ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಯಾಂಡಲ್ವುಡ್ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್ ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ.
ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು.
ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್.ನಾರಾಯಣ್ ಅವರಿಗೆ ಸೂಚಿಸಿದ್ದರು. ಅಂತೆಯೇ ಬೆಂಗಳೂರಿನ ಹೆಚ್ಬಿ.ಆರ್ ಬಡಾವಣೆಯಲ್ಲಿ 1.60 ಕೋಟಿ ಮೌಲ್ಯದ ನಿವೇಶನ ಖರೀದಿಸಿದ್ದರು.
ಆದರೆ ಆ ಬಳಿಕ ನಿವೇಶನದ ದಾಖಲೆಗಳು ನಕಲಿ ಎಂಬುದು ಗೊತ್ತಾಗಿದೆ. ನಕಲಿ ದಾಖಲೆಗಳನ್ನು ನೀಡಿ ನನ್ನಿಂದ ವಂಚಕರು ಹಣ ಪಡೆದುಕೊಂಡಿದ್ದಾರೆ ಎಂದು ಎಸ್.ನಾರಾಯಣ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಂದೆಡೆ ಸಾಲದ ಸುಳಿಯಲ್ಲಿ ಸಿಲುಕಿರುವ ನಾರಾಯಣ್ ಅವರು ಸಾಲವನ್ನು ಹಿಂತಿರುಗಿಸಲು ಪರದಾಡುತ್ತಿದ್ದಾರೆ. ಈಗಾಗಲೇ 2 ಕೋಟಿಗೂ ಅಧಿಕ ಸಾಲ ಹೊಂದಿದ್ದು, ನಕಲಿ ದಾಖಲೆ ಮೂಲಕ ವಂಚಿಸಿದ ವಂಚಕರಿಂದ ನ್ಯಾಯ ಒದಗಿಸಿ ಕೊಡಿ ಎಂದು ಡಿಸಿಪಿ ಅವರ ಹತ್ತಿರ ಎಸ್.ನಾರಾಯಣ್ ಅವರು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ. ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ. ►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್ಇಎಸ್)…
ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ,…
ತಾನೇ ಸಿದ್ದಪಡಿಸಿದ ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಮೆಕ್ಯಾನಿಕ್ ಒಬ್ಬಾತ ಸಿಕ್ಕಿ ಬಿದ್ದಿದ್ದಾನೆ. ರಾಜ್ಯ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ದ್ವಿಚಕ್ರ ವಾಹನ ಮತ್ತು ಮೊಪೆಡ್ಗಳ ಮೆಕ್ಯಾನಿಕ್ ಒಬ್ಬಾತ ತಾನೇ ಸಿದ್ದಪಡಿಸಿದ ಒಂದೇ ಒಂದು ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾನೆ. ಕೆಂಪೇಗೌಡ ಲೇಔಟ್ನ ನಿವಾಸಿ ನವೀನ್ ಅಲಿಯಾಸ್ ಡಿಯೋ ನವೀನ್ (19) ಸಿಕ್ಕಿ ಬಿದ್ದವ. ಈತನ ಸಹಚರ…
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿನ ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಆಸರೆಯಾಗಿರುವ ದೃಶ್ಯ ಒಂದು ಕಂಡುಬಂದಿದೆ. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ. ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ…
‘ಕುರಿ’ ಪ್ರತಾಪ್ ಈಗ ಸಖತ್ ಟ್ರೆಂಡಿಂಗ್ನಲ್ಲಿದ್ದಾರೆ. ಕಾರಣ, ಬಿಗ್ ಬಾಸ್. ಅಲ್ಲದೆ, ಕನ್ನಡ ಚಿತ್ರರಂಗದ ಬೇಡಿಕೆಯ ಈ ಹಾಸ್ಯನಟನ ಬದುಕಲ್ಲಿ ಈಗ ಫಸ್ಟ್ ಟೈಮ್ ಏನೇನೋ ಆಗ್ತಿದೆಯಂತೆ! ನಟ ಕುರಿ ಪ್ರತಾಪ್ ವೃತ್ತಿಜೀನವ ಆರಂಭಿಸಿದ್ದು ಕಿರುತೆರೆ ಮೂಲಕ. ಆನಂತರ ಅವರು ಬೆಳ್ಳಿತೆರೆಯಲ್ಲಿ ಬೇಡಿಕೆಯ ಹಾಸ್ಯನಟರಾಗಿ ಮಿಂಚಿದರು. ಬಳಿಕ ಮತ್ತೆ ‘ಮಜಾ ಟಾಕೀಸ್’ ಮೂಲಕ ವೀಕ್ಷಕರಿಗೆ ಕಾಮಿಡಿ ಕಚಗುಳಿ ನೀಡಿದರು. ಇದೀಗ ಅವರು ‘ಬಿಗ್ ಬಾಸ್’ ಮನೆ ಸೇರಿಕೊಂಡಿದ್ದಾರೆ. ಜತೆಗೆ ಅವರ ಲೈಫಲ್ಲಿ ಫಸ್ಟ್ ಟೈಮ್ ಏನೇನೋ ಆಗ್ತಿದೆ!…
ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು ‘ಕನ್ನಡದ ಕೋಟ್ಯಧಿಪತಿ’ ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ…