ಸಿನಿಮಾ

ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಮೀಟೂ ಪ್ರಕರಣ ಏನಾಗಿದೆ ಗೊತ್ತಾ..?

294

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಬಿರುಸಿನ ತನಿಖೆಗೆ ಇಳಿದಿದ್ದ ಪೊಲೀಸರು ಕೂಡ ಸಾಕ್ಷಿಗಳ ಕೊರೆತೆಯಿಂದಾಗಿ ಅವಧಿಗೂ ಮುನ್ನವೇ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ.

ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಅವರು ದಕ್ಷಿಣ ಭಾರತದ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡ ತನಿಖೆಗೆ ಬೇಕಾದ ಎಲ್ಲಾ ಆಯಾಮಗಳಿಂದ ಮಹಜರು ಮಾಡಿದ್ದರು. ಅರ್ಜುನ್ ಸರ್ಜಾ ಸೇರಿದಂತೆ ಕೇಸ್ ಸಂಬಂಧ ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಅರ್ಜುನ್ ಸರ್ಜಾ ಸೇರಿದಂತೆ ಕೇಸ್ ಸಂಬಂಧ ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಸುಮಾರು 40 ಸಾಕ್ಷಿಗಳಿಂದ ಮಾಹಿತಿ ಕಲೆ ಹಾಕೋಕೆ ಪ್ಲಾನ್ ಮಾಡಿದ್ದ ಪೊಲೀಸರಿಗೆ ಕೇವಲ 10 ಜನರು ಸಾಕ್ಷಿಗಳನ್ನಾಗಿ ಮಾಡೋಕು ಒದ್ದಾಡ್ದಿದ್ದಾರಂತೆ.

ವಿಸ್ಮಯ ಚಿತ್ರದ ವೇಳೆ ನಟ ಅರ್ಜುನ್ ಸರ್ಜಾನ್ ಲೈಂಗಿಕ ಕಿರುಕುಳ ನೀಡಿದ್ರು ಅನ್ನೋ ಆರೋಪಕ್ಕೆ ತಕ್ಕಂತೆ ಶೃತಿ ಪರವಾಗಿ ಸಾಕ್ಷಿ ಹೇಳೋಕೆ ಯಾರು ಮುಂದೆ ಬರ್ತಿಲ್ಲ. ವಿಸ್ಮಯ ಚಿತ್ರದ ವೇಳೆ ಜೊತೆಗಿದ್ದ ಹತ್ತಕ್ಕೂ ಹೆಚ್ಚು ಸಾಕ್ಷಿಗಳು, ಪೊಲೀಸರ ವಿಚಾರಣೆ ವೇಳೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ್ದಾರೆ.
ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಈಗ ಹಳ್ಳ ಹಿಡಿಯುವುತ್ತಿರುವುದೇಕೆ?
*ಅರ್ಜುನ್ ಸರ್ಜಾನ್ ಶೂಟಿಂಗ್ ವೇಳೆ ಆಶ್ಲೀಲವಾಗಿ ವರ್ತಿಸಿದ್ರು ಅನ್ನೋಕೆ ಯಾವುದೇ ಸಾಕ್ಷಿಗಳಿಲ್ಲ.

  • ಘಟನೆ ನಡೆದು 2 ವರ್ಷಗಳ ನಂತರ ದೂರು ನೀಡಿರೋದು.
  • ಶೂಟಿಂಗ್ ನಲ್ಲಿ ಚಿತ್ರಕ್ಕೆ ಬೇಕಾದಂತೆ ನಟಿಸಿದೆ ಅಷ್ಟೇ ಅಂತಾರೆ ನಟ ಅರ್ಜುನ್ ಸರ್ಜಾ.
  • ದೇವನಹಳ್ಳಿ ಹೈವೇಯಲ್ಲಿ ರೂಂಗೆ ಕರೆದರೂ ಅನ್ನೋಕು ಸೂಕ್ತ ಸಾಕ್ಷಿಗಳಿಲ್ಲ.
  • ಯುಬಿ ಸಿಟಿಯಲ್ಲಿ ರೂಮ್ ಬುಕ್ ಮಾಡಿದ್ದು ನಿಜವಾದ್ರೂ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಯಾವುದೇ ಸಿಸಿಟಿವಿ ಇಲ್ಲ.
  • ನಲವತ್ತು ಜನರನ್ನು ಸಾಕ್ಷಿಗಳನ್ನಾಗಿ ಮಾಡೋಕೆ ಹೊರಟ್ಟಿದ್ದ ಪೊಲೀಸರಿಗೆ ಸಿಕ್ಕಿದ್ದು ಕೇವಲ 10 ಜನ.
  • ಶೂಟಿಂಗ್ ನಡೆದ ಜಾಗದಲ್ಲೂ ಯಾವುದೇ ತರಹದ ಸಾಕ್ಷಿಗಳು ಪತ್ತೆಯಾಗದಿರುವುದು ಶ್ರುತಿ ಹರಿಹರನ್ ಮಾಡಿದ್ದ ಪ್ರಕರಣ ಹಳ್ಳ ಹಿಡಿಯಲು ಕಾರಣವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ