ಹೌದು ರಾಗಿ ತಿಂದವ ಯೋಗಿ ಎನ್ನುವ ಮಾತಿನಂತೆ ರಾಗಿ ನಮ್ಮ ಪುರಾತನ ಆಹಾರ ಧಾನ್ಯಗಳಲ್ಲಿ ಒಂದಾಗಿದೆ ಅತಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಇದನ್ನು ಸೇವಿಸಿದರೆ ನಮ್ಮ ದೇಹವು ಸದಾಕಾಲ ಸಮೃದ್ಧತೆಯಿಂದ ಕೂಡಿರುತ್ತದೆ ರಾಗಿಯಲ್ಲಿ ಹಲವಾರು ವಿಧದ ರೆಸಿಪಿಗಳನ್ನು ತಯಾರಿಸುವುದು ಉಂಟು ಆ ಪ್ರದೇಶದ ಅನುಕೂಲಕ್ಕೆ ತಕ್ಕಂತೆ ಕೆಲವರು ರಾಗಿಮುದ್ದೆ ರಾಗಿರೊಟ್ಟಿ ರಾಗಿ ಗಂಜಿಯನ್ನು ಸಾಮಾನ್ಯವಾಗಿ ಸೇವನೆ ಮಾಡುತ್ತಾರೆ ಇನ್ನೂ ನೀವು ರಾಗಿ ಗಂಜಿಯನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದು ನಿಮಗೆ ಗೊತ್ತಾ ಇದನ್ನು ತಿಳಿದರೆ ಇಂದಿನಿಂದಲೇ ಪ್ರತಿದಿನ ರಾಗಿಗಂಜಿ ಕುಡಿಯುವುದಕ್ಕೆ ಅಭ್ಯಾಸವನ್ನು ಮಾಡಿಕೊಳ್ಳುತ್ತೀರಾ ಹಾಗಾದರೆ ರಾಗಿ ಗಂಜಿಯ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳೋಣ.
ರಾಗಿ ಅಥವಾ ರಾಗಿ ಗಂಜಿ ರಾಗಿಯಲ್ಲಿ ಯಾವುದೇ ಆಹಾರದಲ್ಲಿ ಲಭಿಸದ ನಮಗೆ ತುಂಬಾ ಉಪಯೋಗ ಆಗುವ ಮೆಕ್ಯುನೈನ್ ಅಮೈನೋ ಆಮ್ಲವು ರಾಗಿಯಲ್ಲಿ ತುಂಬಾ ಹೆಚ್ಚಾಗಿ ಇರುತ್ತದೆ ಅದಕ್ಕೆ ರಾಗಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ ಅಷ್ಟೆ ಅಲ್ಲದೆ ರಾಗಿ ಗಂಜಿಯನ್ನು ಕುಡಿಯುವುದರಿಂದ ನಮ್ಮ ಶರೀರಕ್ಕೆ ತುಂಬಾ ಒಳ್ಳೆಯದು ಆಗುತ್ತದೆ ಅದೇನು ಎಂದು ಈಗ ಈ ಲೇಖನದಲ್ಲಿ ತಿಳಿಯೋಣ. ರಾಗಿಯನ್ನು ಅನೇಕ ರೀತಿಯಲ್ಲಿ ಅಡುಗೆಗಳಲ್ಲಿ ಉಪಯೋಗಿಸಿ ತಿನ್ನಬಹುದು ಎಲ್ಲದಕ್ಕಿಂತಲೂ ರಾಗಿ ಗಂಜಿ ಫೇಮಸ್ ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಈ ಕ್ಯಾಲ್ಸಿಯಂ ಮೂಲೆಗಳಿಗೆ ಹೆಚ್ಚು ಬಲವನ್ನು ತಂದುಕೊಡುತ್ತದೆ ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ವೃದ್ಧರಿಗೆ ರಾಗಿ ತುಂಬಾ ಉಪಯೋಗ ಆಗುತ್ತದೆ.
ರಾಗಿ ಗಂಜಿಯ ಉಪಯೋಗಗಳು.
ಕ್ಯಾನ್ಸರ್ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ: ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.
ರಕ್ತಹೀನತೆಯನ್ನು ತಡೆಯುತ್ತದೆ: ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.
ವಿಷ ಆಮ್ಲವನ್ನು ತೆಗೆದುಹಾಕುತ್ತದೆ: ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತದೆ : ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಇದು ತಗ್ಗಿಸುತ್ತದೆ.
ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ : ಕಡಿಮೆ ಫೈಬರ್ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮಾರಾಟ ಪ್ರಕ್ರಿಯೆ 2020ರ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾಗಿ ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ. ನಿರ್ಮಲಾ ಸೀತಾರಾಮನ್ ಮಾತನಾಡಿ, ಸರ್ಕಾರದಿಂದ ನಡೆದ ಅಂತರರಾಷ್ಟ್ರೀಯ ರೋಡ್ ಷೋಗಳಲ್ಲಿ ಏರ್ ಇಂಡಿಯಾ ಖರೀದಿಗೆ ಹೂಡಿಕೆದಾರರು ‘ಸಾಕಷ್ಟು ಆಸಕ್ತಿ’ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಏರ್ ಇಂಡಿಯಾ ಮಾರಾಟಕ್ಕೆ ಮುಂದಾದಾಗ ಹೂಡಿಕೆದಾರರಿಂದ ಸಕಾರಾತ್ಮಕವಾದ ಸ್ಪಂದನೆ ಬಂದಿರಲಿಲ್ಲ….
ಮುಂದಿನ ಕೆಲ ದಿನಗಳಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ತರಲು Huawei ತುದಿಗಾಲಲ್ಲಿ ನಿಂತಿದೆ, ಭಾರತೀಯರು 4ಜಿ ತಂತ್ರಜ್ಞಾನದ ರುಚಿ ಸವಿಯುತ್ತಿರುವ ಬೆನ್ನಲ್ಲೇ ಇದೀಗ ೫ಜಿ ತಂತ್ರಜ್ಞಾನವು ಭಾರತಕ್ಕೆ ಬರುತ್ತಿರುವುದು ಕೌತುಕಕ್ಕೆ ಕಾರಣವಾಗಿದೆ.
ಯುರೋಪ್ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ. ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್ಗೆ ತಲುಪಿದನು. ಯುರೋಪ್ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ. ಭಾರತವನ್ನು ವಾಸ್ಕೋಡಿಗಾಮನಿಗಿಂತ…
ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದರೆ. ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ ಕನ್ನಡ ಕಲಿಗೆ ಒತ್ತು ನೀಡಿದ್ದಾರೆ.ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್. ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್ಪಿ ಪುತ್ರಿ ಖುಷಿ ಸಹ ಪಾಠ…
ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಹಾಗೆಯೇ ಕೊಬ್ಬನ್ನು ಕರಗಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ, ಒಂದೊಂದು ಹಣ್ಣಿನಲ್ಲಿ ಒಂದೊಂದು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ನಮಗೆ ಸಿಗುತ್ತದೆ . ಹೀಗಾಗಿ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅದರ ಲಾಭಗಳು ನಮಗೆ ಸಿಗುತ್ತದೆ. ಕೆಲವು ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಲ್ಲದೆ ಇದ್ದರೂ ಅದರಲ್ಲಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇರುತ್ತದೆ. ಹಾಗೆಯೆ ಅದರಲ್ಲಿ ಅವಕಾಡೊ(ಬೆಣ್ಣೆ ಹಣ್ಣು) ಹಣ್ಣು ಕೂಡ ಒಂದಾಗಿದೆ. ಅವಕಾಡೊ ಹಣ್ಣು…
ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್ಗಳು ದೇಹಕ್ಕೆ ಆರಾಮ ಕೊಡುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಪೋಲೆಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ. ಬೆಲ್ಲದಲ್ಲಿ ಮೆಗ್ನೀ ಷಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16…