ನವದೆಹಲಿ: ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..! ಇದು ಸಾಧ್ಯಾನಾ ಎಂದು ಮೂಗು ಮುರಿಯಬೇಡಿ.. ಖಂಡಿತಾ ಸಾಧ್ಯ. ಅದೂ ಕೂಡ ವಿಶ್ವದ ಪ್ರತಿಷ್ಠಿತ ಸಂಸ್ಥೆಯೊಂದು ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ರೂ ಸಂಬಳ ನೀಡುವುದಾಗಿ ಹೇಳಿದೆ, ಹೌದು ಅಧ್ಯಯನವೊಂದರ ನಿಮಿತ್ತ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನಿದ್ರೆ ಮಾಡುವವರಿಗೆ 13 ಲಕ್ಷ ರೂ ಸಂಬಳ ನೀಡುವುದಾಗಿ ಘೋಷಣೆ ಮಾಡಿದೆ. ಅಧ್ಯಯನವೊಂದರ ನಿಮಿತ್ತ ನಾಸಾ ಸಂಸ್ಥೆ ನಿದ್ರೆ ಮಾಡುವವರಿಗಾಗಿ ಶೋಧ ನಡೆಸುತ್ತಿದ್ದು, ಕೇವಲ 60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿದೆ.
ಇಷ್ಟಕ್ಕೂ ಏನಿದು ಅಧ್ಯಯನ? ಅಮೆರಿಕದ ನಾಸಾ ಸಂಸ್ಥೆ ಮಂಗಳ ಹಾಗೂ ಚಂದ್ರನಲ್ಲಿಗೆ ಮಾನವ ಸಹಿತ ಉಡಾವಣೆ ಯೋಜನೆ ಹಮ್ಮಿಕೊಂಡಿದ್ದು, ಇದರ ನಿಮಿತ್ತ ಹಲವು ಅಧ್ಯಯನಗಳನ್ನು ಕೈಗೊಂಡಿದೆ. ಅದರಂತೆ ಗುರುತ್ವಾಕರ್ಷಣೆಯಲ್ಲಿದ ಬಾಹ್ಯಾಕಾಶ ವಾತಾವರಣದಲ್ಲಿ ನಿದ್ರೆ ಮತ್ತು ಇತರೆ ಆರೋಗ್ಯ ಸಂಬಂಧಿ ವ್ಯತ್ಯಾಸಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಈ ಅಧ್ಯಯನ ನಡೆಸುತ್ತಿದ್ದಾರೆ. ಅಮೇರಿಕನ್ ಸ್ಪೇಸ್ ಏಜೆನ್ಸಿ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಜೊತೆ ಸೇರಿ ಕೃತಕ ಗುರುತ್ವದಲ್ಲಿ ನಿದ್ರೆ ಮಾಡುವ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿವೆ. ಇದಕ್ಕಾಗಿ ಕೃತಕ ಗುರುತ್ವಾಕರ್ಷಣೆಯಲ್ಲಿ 2 ತಿಂಗಳ ಕಾಲ ನಿದ್ರೆ ಮಾಡುವ ಜನರನ್ನು ನಾಸಾ ಹುಡುಕುತ್ತಿದೆ.
ಮೂಲಗಳ ಪ್ರಕಾರ ಈ ಸಂಶೋಧನೆಗೆ ನಾಸಾಗೆ 12 ಪುರುಷರು ಹಾಗೂ 12 ಮಹಿಳೆಯರ ಅವಶ್ಯಕತೆಯಿದೆ. ಅವರ ವಯಸ್ಸು 24ರಿಂದ 55 ವರ್ಷದೊಳಗಿರಬೇಕು ಎಂದು ತಿಳಿದುಬಂದಿದೆ. ಅಂತೆಯೇ ಈ ಕೆಲಸಕ್ಕೆ ನಾಸಾ, 12.81 ಲಕ್ಷ ರೂಪಾಯಿ ವೇತನ ಕೂಡ ನೀಡಲಿದೆ. ಜರ್ಮನ್ ಏರೋಸ್ಪೇಸ್ ಸೆಂಟರ್ ನಲ್ಲಿ ಈ ಸಂಶೋಧನೆ ನಡೆಯಲಿದ್ದು, ಈ ಸಂಶೋಧನೆಯಲ್ಲಿ ನಿದ್ರೆ ಜೊತೆ ಅವರ ಚಟುವಟಿಕೆಗಳ ಮೇಲೆ ಗಮನ ಹರಿಸಲಾಗುವುದು. ಈ ಅಧ್ಯಯನದ ವೇಳೆ ಪ್ರಯೋಗ, ಆಹಾರ ಇತ್ಯಾದಿಗಳ ಮೇಲೆ ವಿಜ್ಞಾನಿಗಳು ಗಮನ ಕೇಂದ್ರೀಕರಿಸಲಿದ್ದಾರೆ.
ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಿ ಬಂದ ಸಾಕಷ್ಟು ಬಾಹ್ಯಾಕಾಶ ವಿಜ್ಞಾನಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಮೂಳೆಯ ಸಮಾರ್ಥ್ಯ ಕುಂಠಿತ, ಹೃದಯದ ಮೇಲಿನ ಒತ್ತಡದಂತಹ ಸಮಸ್ಯೆಗಳು ಕಂಡುಬಂದಿದ್ದವು. ಇಂತಹ ಸಮಸ್ಯೆಗಳು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೆಂದೇ ನಾಸಾ ಈ ಅಧ್ಯಯನ ನಡೆಸುತ್ತಿದೆ ಎನ್ನಲಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಸ್ಟಾರ್ ನಟರಿಬ್ಬರ ಅಭಿಮಾನಿಗಳಿಗೆ ಥ್ರಿಲ್ ನೀಡಲಿದೆ ಈ ಸುದ್ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದೇ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಇಬ್ಬರೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗತೊಡಗಿದೆ. ‘ನಟಸಾರ್ವಭೌಮ’ ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಅಪ್ಪು ಫೇಸ್ಬುಕ್ ಲೈವ್ಗೆ ಬಂದಿದ್ದ ವೇಳೆ ಸ್ಟಾರ್ ನಟರುಗಳ ಅಭಿಮಾನಿಗಳು ಮಲ್ಟಿಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಪುನೀತ್ ರಾಜ್ಕುಮಾರ್ ಅವರು ಒಂದು ಒಳ್ಳೆಯ ಕಥೆ…
2013 ಡಿಸೆಂಬರ್ 2 ರಂದು ಕಲರ್ಸ ಕನ್ನಡ ವಾಹಿನಿಯಲ್ಲಿ ತನ್ನ ಮೊದಲ ಎಪಿಸೋಡ್ ಆರಂಭಿಸಿದ ‘ಅಗ್ನಿಸಾಕ್ಷಿ’ ಪ್ರತಿರಾತ್ರಿ 8 ಗಂಟೆ ಆಗುತ್ತಿದ್ದಂತೆ ಮಹಿಳೆಯರು ಎಲ್ಲಾ ಕೆಲಸ ಮುಗಿಸಿ ಅಥವಾ ಇರುವ ಕೆಲಸ ಎಲ್ಲಾ ಬಿಟ್ಟು ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಲು ಕುಳಿತುಬಿಡುತ್ತಿದ್ದರು. ಆದರೆ ಇದೀಗ ಆ ಧಾರಾವಾಹಿ ಅಭಿಮಾನಿಗಳಿಗೆ ಏನೋ ಕಳೆದುಕೊಂಡಂತಾಗಿದೆ ಏಕೆಂದರೆ ಧಾರಾವಾಹಿ 6 ವರ್ಷಗಳ ಸುಧೀರ್ಘ ಪಯಣವನ್ನು ನಿಲ್ಲಿಸಿದೆ. ಅಂತೆಯೇ ಜನವರಿ 3 2020 ರಂದು ಕೊನೆಯ ಎಪಿಸೋಡ್ ಪ್ರಸಾರವಾಗಿದೆ. ಅರ್ಕ ಮೀಡಿಯಾ ಹೌಸ್ ನಿರ್ಮಾಣದ…
ತನ್ನ ತಂದೆ ಒಬ್ಬ ಸಾಮಾನ್ಯ ರೈತ ಹೊಲದ ದಾಖಲೆಗಳನ್ನು ಸಹಿ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದರು, ಬಿಸಿಲು ಗಾಳಿ ಮಳೆ ಎನ್ನದೆ ಪ್ರತಿದಿನ ತಮ್ಮ ಕೆಲಸ ಆಗಲಿ ಅನ್ನೋ ಕಾರಣಕ್ಕೆ ಓಡಾಡುತ್ತಿದ್ದರು, ಆದ್ರು ಕೆಲಸ ಆಗದೆ ಮರಳಿ ಮನೆಗೆ ಬರುತ್ತಿದ್ದರು ಇದೆಲ್ಲ ಗಮನಿಸಿದ ಈ ಬಾಲಕಿ ಅಂದ್ರೆ ಈಗ ಐಎಎಸ್ ಅಧಿಕಾರಿ ಆಗಿರುವಂತ ರೋಹಿಣಿಯವರು ಆಗ 9ನೇ ವಯಸ್ಸಿನ ಬಾಲಕಿಯಾಗಿದ್ದರು. ಒಂದು ದಿನ ಈ ಬಾಲಕಿ ತಮ್ಮ ತಂದೆಯನ್ನು ಕೇಳುತ್ತಾರೆ ಅಪ್ಪ ನೀವು ಪ್ರತಿದಿನ ಬಿಸಿಲು…
ತಮಿಳು ರಾಕರ್ಸ್ ಈ ಹೆಸರನ್ನು ಕೇಳಿದರೆ ಸಾಕು ಇಡೀ ತಮಿಳು ಚಿತ್ರೋದ್ಯಮ ಬೆಚ್ಚಿ ಬೀಳುತ್ತದೆ. ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ. ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ…
ಡಿಸೆಂಬರ್ ಒಳಗೆ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ಸಾಲಮನ್ನಾ ಫಲಾನುಭವಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದ ಸಿಎಂ, ಡಿಸೆಂಬರ್ ಒಳಗೆ ರೈತರ ಬೆಳೆ ಸಾಲಮನ್ನಾ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಬ್ಯಾಂಕುಗಳಿಗೆ 4 ಕಂತುಗಳಲ್ಲಿ ರೈತರ ಸಾಲ ಮನ್ನಾದ ಮೊತ್ತವನ್ನು ಪಾವತಿಸಲು ಚಿಂತನೆ ನಡೆದಿತ್ತಾದರೂ, 2 ಕಂತುಗಳಲ್ಲಿ ಸಾಲಮನ್ನಾ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಿ ಡಿಸೆಂಬರ್ ಒಳಗೆ ಸಂಪೂರ್ಣವಾಗಿ…
ಕೆಆರ್ಎಸ್ ಅಣೆಕಟ್ಟೆಯಿಂದ ರೈತರ ಬೆಳೆಗಳೆಗೆ ನೀರು ಬಿಡಲಾಗಿದ್ದು, ಅಂತೂ ಕಾಲುವೆಗಳಿಗೆ ನೀರು ಬಂತು ತಮ್ಮ ಬೆಳೆ ಉಳಿಸಿಕೊಳ್ಳಬಹುದು ಎಂದು ರೈತರು ಖುಷಿಯಾಗಿದ್ದಾರೆ. ಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕೆಆರ್ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ಕಳೆದೊಂದು ತಿಂಗಳಿನಿಂದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.ಕಾಲುವೆಗಳಿಗೆ ಕೊನೆಗೂ ಕಾವೇರಿ ನೀರು ಹರಿದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟೆಯಿಂದ ಮಂಗಳವಾರ ರಾತ್ರಿಯಿಂದ ಸಕ್ಕರೆ ನಾಡಿನ ಕಾಲುವೆಗಳಿಗೆ ನೀರು ಹರಿಸಲಾಗ್ತಿದೆ ಈ ಹಿನ್ನೆಲೆಯಲ್ಲಿ ಜುಲೈ 15 ರಂದು ಬೆಂಗಳೂರಿನಲ್ಲಿ ಸಚಿವ…