ಸುದ್ದಿ

ಸಾವಿನಲ್ಲಿಯೂ ಸಹ ಸಾರ್ಥಕತೆ, ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ…!

39

ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ.

ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ ಹಿನ್ನೆಲೆ ಸಂದೀಪ್ ಅವರ ದೇಹದ ಎಂಟು ಅಂಗಗಳನ್ನು ಅಗತ್ಯವಿರುವ ಬೇರೆ ಬೇರೆ ರೋಗಿಗಳಿಗೆ ಅಳವಡಿಸಲು ನಿರ್ಧರಿಸಲಾಗಿದೆ. ಎರಡು ಕಾರ್ನಿಯಾ, ಎರಡು ಕಿಡ್ನಿ (ಮೂತ್ರಪಿಂಡ), ಯಕೃತ್ತು, ಮೇದೋಜೀರಕ ಗ್ರಂಥಿ, ಹೃದಯ ಕಪಾಟಗಳು ಹಾಗೂ ಶ್ವಾಸಕೋಶಗಳನ್ನು ದಾನ ಮಾಡಲಾಗಿದೆ. ಈ ಎಲ್ಲಾ ಅಂಗಾಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ತಂದು ಅಲ್ಲಿಂದ ಚೆನ್ನೈ ಆಸ್ಪ್ತ್ರೆಗೆ ಸಾಗಿಸಲಾಗಿದೆ.

ಮೃತರ ಎರಡು ಮೂತ್ರಪಿಂಡಗಳನ್ನು ಕಸ್ತೂರ್ಬಾ ಆಸ್ಪತ್ರೆಯ ರೋಗಿಗಳಿಗೆ ಅಳವಡಿಸಿದ್ದರೆ ಯಕೃತ್ತು ಹಾಗೂ ಮೇದೋಜೀರಕ ಗ್ರಂಥಿಗಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ ನಿಡಲಾಗಿದೆ. ಇನ್ನು ಹೃದಯ ಕಪಾಟ ಹಾಗೂ ಶ್ವಾಸಕೋಶಗಳನ್ನು ಚೆನ್ನೈ ಬಿಜಿಎಸ್ ಆಸ್ಪತ್ರೆ ರೋಗಿಗಳಿಗೆ ಅಳವಡಿಸಾಗುತ್ತದೆ ಎಂದು ಮೂಲಗಳು ಹೇಳಿದೆ.ಹೀಗೆ ಸಂದೀಪ್ ತಾವು ಸಾವಿನಲ್ಲಿಯೂ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • KOLAR NEWS PAPER

    ಯೋಗಥಾನ್ ಕಾರ್ಯಕ್ರಮ: ಪೂರ್ವ ಸಿದ್ಧತೆ ಪರಿಶೀಲನೆ

    ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 6.00 ಗಂಟೆಗೆ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯೋಗಥಾನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಹಾಗೂ ಯೋಗ ತಾಲೀಮು ಪರಿಶೀಲಿಸಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿವೆಯೇ ಎಂದು ಖುದ್ದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಇಂದು ಪರಿಶೀಲನೆ ನಡೆಸಿದರು. 15ನೇ ಜನವರಿಯಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ಯೋಗಥಾನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಶಾಲಾ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು, ಯೋಗಪಟುಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…

  • ದೇಶ-ವಿದೇಶ

    2018ರ ಮೊದಲ ದಿನದ ಯಾವ ದೇಶದಲ್ಲಿ ಎಷ್ಟು ಶಿಶುಗಳ ಜನನ..!ತಿಳಿಯಲು ಈ ಲೇಖನ ಓದಿ..

    2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.

  • ಸ್ಪೂರ್ತಿ

    ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿರುವ ಡಾ.ರಮಣರಾವ್..!ತಿಳಿಯಲು ಈ ಲೇಖನ ಓದಿ..

    ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  • inspirational, ಆರೋಗ್ಯ

    ನಿಮ್ಮ ಹಲ್ಲುಜ್ಜುವಾಗ ಒಸಡುಗಳಿಂದ ರಕ್ತ ಬರುತ್ತಿದ್ದರೆ ತಕ್ಷಣ ಏನು ಮಾಡಬೇಕು..?ತಿಳಿಯಲು ಈ ಲೇಖನ ಓದಿ…

    ಪ್ರತಿದಿನ ಬೆಳಿಗ್ಗೆದ್ದಾಗ ಅದು ದೇವರು ನಮಗೆ ನೀಡಿದ ಜೀವನದ ಇನ್ನೊಂದು ಅವಕಾಶವಂತೆ. ರಾತ್ರಿಯ ಅನೈಚ್ಛಿಕ ಚಟುವಟಿಕೆಗಳಿಂದ ನಮ್ಮ ಬಾಯಿಯಲ್ಲಿಯೂ ಕೆಲವಾರು ಬದಲಾವಣೆಗಳು ಕಂಡುಬರುತ್ತದೆ. ವಿಶೇಷವಾಗಿ ಆಹಾರ ಕೊಳೆತು ಬಾಯಿಯಿಂದ ಹೊರಡುವ ದುರ್ವಾಸನೆ. ಆದ್ದರಿಂದ ಬೆಳಿಗ್ಗೆದ್ದ ತಕ್ಷಣ ಹಲ್ಲುಜ್ಜಿಕೊಳ್ಳುವುದನ್ನು ಪ್ರಥಮ ಕಾರ್ಯವಾಗಿಸುವುದು ಅಗತ್ಯ. ಒಂದು ವೇಳೆ ಈ ನಿತ್ಯಕರ್ಮದಲ್ಲಿ ನಮ್ಮ ಹಲ್ಲುಜ್ಜುವ ಬ್ರಶ್ ನಲ್ಲಿ ರಕ್ತ ಕಂಡುಬಂದರೆ? ರಕ್ತ ನೋಡಿದಾಕ್ಷಣ ನಮಗೆ ತಲೆ ತಿರುಗಬಹುದು.

  • Health

    ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುತ್ತೀರಾ?ಹಾಗಾದರೆ ಈ ಅಭ್ಯಾಸದಿಂದ ಅಪಾಯ ತಪ್ಪಿದ್ದಲ್ಲ ಎಚ್ಚರ!

    ಮೊಬೈಲ್‌ ಪರಿಚಯವಾದ ಮೇಲೆ ಜಗತ್ತಿನ ಜನರ ದಿನಚರಿಯೇ ಬದಲಾಗಿದೆ. ಕೆಲವರಿಗಂತೂ ಒಂದು ಅರ್ಧ ತಾಸು ಮೊಬೈಲ್ ಬಿಟ್ಟಿರು ಎಂದರೆ ಬಿಟ್ಟಿರಲು ಸಾಧ್ಯವಾಗುವುದಿಲ್ಲ.  ಯಾರು ಮೆಸೇಜ್‌ ಮಾಡಿರಬಹುದು,ಯಾರು ಕಾಲ್‌ ಮಾಡಿರಬಹುದು ಎಂದು ಮನಸ್ಸು ಆ ಕಡೆ ಸೆಳೆಯುತ್ತಿರುತ್ತದೆ, ಮೊಬೈಲ್‌ ಬಳಸುವುದು ಎಲ್ಲರಲ್ಲಿ ಒಂದು ಚಟವಾಗಿ ಬಿಟ್ಟಿದೆ ಎಂದು ತಪ್ಪಾಗಲಾರದು. ಇನ್ನು ನಮ್ಮ ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳಿಗೆ ಮೊಬೈಲ್‌ ಅನ್ನೇ ಅವಲಂಬಿಸಿದ್ದೇವೆ. ಬ್ಯಾಂಕ್‌ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್‌ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್‌…