ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಕೊರೊನ ಸಮಯದ ಲಾಕ್ ಡೌನ್ ನಲ್ಲಿ ಈ ಕಲಾವಿದ ಕಲ್ಲಿನಲ್ಲಿ ರಚಿಸಿದ ಕಲಾಕೃತಿಗೆ ಒಳ್ಳೆಯ ಬೆಲೆ ದೊರಿತಿದೆ ಈ ಲಾಕ್ ಡೌನ್ ನಲ್ಲಿಇದ್ದರು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಿದ್ದಾರೆ.
ಹೌದು ಈ ಕಲಾಕೃತಿಯನ್ನು ಮಾಡಿದ ಮಲ್ಲಪ್ಪ ಬಡಿಗೇರ ಅವರು ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದವರು . ಈ ಕ್ವಾರಂಟೈನ್ನ 14 ಅವಧಿಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು 10 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ. ಕ್ವಾರಂಟೈನ್ನಲ್ಲೂ ಕೂಡ ತಮ್ಮ ಕಾಯಕವನ್ನು ಬಿಡದ ಮಲ್ಲಪ್ಪನವರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಲಾವಿದ ಮಲ್ಲಪ್ಪ ಅವರು ಲೋಕಾಪುರದ ಮೊರಾರ್ಜಿ ಶಾಲೆಯಲ್ಲಿ ಪತ್ನಿ ಲಕ್ಷ್ಮಿ ಮತ್ತು ಮಕ್ಕಳೊಂದಿಗೆ ಕ್ವಾರಂಟೈನ್ ಆಗಿದ್ದರು. ಪತ್ನಿಯನ್ನು ಕರೆದುಕೊಂಡು ಬರಲು ಮಹಾರಾಷ್ಟ್ರದ ರತ್ನಗಿರಿಗೆ ತೆರಳಿ ಮರಳಿ ಬರುವಾಗ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು. ಆಗ ಮಲ್ಲಪ್ಪ ಅವರ ಕೋರಿಕೆಯಂತೆ ಶಿಲ್ಪಕಲೆಯ ಕೇಂದ್ರದಲ್ಲಿ ಕಲ್ಲು ಹಾಗೂ ಉಳಿಯನ್ನು ತಂದುಕೊಟ್ಟಿದ್ದರು.
ಆಗ ಎರಡೆನೆಯ ದಿನದಂದು ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಕ್ವಾರಂಟೈನ್ ಜೂ. 1 ರಂದು ಪೂರ್ಣವಾಗುತ್ತಿದ್ದಂತೆ ಗಣೇಶನ ವಿಗ್ರಹ ರೆಡಿಯಾಗಿತ್ತು. ಅಧಿಕಾರಿಗಳು ಭರವಸೆ ನೀಡಿದಂತೆ ಈ ವಿಗ್ರಹವನ್ನು 10 ಸಾವಿರಕ್ಕೆ ಖರೀದಿಸಿದ್ದಾರೆ. ಈ ವಿಗ್ರಹವನ್ನು ನೋಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ, ಗೌತಮ ಬುದ್ಧನ ಮೂರ್ತಿಗೆ ಆರ್ಡರ್ ನೀಡಿದ್ದಾರೆ.
ಮಲ್ಲಪ್ಪನವರು ಉತ್ತಮ ಕಲಾವಿದ ಎಂದು ನಮಗೆ ಗೊತ್ತಿತ್ತು ಆದ್ದರಿಂದ ಅವರ ಬೇಡಿಕೆಯಂತೆ ಕಲ್ಲು ಮತ್ತು ಉಳಿಯನ್ನು ತಂದುಕೊಟ್ಟಿದ್ದವು ಎಂದಿದ್ದಾರೆ. ಮಲ್ಲಪ್ಪನವರು 14 ದಿನಗಳಲ್ಲಿ ಕೆತ್ತನೆ ಮಾಡಿದ ಗಣೇಶನ ವಿಗ್ರಹವನ್ನು ಪಂಚಾಯಿತಿಯವರು ಖರೀದಿ ಮಾಡಿದ್ದಾರೆ. ನನ್ನ ಕಲೆಗೆ ಅವಕಾಶ ಹಾಗೂ ಬೆಲೆ ದೊರೆತಿದ್ದಕ್ಕೆ ಖುಷಿಯಾಗಿದೆ. ನನಗೆ ಈಗ ಮತ್ತಷ್ಟು ಬೇಡಿಕೆ ಬಂದಿದೆ ಎನ್ನುತ್ತಾರೆ ಮಲ್ಲಪ್ಪ ಬಡಿಗೇರ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪರೂಪದ ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ ಮಾಡಲಾಗಿದೆ.
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ. ಅಲ್ಲದೆ, ಈ ಮಕ್ಕಳ ಹೋಂ ವರ್ಕ್ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ…
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್ ಹಾಗೂ ಸ್ಟೌ ನೀಡುವ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಇದೇ ವರ್ಷದ ಡಿಸೆಂಬರ್ 1 ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ,…
ಮನುಧ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಹೇಳಲಾಗುತ್ತೆ. ಆದ್ರೆ ಅಂತಹ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲೇಬಾರದು.ಅದರಲ್ಲೂ ಕೆಲವೊಂದು ಕಾಯಿಲೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರಕೆ ಇಂದ ಇರಲೇ ಬೇಕು. ಆದರೆ ಅನೇಕರಿಗೆ ಯಾವುದೇ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಗಾಬರಿಯಿಂದ ಮಾಡಲು ಹೋಗುವುದಿಲ್ಲ.ಆದರೆ ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. *ಹಾರ್ಟ್…
ಬುದ್ದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇನ್ನೂ ಕೇವಲ ಎರಡು ವರ್ಷದ ಮಗುವೆ ಸಾಕ್ಷಿ. ಈ ಮಗುವಿನ ಬುದ್ದಿವಂತಿಕೆ ಅವಳ ವಯಸ್ಸಿಗೆ ಮೀರಿದ್ದು.ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಕರೆಯುವ ಮೈಸೂರಿನ ಪುಟ್ಟಪೋರಿ ಈಡೀ ದೇಹವೇ ಮೆಚ್ಚವಂತ ಸಾಧನೆ ಮಾಡಿದ್ದಾಳೆ. ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿರುವ ಮೈಸೂರಿನ ಹಳ್ಳದಕೇರಿ ನಿವಾಸಿಯಾಗಿರುವ ಗಣೇಶ್ ಹಾಗೂ ನಯನ ದಂಪತಿಯ ಸುಪುತ್ರಿ ದ್ಯುತಿ ಎರಡೇ ವರ್ಷಕ್ಕೆ ಇಡೀ ಜಗತ್ತನ್ನು ಗೆದ್ದು ಬಿಗಿದ್ದಾಳೆ. ತನ್ನ ಬುದ್ಧಿ ಸಾಮಾರ್ಥ್ಯದಿಂದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿ…