ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದೆ.

ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ ಕನಸು ನಾನ್ ಸ್ಟಾಪ್ಮ್ಯೂಸಿಕಲ್ ಆಲ್ಬಮ್ ಮಾಡುವ ಕೆಲಸಕ್ಕೆ ಚಾಲನೇ ಅಂದೇ ಸಿಕ್ಕಿತಂತೆ. ಡಾಕ್ಟರೇಟ್ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ರವಿಚಂದ್ರನ್ಸು ಪತ್ನಿ ಶ್ರೀಮತಿ, ಮಕ್ಕಳಾದ ವಿಕ್ರಮ್,ಮನೋರಂಜನ್, ಗೀತಾಂಜಲಿ, ಅಳಿಯ ಅಜಯ್ ಭಾಗಿಯಾಗಿದ್ದರು.

ಈ ವೇಳೆ ಡಾಕ್ಟರೇಟ್ ಗೌರವ ಪಡೆದು ಮಾತನಾಡಿದ ರವಿಚಂದ್ರನ್, ಇನ್ನೂ ಮುಂದೆ ತಪ್ಪಿರುವದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ. ಡಾಕ್ಟರೇಟ್ ಗೌರವ ಸ್ವೀಕರಿಸಿ, ಇನ್ಮುಂದೆ ಹೊಸ ದಾರಿಯನ್ನು ಹಿಡಿಯುತ್ತೇನೆ. ನನ್ನನ್ನು ಗುರುತಿಸಿ ಸಿಎಂಆರ್ ಯುನಿವರ್ಸಿಟಿಯವರು ಡಾಕ್ಟರೇಟ್ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಹಿಂದೆಯೇ ಮೂರು ದಶಕಗಳಿಂದ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ಮಾಡಿದ ಸೇವೆಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರ ಬಹುದಿನದ ಆಸೆ ಈಡೇರಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ರವಿಚಂದ್ರನ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆ, ಸಂಗೀತ, ಸಂಭಾಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿದ್ದು, ಈ ಸಂದರ್ಭದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗುತ್ತದೆ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದ್ದು, ಹರಿಯಾಣ ವಿಧಾನಸಭಾ ಅವಧಿ ನವಂಬರ್ 2 ಕ್ಕೆ ಕೊನೆಗೊಳ್ಳಲಿದೆ. ಇನ್ನು ಜಾರ್ಖಂಡ್ ವಿಧಾನಸಭಾ ಅವಧಿ ಡಿಸೆಂಬರ್ 27ಕ್ಕೆ ಅಂತ್ಯವಾಗಲಿದ್ದು, ದೀಪಾವಳಿಗೂ ಮುನ್ನ…
ಇಂದು ಶುಕ್ರವಾರ 09/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ಮನೆಯಲ್ಲಿನ ಕೆಲವು ಬದಲಾವಣೆಗಳು ಪ್ರೀತಿಪಾತ್ರರೊಡನೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಸರಿಯಾದ ಜ್ಞಾನ ಮತ್ತು ತಿಳುವಳಿಕೆಯ ನಂತರ ಸ್ನೇಹಿತರಾಗಿ. ಶತ್ರುವನ್ನು ಕೂಡಾ ಪ್ರೀತಿಸುವಿರಿ. ವೃಷಭ:- ನೀವು ವಿವಾದಗಳು ಮತ್ತು ಸಂಘರ್ಷಗಳಿಂದ ದೂರವಿರಬೇಕು. ಬಹುದಿನದ ನಿರೀಕ್ಷೆ ಕನಸು ಕೈಗೂಡುವುದು. ನಿಮ್ಮ ಪ್ರೀತಿಪಾತ್ರರು ಇಂದು…
ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ,’ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ಇನ್ನು ಮುಂದೆ,ಬೆಂಗಳೂರಿನ ಪುಂಡ, ಭ್ರಷ್ಟ,ಪೋಕರಿಗಳಿಗೆ ನೀರಿಳಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.
ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…
ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಇಲ್ಲಿನ ಅರಣ್ಯ ಪ್ರದೇಶವೊಂದರಲ್ಲಿ 12 ರಿಂದ 14 ಮಂದಿ ಪುಂಡ ಕಾಮುಕರ ಗುಂಪೊಂದು ರಸ್ತೆಯಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿ ಅಟ್ಟಹಾಸ ಗೈದ ವಿಡಿಯೋ ಇದೀಗ ವೈರಲ್ ಆಗಿದೆ.