ಸುದ್ದಿ

ಪಡಿತರ ಚೀಟಿ ಹೊಂದಿರುವವರಿಗೆ ಇಲ್ಲಿದೆ ನೋಡಿ ಬಹುಮುಖ್ಯವಾದ ಮಾಹಿತಿ….!

144

ನೀವು ಪಡಿತರಚೀಟಿ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಅನಗತ್ಯವಾಗಿ ಪೂರೈಕೆ ಆಗುತ್ತಿರುವ ಪಡಿತರಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಜೂನ್ 1ರಿಂದ ಎರಡು ತಿಂಗಳುಗಳ ಕಾಲ ಇ-ಕೆವೈಸಿ ವಿಧಾನದ ಮೂಲಕ ಆಧಾರ್ ದೃಢೀಕರಣ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಇದರನ್ವಯ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಕುಟುಂಬ ಸದಸ್ಯರು ಬಯೋಮೆಟ್ರಿಕ್ ಕೊಡುವುದು ಕಡ್ಡಾಯವಾಗಿದೆ. ಯಾರು ಬಯೋಮೆಟ್ರಿಕ್ ನೀಡಿರುತ್ತಾರೋ ಅಂತಹವರ ಹೆಸರಿನಲ್ಲಿ ಮಾತ್ರ ಪಡಿತರ ವಿತರಿಸಲಾಗುತ್ತದೆ.

ವೃದ್ಧರು, ಕುಷ್ಠರೋಗಿಗಳು, ವಿಶೇಷ ಚೇತನರು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಇ – ಕೆವೈಸಿಯಿಂದ ವಿನಾಯಿತಿ ನೀಡಲಾಗಿದ್ದು, ಇನ್ನುಳಿದವರು ಕಡ್ಡಾಯವಾಗಿ ನೀಡಬೇಕಿದೆ.ಹಾಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿ ಮೃತರ, ಪರಸ್ಥಳದಲ್ಲಿ ನೆಲೆಸಿರುವವರ,

ಮದುವೆಯಾಗಿ ಗಂಡನ ಮನೆಗೆ ತೆರಳಿದವರ ಹೆಸರುಗಳು ಇನ್ನೂ ಇದ್ದು, ಇವರುಗಳ ಹೆಸರಿನಲ್ಲೂ ಪಡಿತರ ವಿತರಣೆಯಾಗುತ್ತಿರುವ ಕಾರಣ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಇ – ಕೆವೈಸಿ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೇರಳ ನಂತರ ಕರ್ನಾಟಕದಲ್ಲೂ ಬಾವಲಿ ಜ್ವರದ ಭೀತಿ- 8 ಜಿಲ್ಲೆಗಳಿಗೆ ಕಟ್ಟೆಚರ…..!

    ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ (ಬಾವಲಿ ಜ್ವರ)ದ ಸೋಂಕು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯಕೀಯ ವರದಿ ನೀಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ನಿಪಾ ವೈರಸ್ ಎಂದರೇನು?- ಲಕ್ಷಣಗಳೇನು?- ವೈರಸ್…

  • inspirational

    ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಪತ್ತೆಯಾದ ಅಸ್ಥಿಪಂಜರ….!

    ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…

  • ಆರೋಗ್ಯ

    ‘ ಹಸಿ ಶುಂಠಿ’ ಅನೇಕ ನೋವಿಗೆ ಪರಿಹಾರ..! ತಿಳಿಯಲು ಈ ಲೇಖನ ಓದಿ ..

    ನಿಮ್ಮ ಹೊಟ್ಟೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆನೋವು ಮತ್ತು ಕೆಳಹೊಟ್ಟೆ ಕಿವುಚಿದಂತಹ ಅನುಭವಾಗಿರಬಹುದು. ಸಾಮಾನ್ಯವಾಗಿ ಅಜೀರ್ಣತೆ ಹಾಗೂ ಒಗ್ಗದ ಆಹಾರ ಸೇವನೆಯಿಂದ ಹೊಟ್ಟೆ ಕೆಡುವುದು ಸಾಮಾನ್ಯವಾದ ತೊಂದರೆ. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಐಬಿಎಸ್ , ಮಲಬದ್ಧತೆ ಹಾಗೂ ಹೊಟ್ಟೆಯೊಳಗಣ ಉರಿಯೂತ ಕಾಣಿಸಿಕೊಳ್ಳುತ್ತದೆ.ಹೊಟ್ಟೆಯ ತೊಂದರೆಗಳಿಗೆ ಶುಂಠಿಯ ಕೆಲವು ಲಾಭಗಳ ವಿವರ ಇಲ್ಲಿದೆ.

  • ತಂತ್ರಜ್ಞಾನ

    ಕಂಪನಿಗಳಲ್ಲಿ ನಿರುದ್ಯೋಗಿಗಳ ಇಂಟರ್ವ್ಯೂ ಪಡೆಯುತ್ತೆ ಈ ರೋಬೋಟ್..!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ರಷ್ಯಾದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ರೋಬೋಟ್ ಒಂದನ್ನು ತಯಾರಿಸಿದೆ. ಈ ರೋಬೋಟ್ ಉದ್ಯೋಗವರಸಿ ಬರುವ ನಿರುದ್ಯೋಗಿಗಳ ಸಂದರ್ಶನ ಪಡೆಯಲಿದೆ. ಪ್ರಮುಖ ಕಂಪನಿಗಳು ಸೇರಿ ಸುಮಾರು 300 ಕಂಪನಿಗಳು ಈ ರೋಬೋಟ್ ಮೂಲಕ ಇಂಟರ್ವ್ಯೂ ಮಾಡಿಸ್ತಿವೆ. ಪೆಪ್ಸಿ, ಲೋರಿಯಲ್ ಸೇರಿದಂತೆ ಪ್ರಮುಖ ಕಂಪನಿಗಳಿಗೆ ಕೆಲಸಕ್ಕೆ ಸೇರಲು ನೀವು ನಿರ್ಧರಿಸಿದ್ದರೆ ನಿಮಗೆ ರೋಬೋಟ್ ವೇರಾ ಕರೆ ಮಾಡಬಹುದು. ಇಲ್ಲವೆ ವಿಡಿಯೋ ಕಾಲ್ ಮೂಲಕ ನಿಮಗೆ ಪ್ರಶ್ನೆಗಳನ್ನು ಕೇಳಬಹುದು. ಸೇಂಟ್ ಪೀಟರ್ಸ್ಬರ್ಗ್ ನ ಸ್ಟ್ರಾಫೇರಿ ಸಂಸ್ಥೆ ಈ ರೋಬೋಟ್ ಸಿದ್ಧಪಡಿಸಿದೆ….

  • ಉಪಯುಕ್ತ ಮಾಹಿತಿ

    ಸದ್ಯದಲ್ಲೇ “ಗೋವು ” ಆನ್ಲೈನ್ ಮಾರುಕಟ್ಟೆ ..!ತಿಳಿಯಲು ಈ ಲೇಖನ ಓದಿ ..

    ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್ ಸೈಟ್ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕವಾದ ವೆಬ್ಸೈಟ್ ಇದ್ದರೆ ಹೇಗಿರುತ್ತದೆ. ಇನ್ನು ಆರು ತಿಂಗಳು ಕಾದು ಕುಳಿತರೆ ಅದೂ ಸಿದ್ಧವಾಗಿ ಬಿಡುತ್ತದೆ. ಅದೂ ಓಎಲ್‌ಎಕ್ಸ್, ಕ್ವಿಕರ್ ಮಾದರಿಯಲ್ಲಿಯೇ.

  • ಸುದ್ದಿ

    ಮೈಸೂರು ದಸರಾ ವೇದಿಕೆಯಲ್ಲೇ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಶೆಟ್ಟಿ ಹಾಗು ನಿವೇದಿತಾ….!

    ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ. ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ….