News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಮನುಷ್ಯನಿಲ್ಲದ ಭಾರತದಲ್ಲಿ ರಸ್ತೆಗಳನ್ನು ಪ್ರಾಣಿಗಳು ಅವರಿಸುತ್ತಿವೆ.
ಶಿವನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಶ್ರೀ ಆಂಜಿನೇಯ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಕೂದಲು ಉದುರುತ್ತಿದ್ದರೆ. ಅದನ್ನು ತಡೆಗಟ್ಟಲು ಸುಲಭ ಉಪಾಯ ಇಲ್ಲಿದೆ ನೋಡಿ.!
30 ಸೆಕೆಂಡಿಗೆ ಮೊಬೈಲ್ ಫುಲ್ ಚಾರ್ಜ್ ಆಗುವ ಡಿವೈಸ್ ಕಂಡುಹಿಡಿದ ಭಾರತದ ಹುಡುಗಿ, ದೊಡ್ಡ ದೊಡ್ಡ ಕಂಪನಿಗಳು ಶಾಕ್.
ದುರ್ಗಾ ಮಾತೆಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಈಕೆ ಹೇಗೆ IPS ಆಫೀಸರ್ ಆದಳು ಎಂದು ಗೊತ್ತಾದರೆ ನಿಂತಲ್ಲಿಯೇ ಸೆಲ್ಯೂಟ್ ಹೊಡೆಯುತ್ತೀರಾ.
ಈ ಹುಡುಗಿ ತಯಾರಿಸಿದ 1800 ರೂಪಾಯಿಯ AC ಗಾಗಿ ವಿದೇಶಿ ಕಂಪನಿಗಳು ಪೈಪೋಟಿ, ಈಕೆ ಮಾಡಿದ ಟೆಕ್ನಿಕ್ ಏನು ಗೊತ್ತಾ!
ಬೇವು ಬೆಲ್ಲದ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ನೋಡಿ!
1.60 ಕೋಟಿ ರೂ ವಂಚನೆ, ಸಿಸಿಬಿಗೆ ದೂರು ನೀಡಿದ ಸ್ಯಾಂಡಲ್​ವುಡ್ ನಿರ್ದೇಶಕ
ಸುದ್ದಿ

ರೈತನ ಹೆಸರಿಗೆ ರೈಲನ್ನ ಬರೆದುಕೊಟ್ಟ ನ್ಯಾಯಾಲಯ, ಕಾರಣ ಮಾತ್ರ ಶಾಕಿಂಗ್.

60

ರೈಲು ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಜನಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಅತೀ ದೂರ ಪ್ರಯಾಣ ಮಾಡಲು ನೆರವಾಗುತ್ತಿರುವ ಸಾರಿಗೆ ಅಂದರೆ ಅದೂ ರೈಲು ಸಾರಿಗೆ ಮಾತ್ರ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಒಂದು ರೈಲು ಇಂಜಿನ್ ಬೆಲೆ ಸುಮಾರು 14 ರಿಂದ 17 ಕೋಟಿ ಇರುತ್ತದೆ, ಇನ್ನು ರೈಲುಗಳನ್ನ ಯಾರಿಗೂ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ, ಹೌದು ರೈಲುಗಳು ಚಲಿಸಲು ಪ್ರಮುಖವಾಗಿ ಬೇಕಾಗಿರುವುದು ರೈಲುಗಳು ಹಳಿಗಳು ಮತ್ತು ಎಲ್ಲಾ ರೈಲುಗಳು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ. ನಾವು ಈಗ ಹೇಳುತ್ತಿರುವ ಘಟನೆಯನ್ನ ಕೇಳಿದರೆ ನಿಮಗೆ ಒಂದು ಕ್ಷಣ ಶಾಕ್ ಆಗುವುದು ಗ್ಯಾರೆಂಟಿ, ಹೌದು ಒಂದು ಶತಾಬ್ದಿ ಎಕ್ಸ್ಪ್ರೆಸ್ ರೈಲನ್ನ ಒಬ್ಬ ರೈತನ ಹೆಸರಿಗೆ ಬರೆದುಕೊಟ್ಟ ಪ್ರಕರಣದ ಬಗ್ಗೆ ನೀವು ತಿಳಿದರೆ ಒಮ್ಮೆ ಆಶ್ಚರ್ಯ ಪಡುತ್ತೀರಾ.

ಈ ವಿಚಿತ್ರವಾದ ಪ್ರಕರಣ ನಡೆದಿದ್ದು ಚಂಡೀಗಢದ ಲೂಧಿಯಾನ ಅನ್ನುವ ಪ್ರದೇಶದಲ್ಲಿ, ಇಲ್ಲಿನ ಜಿಲ್ಲಾ ಸೆಕ್ಷನ್ ಕೋರ್ಟ್ ಇಂತಹ ಒಂದು ಸಂಚಲವನ್ನ ಉಂಟುಮಾಡುವ ತೀರ್ಪನ್ನ ಕೊಡುತ್ತದೆ, ಹಾಗಾದರೆ ಆ ತೀರ್ಪು ಏನು ಮತ್ತು ಅಂತಹ ತೀರ್ಪು ಕೊಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ. ರೈಲು ಹಳಿಗಳ ನಿರ್ಮಾಣದ ಸಮಯದಲ್ಲಿ ಭೂಮಿಯನ್ನ ಕಳೆದುಕೊಂಡ ರೈತರಿಗೆ ಅವರ ಭೂಮಿಗೆ ಆ ಸಮಯದಲ್ಲಿ ಇದ್ದ ಬೆಲೆಯನ್ನ ಕೊಡಲಾಗಿತ್ತು ಮತ್ತು ಆ ಕುಟುಂಬದ ಸದಸ್ಯರಿಗೆ ರೈಲ್ವೆ ಇಲಾಖೆಯನ್ನ ನೌಕರಿಯನ್ನ ಕೂಡ ಕೊಡಲಾಗಿತ್ತು.

2012 ರಲ್ಲಿ ರೈಲು ಹಳಿಗಳ ನಿರ್ಮಾಣ ಮಾಡುವ ಸಲುವಾಗಿ ಸಂಪೂರಣ್ ಸಿಂಗ್ ಅನ್ನುವ 45 ವರ್ಷದ ಒಬ್ಬ ರೈತನಿಂದ ಭೂಮಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು ಮತ್ತು ರೈತನಿಗೆ ಭೂಮಿಯ ನಷ್ಟ ಭರ್ತಿಗಾಗಿ 1.45 ಕೋಟಿ ರೂಪಾಯಿಯನ್ನ ರೈಲ್ವೆ ಇಲಾಖೆಯವರು ಕೊಡಬೇಕಾಗಿತ್ತು. ರೈಲ್ವೆ ಇಲಾಖೆಯವರು ಆ ರೈತನಿಗೆ ಅಷ್ಟು ಹಣವನ್ನ ಕೊಡದೆ ಕೇವಲ 42 ಲಕ್ಷ ಹಣವನ್ನ ಕೊಟ್ಟು ಸುಮ್ಮನಾಗಿತ್ತು, ತನಗೆ ಹಣ ಸಿಗದ ಕಾರಣ ಸಂಪೂರಣ್ ಸಿಂಗ್ ನ್ಯಾಯಾಲದ ಮೊರೆ ಹೋಗಿದ್ದಾರೆ. ಇನ್ನು ಈತನ ಕೇಸ್ ವಿಚಾರಣೆ ಮಾಡಿದ ಜಿಲ್ಲಾ ನ್ಯಾಯಾಲಯ 2015 ರಲ್ಲಿ ಜಿಲ್ಲಾ ನ್ಯಾಯಾಲಯವು ರೈತನಿಗೆ ಕೊಡಬೇಕಾಗಿದ್ದ ಪೂರ್ತಿ ಹಣವನ್ನ ಕೊಡಬೇಕು ಎಂದು ರೈಲ್ವೆ ಇಲಾಖೆಗೆ ಆದೇಶವನ್ನ ಹೊರಡಿಸುತ್ತದೆ ಜಿಲ್ಲಾ ನ್ಯಾಯಾಲಯ.

ನ್ಯಾಯಾಲಯದ ಈ ಆದೇಶಕ್ಕೆ ರೈಲ್ವ ಇಲಾಖೆ ಯಾವುದೇ ರೀತಿಯ ಸ್ಪಂಧನೆಯನ್ನ ಕೊಡುವುದಿಲ್ಲ, ಈ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದ ಸಂಪೂರಣ್ ಸಿಂಗ್ ಮತ್ತೇ ನ್ಯಾಯಾಲಯದ ಮೊರೆ ಹೋಗುತ್ತಾರೆ. ಈ ಸಮಯದಲ್ಲಿ ಆತನ ಕೇಸನ್ನು ವಿಚಾರಣೆ ಮಾಡಿದ ಜಿಲ್ಲಾ ನ್ಯಾಯಾಲದ ಹೆಚ್ಚುವರಿ ನ್ಯಾಯಾಧೀಶರಾದ ಜೈಪಾಲ್ ವರ್ಮಾ ಅವರು ಸ್ವರ್ಣ ಶತಾಬ್ದಿ ಎಕ್ಪ್ರೆಸ್ಸ್ ನಂಬರ್ 12030 ರೈಲನ್ನ ಆ ರೈತನ ಕೊಡಬೇಕು ಎಂದು ಒಂದು ಸಂಚಲನದ ತೀರ್ಪನ್ನ ಹೊರಡಿಸುತ್ತಾರೆ. ಈ ತೀರ್ಪನ್ನ ಕೇಳಿದ ರೈಲ್ವೆ ಇಲಾಖೆಗೆ ಅವರ ತಪ್ಪಿನ ಅರಿವಾಗಿ ನ್ಯಾಯಾಲದ ಬಳಿ ಕ್ಷಮೆಯನ್ನ ಕೋರಿ ಆ ರೈತನಿಗೆ ಕೊಡಬೇಕಾಗಿದ್ದ ಭಾಕಿ ಹಣವನ್ನ ಕೊಡುತ್ತಾರೆ. ನ್ಯಾಯಾಲಯ ಕೊಟ್ಟ ಆ ಸಂಚಲನ ತೀರ್ಪಿನಿಂದ ರೈಲ್ವೆ ಇಲಾಖೆಗೆ ಭಾರಿ ಮುಖಭಂಗ ಆಗಿದ್ದು ಮಾತ್ರ ನಿಜ.

About the author / 

Basavaraj Gowda

Categories

ಏನ್ ಸಮಾಚಾರ