಮಾಡಿದರೇ, ಕಂಪೆನಿಯಿಂದಬ್ಯಾಲೆನ್ಸ್ ಎಷ್ಟಿದೆ ಎಂದು ಮರಳಿ ಮೆಸೆಜ್ ಬರುತ್ತದೆ. ಅಂದಹಾಗೇ ಗ್ರಾಹಕರು ಟಾಟಾಸ್ಕೈನಲ್ಲಿರಿಜಿಸ್ಟರ್ ಆದ ಮೊಬೈಲ್ ನಂಬರ್‌ನಿಂದಲೇ ಮೆಸೆಜ್ ಮಾಡಬೇಕು.
ಸೇವೆಯನ್ನು ನಿಲ್ಲಿಸಲು ಅವಕಾಶ: ವಾಟ್ಸಪ್ ಬ್ಯುಸಿನೆಸ್ ಖಾತೆಯನ್ನು ತೆರೆದಿರುವಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನ ನೀಡಲು ಕ್ರಮಕೈಕೊಂಡಿದೆ. ಹಾಗೆಯೇಈ ಸೇವೆಯನ್ನು ಗ್ರಾಹಕರು ಯಾವುದೇ ಸಮಯದಲ್ಲಿ ಬೇಕಾದರು ನಿಲ್ಲಿಸುವ ಅವಕಾಶವನ್ನು ಸಹ ನೀಡಿದೆ. ಅದಕ್ಕಾಗಿಗ್ರಾಹಕರು ತಮ್ಮ ರಿಜಿಸ್ಟರ್ ಖಾತೆಯಿಂದ ಕ್ಯಾಪಿಟಲ್ ಅಕ್ಷರಗಳಲ್ಲಿ ‘STOP’ ಎಂದು ಟೈಪ್ ಮಾಡಿ ಮೆಸೆಜ್ಕಳುಹಿಸಿದರೇ ಆಯಿತು ಸೇವೆ ಸ್ಥಗಿತವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…
ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.
ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು. ಕೇರಳದಲ್ಲಿ ಭಾರೀ ಭೂಕುಸಿತ : ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ…
ಇಂದು ಶುಕ್ರವಾರ, 02/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷವಾದ ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ.ಕೆಲವು ಸುದ್ದಿಗಳು ಅಚ್ಚರಿಯಾಗಿದ್ದರು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಹಾಗು ಕೆಲವು ಸುದ್ದಿಗಳು ರೋಚಕತೆ ಸೃಷ್ಟಿಸುವ ರೀತಿಯಲ್ಲಿರುತ್ತವೆ.
ಗೋಲಿ ಆಟ : ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.