ಉಪಯುಕ್ತ ಮಾಹಿತಿ

ಸಿಇಟಿ ಫಲಿತಾಂಶ ಪ್ರಕಟಣೆ: ಇಂಜಿನಿಯರಿಂಗ್‌ನಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ತಾನ…!

19

ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದಲ್ಲಿಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು.

ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು (ಪ್ರಥಮ) ಪಡೆದಿದ್ದಾರೆ. ಇವರು ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಚಿನ್ಮಯಿ ಅವರು ದ್ವಿತೀಯ, ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಸಾಯಿ ಸಾಕೇತಿಕ ಚೆಕೂರಿ ಅವರು ತೃತೀಯ ಸ್ಥಾನ ಪಡೆದಿದ್ದಾರೆ.ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿ ಮಹೇಶ್ ಆನಂದ್ ಅವರು ಪ್ರಥಮ, ಮೈಸೂರಿನ ಬೇಸ್‌ ಪಿಯು ಕಾಲೇಜಿನ ವಾಸುದೇವ್ ಅವರು ದ್ವಿತೀಯ ಹಾಗೂ ಬೆಂಗಳೂರಿನ ನಾರಾಯಣ ಇ ಟೆಕ್ನೋ ಸ್ಕೂಲ್‌ನ ಉದಿತ್ ಮೋಹನ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಕೀರ್ತನಾ ಎಂ ಅರುಣ್ ಪ್ರಥಮ, ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಭುವನ್ ಬಿ ಅವರು ದ್ವಿತೀಯ ಹಾಗೂ ಹಾಸನದ ಮಾಸ್ಟರ್ಸ್‌ ಪಿಯು ಶ್ರೀಕಾಂತ್ ಎಂಲ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಬಿಎಸ್‌ಸಿ ಪಶುವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಪಿ ಮಹೇಶ್ ಆನಂದ್ ಅವರು ಪ್ರಥಮ, ಬೆಂಗಳೂರಿನ ಉದಿತ್ ಮೋಹನ್ ಅವರು ದ್ವಿತೀಯ ಹಾಗೂ ಬೆಂಗಳೂರಿನ ಸಾಯಿ ರಾಮ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಡಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಸಾಯಿ ಸಾಕೇತಿಕ ವಕುರಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಇದೇ ಕಾಲೇಜಿನ ಜಫಿನ್ ಬಿಜು, ತೃತೀಯ ಸ್ಥಾನವನ್ನು ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಪಿ ಚಿನ್ಮಯಿ ಪಡೆದಿದ್ದಾರೆ.ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ 10 ಸ್ಥಾನ ಬೆಂಗಳೂರು, 2 ಸ್ಥಾನ ಮಂಗಳೂರು ಹಾಗೂ 1 ಸ್ಥಾನ ಬಳ್ಳಾರಿಗೆ ಲಭಿಸಿದೆ.ಏಪ್ರಿಲ್ 29 ಹಾಗೂ 30ರಂದು ಸಿಇಟಿ ಪರೀಕ್ಷೆ ರಾಜ್ಯದ 431 ಕೇಂದ್ರಗಳಲ್ಲಿ ನಡೆದಿತ್ತು.
ಏಪ್ರಿಲ್ 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ ಶೇ. 79ರಿಂದ ಶೇ. 92 ವಿದ್ಯಾರ್ಥಿಗಳು ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಕ್ಕೆ ಪರೀಕ್ಷೆ ಬರೆದಿದ್ದಾರೆ.
ಸಿಇಟಿ ಫಲಿತಾಂಶಕ್ಕಾಗಿ ಈ ಕೆಳಗಿನ ವೆಬ್ ಸೈಟ್‍ಗಳಿಗೆ ಭೇಟಿ ನೀಡಿ.
http://kea.kar.nic.in
http://CET.kar.nic in
http://karresults.nic.in.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಗಾಳಿ ಆಂಜನೇಯನ ಕೃಪೆಯಿಂದ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ,ಶುಭ ಅಶುಭಗಳ ಲೆಕ್ಕಾಚಾರ 06/07/2019.

    ಇಂದು ಶನಿವಾರ ಶ್ರೀ ಆಂಜನೇಯನನ್ನು ನೆನೆಯುತ್ತಾ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ.21/06/2019.ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು. ಮೇಷ ಇಂದು ಮೇಷ ರಾಶಿಯವರು ನೂರಕ್ಕೆ ನೂರರಷ್ಟು ಯಶಸ್ಸು ನಿರೀಕ್ಷಿಸಿ ನಂತರ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ…

  • ಆಧ್ಯಾತ್ಮ

    ರುದ್ರಾಕ್ಷಿ ಧರಿಸುವುದರ ಹಿಂದಿದೆ ನಿಮಗೆ ಗೊತ್ತಿಲ್ಲದ ವೈಜ್ಞಾನಿಕ ಸತ್ಯ! ಹಾಗಾದ್ರೆ ರುದ್ರಾಕ್ಷಿ ಮಹತ್ವ ಏನು ಗೊತ್ತಾ???

    ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.

  • ಜ್ಯೋತಿಷ್ಯ

    ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಒಡೆದ ತೆಂಗಿನಕಾಯಿ ಕೆಟ್ಟಿದ್ರೆ ಏನರ್ಥ ಗೊತ್ತಾ..?

    ಹಿಂದೂ ಧರ್ಮದಲ್ಲಿ ದೇವರ ಪೂಜೆ ವೇಳೆ ತೆಂಗಿನ ಕಾಯಿ ಒಡೆಯುವ ಪದ್ಧತಿಯಿದೆ. ಅನೇಕ ಬಾರಿ ಒಡೆದ ತೆಂಗಿನಕಾಯಿ ಹಾಳಾಗಿರುತ್ತದೆ. ಪೂಜೆ ನಂತ್ರ ಹಾಳಾದ ತೆಂಗಿನಕಾಯಿ ನೀಡಿದ ಅಂಗಡಿ ಮಾಲೀಕನಿಗೆ ಕೆಲವರು ಬೈದ್ರೆ ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ತೆಂಗಿನಕಾಯಿ ಹಾಳಾಗಲು ಕಾರಣವೇನು? ಇದು ಅಶುಭ ಫಲ ನೀಡುತ್ತಾ? ಇದು ಮುಂದೆ ಬರಲಿರುವ ಕಷ್ಟದ ಮುನ್ಸೂಚನೆಯಾ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ. ನಿಮಗೂ ಈ ಸಮಸ್ಯೆ ಕಾಡಿದ್ದರೆ ಅವಶ್ಯವಾಗಿ ಈ ಸುದ್ದಿ ಓದಿ. ಪೂಜೆ ವೇಳೆ ಒಡೆದ ತೆಂಗಿನಕಾಯಿ ಹಾಳಾಗಿದ್ರೆ…

  • ಸುದ್ದಿ

    ಶ್ರೀಗಳು ಸಾಯುವ ಮುನ್ನ ಕೇಳಿದ ಕೊನೆಯ ಆಸೆ ಏನು ಗೊತ್ತಾ..?ಈ ಕಣ್ಣೀರಿನ ಸುದ್ದಿ ನೋಡಿ…

    ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ನಡೇ ಕಣ್ಣೀರಿನಲ್ಲಿ ಮುಳುಗಿದೆ.. ಬಡವರ ಬಂಧು.. ಜಾತಿ ಧರ್ಮ ಮತ ಬೇದ ಮಾಡದೇ ಕಾಯಕ ಯೋಗಿ ಪವಾಡ ಪುರುಷ ಶಿವಯೋಗಿ.. ಸಿದ್ದ ಪುರುಷ ಮಹಾಸ್ವಾಮಿಗಳು ಇಂದು ಬೆಳಿಗ್ಗೆ 11.44 ರಲ್ಲಿ ಭಕ್ತ ಕೋಟಿ ಸಾಗರವನ್ನು ಅಗಲಿದ್ದಾರೆ.. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ…

  • ಮನರಂಜನೆ, ಸುದ್ದಿ

    ಬಿಗ್ ಬಾಸ್ ಶಾಕಿಂಗ್ ಸುದ್ದಿ.!ರವಿ ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ..!ಹಾಗಾದ್ರೆ ಕೊನೆಯ ಸ್ಪರ್ಧಿ ಯಾರು?

    ಬಿಗ್ ಬಾಸ್ ಶಾಕಿಂಗ್ ಸುದ್ದಿ ಮನೆಯಿಂದ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕುರಿತಂತೆ ಬಿಗ್ ಬಾಸ್ ಸುದ್ದಿಯನ್ನು ನೀಡಿದೆ. ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ. ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ ಅವರ ವೋಟಿಂಗ್ ಸಹ ಬಂದ್ ಆಗಲಿದೆ. ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ…