ಸುದ್ದಿ

ನೀವೆಂದಾದರೂ ಸಮುದ್ರದ ತೀರದಲ್ಲಿ ಈ ತರಹದ ಮೊಟ್ಟೆಗಳನ್ನು ಕಂಡಿದ್ದೀರಾ..? ಏನಿದು ಗೊತ್ತೇ..?

56

ಮಿನುಗುವ ಮುತ್ತುಗಳು ಸಮುದ್ರ ತೀರದಲ್ಲಿ ಬಿದ್ದಿದ್ದಾವೋ ಏನೋ ಎಂಬಂತೆ ಕಾಣುವ ದೃಶ್ಯ.ಪ್ರಕೃತಿ ದೇವಿಯೇ ಮುತ್ತನ್ನು ಪೋಣಿಸಿ ಹಾಸಿಗೆ ಮಾಡಿದ್ದಾಳೋ ಏನೋ ಎಂಬಂತಹ ನೋಟ…ಎಂತಹವರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ಸೊಬಗು.ಈ ಸೌಂದರ್ಯ `ರಾಶಿ’ಗೆ ಸಾಕ್ಷಿಯಾಗಿದ್ದು ಫಿನ್‌ಲ್ಯಾಂಡಿನ ಮರ್ಜಾನಿಯೆಮಿ ಕಡಲತೀರ.

ಇಷ್ಟು ದಿನ ಮರಳಿಂದ ಆವೃತ್ತವಾಗಿದ್ದ ಈ ಬೀಚ್ ಮೊನ್ನೆ ಸಾವಿರಾರು `ಹಿಮದ ಮೊಟ್ಟೆ’ಗಳ ಹಾಸಿನಿಂದ ಅಚ್ಚರಿಗೆ ಕಾರಣವಾಗಿತ್ತು. ಸುಮಾರು 30 ಮೀಟರ್ ಅಂದರೆ 10 ಅಡಿಯಷ್ಟು ಪ್ರದೇಶದಲ್ಲಿ ಈ ಮೊಟ್ಟೆಗಳ ರಾಶಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದನ್ನು ಕಂಡು ಜನ ಆಶ್ಚರ್ಯಚಕಿತರಾಗಿದ್ದರು.

ರಿಸ್ಟೊ ಮಟಿಲಾ ಮತ್ತು ಅವರ ಪತ್ನಿ ಹೈಲುಟೊ ದ್ವೀಪದ ಮಾರ್ಜನಿಯೆಮಿ ಬೀಚಿನಲ್ಲಿ ನಡೆದುಕೊಂಡು ಹೋಗುವಾಗ ಇಂತಹ ದೃಶ್ಯವನ್ನು ಕಂಡಿದ್ದರು. ತಕ್ಷಣ ಇವರು ಈ ಸೊಬಗಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬೇರೆ ಬೇರೆ ಗಾತ್ರದ ಹಿಮದುಂಡೆಗಳು ಇಲ್ಲಿ ಬಿದ್ದು ಸೊಬಗಿನ ಲೋಕವನ್ನು ಸೃಷ್ಟಿಸಿದ್ದವು. ಮೊಟ್ಟೆ ಗಾತ್ರದಿಂದ ಹಿಡಿದು ಫುಟ್ಬಾಲ್ ಗಾತ್ರದ ಹಿಮದ ಚೆಂಡುಗಳು ಇಲ್ಲಿ ಜನರಿಗೆ ಕಾಣಸಿಕ್ಕಿದ್ದವು.

ಇದು ಬಲು ಅಪರೂಪದ ವಿದ್ಯಮಾನ. ವಾತಾವರಣದ ಸ್ಥಿತಿ ತುಂಬಾ ಚೆನ್ನಾಗಿದ್ದರೆ ಮಾತ್ರ ವರ್ಷದಲ್ಲಿ ಒಂದು ಸಲ ಇಂತಹ ದೃಶ್ಯವನ್ನು ನಾವು ಕಾಣಬಹುದು ಎಂಬುದು ಫಿನ್ನಿಷ್ ಹವಾಮಾನ ಸಂಸ್ಥೆಯ ಹಿಮ ತಜ್ಞ ಜೌನಿ ವೈನಿಯೋ ಅವರ ಅಭಿಮತ. ಸರಿಯಾದ ಪ್ರಮಾಣದ ಗಾಳಿಯ ಉಷ್ಣತೆ (ಶೂನ್ಯಕ್ಕಿಂತ ಕಡಿಮೆ, ಆದರೆ ಸ್ವಲ್ಪ ಮಾತ್ರ), ಸರಿಯಾದ ನೀರಿನ ತಾಪಮಾನ, ಆಳವಿಲ್ಲದ ಮತ್ತು ಅಲ್ಪ ಪ್ರಮಾಣದ ಇಳಿಜಾರಿನಂತಿರುವ ಮರಳಿನ ತೀರ ಹಾಗೂ ಶಾಂತ ಅಲೆಗಳಿದ್ದರೆ ಈ ಹಿಮದ ಮೊಟ್ಟೆಗಳು ಗೋಚರಿಸುತ್ತವೆ’ ಎಂದು ಇವರು ಹೇಳಿದ್ದಾರೆ.

ಸಮುದ್ರದ ನೀರಿನ ಮೇಲ್ಮೈನಲ್ಲಿ ಹಿಮ ರೂಪುಗೊಳ್ಳುವಾಗ ಸಣ್ಣ ಚೆಂಡಿನ ರೂಪ ತಾಳುತ್ತವೆ. ಈ ಮೊಟ್ಟೆಯಾಕಾರದ ಹಿಮ ಅಲೆಗಳೊಂದಿಗೆ ಸಾಗಿ ದಡದಲ್ಲಿ ಜಮಾಗೊಳ್ಳುತ್ತದೆ ಎಂದು ಇಲಿನಾಯ್ಸ್‌ ಸ್ಟೇಟ್ ಯೂನಿವರ್ಸಿಟಿಯ ಭೌಗೋಳಿಕ ಭೂವಿಜ್ಞಾನ ಪ್ರಾಧ್ಯಾಪಕ ಡಾ ಜೇಮ್ಸ್‌ ಕಾರ್ಟರ್ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸೀರೆಯನ್ನುಟ್ಟು ಬೆತ್ತಲೆಯ ಬೆನ್ನನ್ನು ತೋರಿಸಿದ ಬೆಡಗಿ ..,ಯಾರು ಗೊತ್ತಾ…?

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಾಗ್ತಿರುತ್ತಾರೆ. ಪಿಗ್ಗಿ ಡ್ರೆಸ್ ಸಾಮಾನ್ಯವಾಗಿ ಸುದ್ದಿಗೆ ಬರ್ತಿರುತ್ತದೆ. ಕೆಲ ದಿನಗಳ ಹಿಂದೆ ಪತಿ ನಿಕ್ ಜೊತೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗಿದ್ದರು. ಈಗ ಪ್ರಿಯಾಂಕಾ ಇನ್ನೊಂದು ಹಾಟ್ ಫೋಟೋ ವೈರಲ್ ಆಗಿದೆ. ಪ್ರಿಯಾಂಕಾ ಇನ್ಸ್ಟೈಲ್ ಮ್ಯಾಗಜಿನ್ ಗಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಸೀರೆಯುಟ್ಟಿದ್ದಾರೆ. ಆದ್ರೆ ಬ್ಲೌಸ್ ತೊಟ್ಟಿಲ್ಲ. ಬೆತ್ತಲೆ ಬೆನ್ನು ತೋರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಪ್ರಿಯಾಂಕಾರ ಕೆಲ ಫೋಟೋ ಹಾಗೂ…

  • ಆಧ್ಯಾತ್ಮ

    ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ನಿಯಮಗಳ ಕುರಿತು ಮಾಹಿತಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what 1) ಸಂಜೆ ದೇವರ…

  • ಸಿನಿಮಾ

    ಮಗನ ಫೋಟೋ ಹಾಕಿ ನಟ ಜಗ್ಗೇಶ್ ರವರನ್ನು ಟ್ರೊಲ್ ಮಾಡಿದ ರಮ್ಯಾ ಬೆಂಬಲಿಗರು..ಇದಕ್ಕೆ ಜಗ್ಗೇಶ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದ ರಮ್ಯಾರನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಪ್ರಕಾಶ್ ಅವರಿಗೆ ನವರಸನಾಯಕ ಜಗ್ಗೇಶ್ ಸಾಥ್ ಕೊಟ್ಟು ಟ್ವೀಟ್ ಮಾಡಿದ್ದರು. ಈಗ ಜಗ್ಗೇಶ್ ಟ್ವೀಟ್ ಮಾಡಿದ್ದಕ್ಕೆ ಅವರ ಕುಟುಂಬದ ವಿಚಾರವನ್ನು ಎಳೆದು ರಮ್ಯಾ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ. ರಮ್ಯಾ ಬಗ್ಗೆ ಈ ರೀತಿಯ ಟೀಕೆಗೆ ಮಾಡಿದಕ್ಕೆ ಅವರ ಬೆಂಬಲಿಗರು ಜಗ್ಗೇಶ್ ಅವರ ವಿದೇಶಿ ಸೊಸೆಯ ಬಗ್ಗೆ ಪ್ರಶ್ನಿಸಿದ್ದಾರೆ. ವಿದೇಶಿ ಯುವತಿಯನ್ನು ಮದುವೆಯಾಗಿರುವ ಜಗ್ಗೇಶ್ ಮಗನ ಫೋಟೋ…

  • ಸುದ್ದಿ

    ಶಾಲೆಯ ಬಾಗಿಲಿನ ಬಳಿ ನಿಂತ ಬಾಲಕಿ. ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ಅಡ್ಮಿಶನ್.

    ಈಚೆ ಶಾಲೆಯ ಬಾಗಿಲಿನ ಬಳಿ ಬಾಲಕಿಯೊಬ್ಬಳು ತನ್ನ ಕೈಯಲ್ಲಿ ಖಾಲಿ ಬಟ್ಟಲು ಹಿಡಿದುಕೊಂಡು ತರಗತಿ ಹೊರಗೆ ನಿಂತು ಇಣುಕಿ ನೋಡುತ್ತಿರುವ ಫೋಟೋವೊಂದು ತುಂಬಾ ವೈರಲ್ ಆಗಿತ್ತು. ಫೋಟೋ ವೈರಲ್ ಆದ ಬಳಿಕ ಬಾಲಕಿಗೆ ಅದೇ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ದಿವ್ಯಾ ಗುಡಿಸುವವನ ಮಗಳಾಗಿದ್ದು, ಶಾಲೆಯ ಹತ್ತಿರದಲ್ಲಿಯೇ ಇರುವ ಸ್ಲಂನಲ್ಲಿ ವಾಸಿಸುತ್ತಿದ್ದಳು. ಪೋಷಕರು ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋದಾಗ ದಿವ್ಯಾ ಊಟ ಸಿಗಬಹುದೆಂಬ ಭರವಸೆಯಿಂದ ಪ್ರತಿದಿನ ಶಾಲೆಯ ಬಳಿ ಹೋಗುತ್ತಿದ್ದಳು. ಈ ಸಮಯದಲ್ಲಿ  ಅವುಲಾ ಶ್ರೀನಿವಾಸ್  ಎಂಬುವವರು…

  • ಸ್ಪೂರ್ತಿ

    ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿರುವ ಡಾ.ರಮಣರಾವ್..!ತಿಳಿಯಲು ಈ ಲೇಖನ ಓದಿ..

    ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.