ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಆಯೋಜಿ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಹುಬ್ಬಳಿಯ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು.
ಅವರು “ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು” ಹಾಡು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಕೊನೆಗೆ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದೊಡನೆ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳಕಾಲ ಇಲ್ಲೇ ಮಾಡಲಾಗಿತ್ತು ಎಂದರು.
ಹುಬ್ಬಳ್ಳಿ ಜನರ ಪ್ರೀತಿ ಹಾಗೂ ಸಾವಜೀ ಹೋಟೆಲ್ ಮಾಂಸದೂಟ ಮರೆಯಲು ಸಾಧ್ಯವೇ ಎಂದಾಗ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ನಟಸಾರ್ವಭೌಮ ಚೆನ್ನಾಗಿ ಮೂಡಿಬಂದಿದೆ. ಜನರು ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ಪವರ್ ಸ್ಟಾರ್ ಹೇಳಿದ್ರು.
ಇದಕ್ಕು ಮುನ್ನ ಕಾರ್ಯಕ್ರಮಕ್ಕೆ ತೆರಳುವಾಗ, ಏಕೆ ಈ ಕಾರ್ಯಕ್ರಮವನ್ನು ಹುಬ್ಬಳಿಯ ಲ್ಲೇ ಮಾಡುತ್ತಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಮಗೆ ಕರ್ನಾಟಕ ಎಲ್ಲಾ ಒಂದೇ. ನಾವು ಎಲ್ಲಾ ಜಾಗದಲ್ಲೂ ಕಾರ್ಯಕ್ರಮ ಮಾಡಿದ್ದೇವೆ. ಹುಬ್ಬಳ್ಳಿಯಲ್ಲೂ ಮಾಡುತ್ತಿದ್ದೇವೆ, ಮುಂದೆ ಬೇರೆ ಕಡೆಯೂ ಮಾಡುತ್ತೇವೆ. ಇದರಲ್ಲಿ ವಿಶೇಷ ಏನಿಲ್ಲ ಎಂದರು.
ಅಭಿಮಾನಿಗಳು ನನ್ನ ಈ ಚಿತ್ರವನ್ನು ಮೆಚ್ಚುತ್ತಾರೆ ಎಂದು ನನಗೆ ನಂಬಿಕೆ ಇದೆ. ಅಭಿಮಾನಿ ದೇವರುಗಳೇ ನನಗೆ ಎಲ್ಲಾ ಎಂದರು. ಐಟಿ ಬಗ್ಗೆ ಮಾತನಾಡಿದ ಅವರು ನಾನು ಎಲ್ಲಾ ತೆರಿಗೆ ಕಟ್ಟಿದ್ದೇನೆ. ತನಿಖೆಗೆ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ದವಾಗಿದ್ದೇನೆ ಎಂದರು. ಮತ್ತು ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಪಾಕ್ ಪರವಾಗಿ ಘೋಷಣೆಯನ್ನು ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಇಂದು ಜಾಮೀನು ನೀಡಿದೆ. ಹೌದು ಹುಬ್ಬಳಿಯ ನ್ಯಾಯಾಲಯ ಜೆಎಂಎಫ್ಸಿ-2 ಇಂದು ಜಾಮೀನಿನ ಮೇಲೆ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದೆ. ಇದು ಪೋಲೀಸರ ನಿರ್ಲ್ಯಕ್ಷ ಹಾಗೂ ಇವರ ಸೋಮಾರಿತನದಿಂದ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಜಾಮೀನಿನ ಮುಖಾಂತರ ಹೊರಗಡೆ ಬಂದಿದ್ದಾರೆ ಇದರ ವಿರುದ್ಧ ವಕೀಲ ಸಂಘದ ಅಧ್ಯಕ್ಷ ಅಶೋಕ್ ಕಿಡಿಕಾರಿದ್ದಾರೆ. ಹುಬ್ಬಳಿ ಗ್ರಾಮೀಣದ ಪೊಲೀಸರು ಸರಿಯಾದ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಸದೇ ಇರುವ ಕಾರಣ ನ್ಯಾಯಾಲಯ ದೇಶ…
ಇತ್ತೀಚೆಗೆ ಶಿವರಾಜ್ಕುಮಾರ್ ಅವರು ತಮ್ಮ ನಿವಾಸ ನಾಗಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರು ಬಿಸಿಲಲ್ಲಿ ನಿಂತಿದ್ದ ಹಿರಿಯ ವೃದ್ಧರೊಬ್ಬರನ್ನು ನೋಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಶಿವಣ್ಣ ವ್ಯಕ್ತಿ ನಿಂತಿದ್ದ ಜಾಗದಿಂದ ಸ್ವಲ್ಪ ಮುಂದೆ ಹೋಗಿದ್ದಾರೆ. ನಂತರ ಅವರನ್ನು ನೋಡಿ ಮತ್ತೆ ಕಾರು ರಿವರ್ಸ್ ಮಾಡಿ ವಾಪಸ್ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಂಡು ವೃದ್ಧರೊಬ್ಬರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಶಿವರಾಜ್ಕುಮಾರ್ ಅವರು ಹಣ ನೀಡುತ್ತಿರುವಾಗ ಪಕ್ಕದಲ್ಲಿದ್ದ ವ್ಯಕ್ತಿ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ….
ಖಾಸಗಿ ಶಾಲೆಗಳು ಇದೀಗ ಎಲ್ಲೆಂದರೆಲ್ಲಿ ತಲೆಯೆತ್ತುತ್ತಿವೆ. ಗಲ್ಲಿಗೊಂದರಂತೆ ಶಾಲೆಗಳು ನಮಗೆ ಕಾಣಸಿಗುತ್ತವೆ. ಶಿಕ್ಷಣವು ಮೂಲಭೂತ ಹಕ್ಕಾಗಿರದೇ, ಇದೀಗ ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ.
ಇಂಟರ್ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಖುಷಿಯಾಗುತ್ತಾರೆ. ಅಲ್ಲದೆ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡುತ್ತಾರೆ. ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ…
ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದರು. ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್,…