News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
ಸುದ್ದಿ

ಪತಿಯನ್ನ ಆಸ್ಪತ್ರೆಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ – ಸೆಲ್ಫಿ ವಿಡಿಯೋ ಮಾಡಿ ಮಹಿಳೆ ನೇಣಿಗೆ ಶರಣು…!

134

ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್‍ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು. ಈ ವೇಳೆ ಮನೆ ಮಾಲೀಕ ಸೋಮಶೇಖರ್, ಗೀತಾ ಮತ್ತು ಬಿಂದು ಪೊಲೀಸರ ಮುಂದೆಯೇ ಮಂಜುಳಾ ಮತ್ತು ಪತಿ ಸುಬ್ರಮಣಿಗೆ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದ ಮಂಜುಳಾ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ? , ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ನನ್ನ ಮಾಂಗಲ್ಯವನ್ನು ಕಿತ್ತುಕೊಂಡು ತುಂಬಾನೇ ಹಿಂಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸೋಮಶೇಖರ್, ಗೀತಾ ಮತ್ತು ಬಿಂದು ಮೂವರೂ ನನಗೆ ಮತ್ತು ಪತಿಗೆ ಚೆನ್ನಾಗಿ ಹೊಡೆದಿದ್ದಾರೆ. ಆದರೆ ಪೊಲೀಸರು ಯಾಕೆ ಹೊಡೆಯುತ್ತಿದ್ದೀರಿ ಎಂದು ಕೂಡ ಕೇಳಿಲ್ಲ. ನಾನು ಪತಿಯನ್ನು ಆಸ್ಪತ್ರೆಗೆ ಕಳುಹಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಈ ಮೂವರು ಕಾರಣರಾಗಿದ್ದು ಅವರನ್ನು ಬಿಡಬೇಡಿ. ಬಡವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ