ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ.
ಬಕ್ಸಾ ಜಿಲ್ಲೆಯ ತಾಮುಲ್ಪುರದ ಧುಲಬಾರಿಯ ನಿವಾಸಿಯಾಗಿದ್ದ 27 ವರ್ಷದ ಸ್ವರ್ಗೀಯರಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಗುವಾಹಟಿಯ ಸರೈಘಾಟ್ ಸೇತುವೆಯನ್ನು ತಲುಪಿದ್ದಾನೆ. ಪರ್ಸ್, ಮೊಬೈಲ್ ಫೋನ್, ಗುರುತಿನ ದಾಖಲೆಗಳು, ಚಪ್ಪಲಿ ಸೇರಿದಂತೆ ದ್ವಿಚಕ್ರ ವಾಹನವನ್ನು ಸೇತುವೆ ಮೇಲೆ ಬಿಟ್ಟು ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ.ಕೂಡಲೇ ಆತ ನದಿಯ ಮೇಲೆ ತೇಲುತ್ತಿದ್ದ ನೀರಿನ ಜೊಂಡು ಮತ್ತು ಬಾಳೆ ಎಲೆಯನ್ನು ಗಮನಿಸಿದ್ದಾನೆ. ಅದನ್ನು ಹಿಡಿದು ಈಜಲು ಶುರುಮಾಡಿದ್ದಾನೆ. ರಾತ್ರಿಯಿಡೀ ಈಜುತ್ತಲೇ ಸಾಗಿದ್ದ ಈತನನ್ನು ಮರುದಿನ ಬೆಳಗ್ಗೆ ಅಸ್ಸಾಂನ ಬರ್ಪೇಟಾ ಜಿಲ್ಲೆಯ ಬೊಹೊರಿಯಲ್ಲಿನ ದೋಣಿಗಾರರು ರಕ್ಷಿಸಿದ್ದಾರೆ.
ಕಲಾಚಂದ್ ಅಲಿ ಎಂಬಾತ ದೋಣಿ ನಡೆಸುತ್ತಿದ್ದಾಗ ಬಟ್ಟೆಗಳಿಲ್ಲದೆ ನೀರಿನಲ್ಲಿ ತೇಲಿ ಬರುತ್ತಿದ್ದ ಸ್ವರ್ಗೀಯರಿಯನ್ನು ರಕ್ಷಿಸಿದ್ದಾನೆ. ನಾನು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಆಗ ಯಾರೋ ಸಹಾಯಕ್ಕಾಗಿ ಕೇಳುತ್ತಿದ್ದರು. ಕೊನೆಗೆ ಆತನನ್ನು ಪತ್ತೆ ಮಾಡಿ ದೋಣಿಯನ್ನು ಅವನ ಕಡೆಗೆ ತೆಗೆದುಕೊಂಡು ಅವನನ್ನು ರಕ್ಷಿಸಿದೆ ಎಂದು ಹೇಳಿದ್ದಾರೆ.
ದಡಕ್ಕೆ ಸೇರಿದ ನಂತರ ಆತನನ್ನು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ಸೇರಸಲಾಗಿದ್ದು, ಆತ್ಮಹತ್ಯೆಗೆ ಮುಂದಾಗಿದ್ದು ಯಾಕೆ ಎನ್ನುವುದಕ್ಕೆ ಯಾವುದೇ ಕಾರಣವನ್ನು ತಿಳಿಸದ ಆತ ನನ್ನ ಜೀವನವನ್ನು ಕೊನೆಗೊಳಿಸಲು ನಾನು ಬಯಸಿದ್ದೆ. ಹಾಗಾಗಿ ನದಿಗೆ ಹಾರಿದೆ. ಆದರೆ ನಾನು ಸಾಯಲು ಆಗಲಿಲ್ಲ. ನೀರಿಗೆ ಬಿದ್ದ ತಕ್ಷಣ ನಾನು ಬದುಕಬೇಕು ಎನಿಸಿತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾರಾಹ್ ಇದು ಒಂದು ಅನಾಮಧೇಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಕಳೆದ ಒಂದು ವಾರದಿಂದ ಸಾರಾಹ್ ಅಪ್ಲಿಕೇಷನ್ ಅತಿ ವೇಗವಾಗಿ ತನ್ನ ನೆಲೆಯನ್ನು ಪಡೆಯುತ್ತಿದೆ, ಇದು ಕೆಲವೇ ವಾರಗಳಲ್ಲಿ ಇರುತ್ತೋ ಇಲ್ಲ ಹೋಗುತ್ತೋ ಅಂತ ಯಾರೂ ಯೋಚನೆ ಸಹ ಮಾಡಿರಲಿಲ್ಲ. ಆದ್ರೆ ಈಗ ಇದರ ಹವಾ ಹೇಗಿದೆ ಎಂದರೆ ನಿಮ್ಮ ಫೇಸ್ಬುಕ್ ನ್ಯೂಸ್ ಫೀಡ್’ನ್ನು ನೋಡುವುದು ಸಹ ಕಷ್ಟ ವಾಗಿದೆ.
ಸೊಪ್ಪು ತರಕಾರಿಗಳನ್ನ ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಹಾಗೂ ನಮ್ಮ ಅರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಯಾವ ಸೊಪ್ಪು ತರಕಾರಿ ಯಾವ ರೋಗಕ್ಕೆ ಹಾಗೂ ಯಾವುದರಿಂದ ಲಾಭ ಹೆಚ್ಚು ಎಂಬುದು ತಿಳಿದಿಲ್ಲ. ಪಾಲಕ್ ಸೊಪ್ಪಿನಲ್ಲಿ ಅಧಿಕವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು.
ಡಮ್ಮಿ ವೋಟ್ ಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಭಾನುವಾರ ಕೊನೆ ಹಂತದ ಮತದಾನ ನಡೆದಿದ್ದು, ಈ ಸಂದರ್ಭದಲ್ಲಿ ಇವಿಎಂನಲ್ಲಿದ್ದ ಡಮ್ಮಿ ಮತಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಹೀಗೆ ಕರ್ತವ್ಯಲೋಪವೆಸಗಿದ 20 ಚುನಾವಣೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡುವ ಸಾಧ್ಯತೆ ಇದೆ. ಮತಗಟ್ಟೆಗಳಲ್ಲಿ ಮತದಾನ ಆರಂಭಕ್ಕೆ ಮೊದಲು ಇವಿಎಂಗಳ ಪರೀಕ್ಷೆಗಾಗಿ ಡಮ್ಮಿ ವೋಟಿಂಗ್ ಮಾಡಲಾಗುತ್ತದೆ. ಮತದಾನ ಆರಂಭವಾದಾಗ ಡಮ್ಮಿ ವೋಟ್ ಗಳನ್ನು…
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ . ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಪ್ರಖ್ಯಾತಿಗೊಂಡ್ಡು ರಾರಾಜಿಸುತ್ತದೆ.
ಕಾಂಗ್ರೆಸ್ಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.