ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ .

ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಈ ರಾಮ ಮಂದಿರವು ಧರ್ಮಸ್ಥಳಕ್ಕೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ.

ರಾಮ ನೆಲೆಸಿದ್ದ ಸ್ಥಳ : ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ನಂತರ ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಮತ್ತು ಯೋಗ ಗುರುಗಳಾಗಿದ್ದ ವಿಶೇಷ ದೈವಿಕ ಶಕ್ತಿಗಳನ್ನು ಹೊಂದಿದ್ದ ನಿತ್ಯಾನಂದ ಸ್ವಾಮಿ ಅವರು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಇಲ್ಲಿ ಉಳಿದುಕೊಂಡಿದ್ದರು ಆಗ ಅವರು ಇಲ್ಲಿ ರಾಮನ ಮಂದಿರ ನಿರ್ಮಾಣವಾಗ ಬೇಕೆಂದು ಭಾವಿಸಿದ್ದರು.

ಯಾರು ನಿರ್ಮಿಸಿದ್ದು? : 1978 ರ ವರೆಗೆ ಇಲ್ಲಿ ಬರೀ ಒಂದು ನಿತ್ಯಾನಂದ ಆಶ್ರಮವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ.1978 ರಲ್ಲಿ ಬೆಂಗಳೂರಿನ ಶ್ರೀ ಬಾಲಾ ಶಿವಯೋಗಿ ಮಹಾರಾಜ್ ಅವರು ರಾಮ ಮಂದಿರಕ್ಕೆ ಅಡಿಪಾಯ ಹಾಕಿದರು. ನಂತರ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಎರಡು ಎಕರೆ ಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು.2007 ರಲ್ಲಿ ಮಂದಿರದ ‘ಪ್ರತಿಷ್ಠ ಬ್ರಹ್ಮಕಲಾಶೋತ್ಸವ’ವನ್ನು 45 ದಿನಗಳ ಕಾಲ ನಡೆಸಲಾಯಿತು.
ಯಾವಾಗ ಭೇಟಿ ನೀಡುವುದು ಸೂಕ್ತ
ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಧರ್ಮಸ್ಥಳವು ಅತ್ಯಂತ ಅನುಕೂಲಕರ ಹವಾಮಾನವನ್ನು ಹೊಂದಿರುತ್ತದೆ. ಹೀಗಾಗಿ, ಹೆಚ್ಚಿನ ಪ್ರವಾಸಿಗರು ಈ ಅವಧಿಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ.
ತಲುಪುವುದು ಹೇಗೆ?
ದೇವಾಲಯವು ಮಂಜುನಾಥ ದೇವಸ್ಥಾನದಿಂದ ಪೂರ್ವಕ್ಕೆ3.5 ಕಿ.ಮೀ ದೂರದಲ್ಲಿರುವ ಬೆಳ್ತಂಡಿಗೆ ಹೋಗುವ ಮಾರ್ಗದಲ್ಲಿದೆ. ಕನ್ಯಾಡಿ ಶ್ರೀ ರಾಮ ಕ್ಷೇತ್ರವು ಮಂಗಳೂರಿನಿಂದ 74ಕಿಲೋಮೀಟರ್ ದೂರದಲ್ಲಿದೆ. ಮಂಗಳೂರು – ಧರ್ಮಸ್ಥಳ ರಸ್ತೆಯಲ್ಲಿರುವ ಧರ್ಮಸ್ಥಳಕ್ಕೆ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕಾರಣ ಈ ಸ್ಥಳಕ್ಕೆ ಭೇಟಿ ನೀಡುವುದು ಅಷ್ಟೊಂದು ಕಷ್ಟವೇನಲ್ಲ. ಸ್ಥಳೀಯ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಶ್ರವಣ ಬೆಳಗೋಳದವರೆಗೆ ಸುಲಭವಾಗಿ ಲಭ್ಯವಿವೆ, ಇದು ಹತ್ತಿರದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಆದ್ದರಿಂದ, ರಾಮ ಮಂದಿರವನ್ನು ನಗರದ ಎಲ್ಲಾ ಭಾಗಗಳಿಂದ ಸುಲಭವಾಗಿ ಪ್ರವೇಶಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…
ಬೆಂಗಳೂರು: ಟಾಲಿವುಡ್ ಖ್ಯಾತ ನಟ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು(ಫೆ.18) ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ತಾರಕರತ್ನ(39) ಕೊನೆಯುಸಿರೆಳೆದಿದ್ದಾರೆ. ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್ ಮಾಡಲಾಗಿತ್ತು. 23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ…
ನವದೆಹಲಿ, ಮೇ 02: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಹೊಸ ಸರ್ಕಾರ ಸ್ಥಾಪನೆಯಾದ ಬಳಿಕ, ಹಂತ ಹಂತವಾಗಿ ಬೆಲೆ ಏರಿಕೆ ಮಾಡಲು ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರೆದಿದೆ. ಈಗ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ…
ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ….
ನಟ ರಾಕಿಂಗ್ ಸ್ಟಾರ್ ಯಶ್ ರವರಿಗೆ ಅವರು ಅಂದುಕೊಂಡಂತೆ ಪತ್ನಿ ರಾಧಿಕಾ ಪಂಡಿತ್ ರವರಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ.ತಮ್ಮ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ…
ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ ಹುಡುಗಿಯರ ಅದೃಷ್ಟ, ದುರಾದೃಷ್ಟದ ಬಗ್ಗೆ ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ. ಈ ದಿನ ಗ್ರಹದಲ್ಲಿ ಬದಲಾವಣೆಯಾಗುತ್ತದೆ. ಈ ದಿನ ಹುಟ್ಟಿದ ಹುಡುಗಿಯರು ಸುಲಭವಾಗಿ ಯಶಸ್ಸು ಗಳಿಸ್ತಾರೆ. ಸಾಧನೆ ಶಿಖರಕ್ಕೇರುತ್ತಾರೆ. ಸುಖ-ಸಮೃದ್ಧಿ ನೆಲೆಸಿರುತ್ತದೆ. ಎಲ್ಲ ಕೆಲಸ ಯಶಸ್ವಿಯಾಗಿ…