ಜ್ಯೋತಿಷ್ಯ

`ಜೈ ಶ್ರೀರಾಮ್’ ಹೇಳುವಂತೆ ಸತತ 7 ಗಂಟೆ ಥಳಿಸಿ ಯುವಕ ದುರ್ಮರಣ……!

122

ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಜಾರ್ಖಂಡ್ ನಲ್ಲಿ ನಡೆದಿದೆ.ಸಾರ್ವಜನಿಕರು 24 ವರ್ಷದ ಶಾಮ್ಸ್ ತಬ್ರೆಜ್ ಗೆ ಜಾರ್ಖಂಡ್ ನ ಸೀರೈಕೆಲ- ಖರ್‍ಸವಾನ್ ಹಾಗೂ ಸಿಂಘ್ಬುಮ್ ಜಿಲ್ಲೆಯಲ್ಲಿ ಥಳಿಸಿದ್ದಾರೆ. ಮಂಗಳವಾರ ಸಂಜೆ ಸಾರ್ವಜನಿಕರು ಶಾಮ್ಸ್ ನನ್ನು ಕಂಬಕ್ಕೆ ಕಟ್ಟಿ ಸುಮಾರು 7 ಗಂಟೆಗಿಂತಲೂ ಹೆಚ್ಚು ಕಾಲ ಚೆನ್ನಾಗಿ ಥಳಿಸಿದ್ದರು. ಅಲ್ಲದೆ ಇದೇ ವೇಳೆ ಶ್ರೀರಾಮ್’,ಜೈ ಹನುಮಾನ್’ ಎಂದು ಪಠಿಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಅಂದರೆ ಬುಧವಾರ ಬೆಳಗ್ಗೆ ಆತನನ್ನು ಸಾರ್ವಜನಿಕರು ಪೊಲೀಸರ ಕೈಗೆ ನೀಡಿದ್ದಾರೆ. ಈ ವೇಳೆ ಥಳಿತಕ್ಕೊಳಗಾದ ಶಾಮ್ಸ್ ಅರೆ ಪ್ರಜ್ಞಾವಸ್ಥೆಯಲ್ಲಿದ್ದನು ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಯುವಕನಿಗೆ ಥಳಿಸುತ್ತಿರುವ ದೃಶ್ಯವನ್ನು ಇತರರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಳಿತಕ್ಕೊಳಗಾದ ಶಾಮ್ಸ್ ಗೆ ಚಿಕಿತ್ಸೆ ನೀಡಲು ಕರೆದೊಯ್ಯುತ್ತೇವೆ ಎಂದು ಬೇಡಿಕೊಂಡರೂ ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಅಲ್ಲಿಯೂ ಆತನ ಸ್ಥಿತಿ ಚಿಂತಾನಕವಾಗುತ್ತಿದ್ದಂತೆಯೇ ಯುವಕನನ್ನು ಜಿಲ್ಲೆಯ ಸದಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಯುವಕ ಮೃತಪಟ್ಟಿರುವ ವಿಚಾರವನ್ನು ಕುಟುಂಬಸ್ಥರು ಅಲ್ಲಗೆಳೆದಿದ್ದಾರೆ. ಹೀಗಾಗಿ ಆತನನ್ನು ಜೆಮ್ ಶೆಡ್ ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ತಿಳಿಸಿದ್ದಾರೆ. ಅಂತೆಯೇ ಅಲ್ಲಿಗೆ ಕರೆದೊಯ್ದಾಗಲೂ ವೈದ್ಯರು, ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಶಾಮ್ಸ್ ಅನಾರೋಗ್ಯದಿಂದ ಬಳಲುತ್ತಿದ್ದನು. ಹೀಗಾಗಿ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಆತನ ಕುಟುಂಬಸ್ಥರು ನೀಡಿದ ದೂರಿನಂತೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶಾಮ್ಸ್ ಜೆಮ್‍ಶೆಡ್ ಪುರದಿಂದ ಕರ್‍ಸೋವಾದಲ್ಲಿರುವ ತಮ್ಮ ಮನೆಗೆ ಮಂಗಳವಾರ ವಾಪಸ್ಸಾಗುತ್ತಿದ್ದನು. ಈ ವೇಳೆ ಶಾಮ್ಸ್ ಜೊತೆ ಆತನ ಸ್ನೇಹಿತರು ಕೂಡ ಇದ್ದರು. ಇನ್ನೇನು ತನ್ನ ಮನೆಗೆ 5 ಕಿ.ಮೀ ಇರುವಾಗಲೇ ಸಾರ್ವಜನಿಕರು ಇವರನ್ನು ಹಿಡಿದು ಥಳಿಸಿದ್ದಾರೆ.

ಥಳಿಸಲು ಕಾರಣವೇನು?
ಸೈಕಲ್ ಕಳವಾಗಿದ್ದ ಸಂದರ್ಭದಲ್ಲೇ ಈ ಯುವಕರು ಅದೇ ಸ್ಥಳದಲ್ಲಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಇವರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು, ಯುವಕರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಯುವಕರ ಮೇಲೆ ಹಲ್ಲೆ ನಡೆಯುತ್ತಿದ್ದಂತೆಯೇ ಶಾಮ್ಸ್ ಜೊತೆ ಇದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಈತ ಮಾತ್ರ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡಿದ್ದನು ಎಂದು ಶಾಮ್ಸ್ ಸಂಬಂಧಿಕರು ಘಟನೆ ಬಗ್ಗೆ ವಿವರಿಸಿದ್ದಾರೆ.ಇಡೀ ರಾತ್ರಿ ಸಾರ್ವಜನಿಕರು ನನಗೆ ಚೆನ್ನಾಗಿ ಥಳಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಬೆಳಗ್ಗೆ ಪೊಲೀಸರಿಗೆ ನನ್ನನ್ನು ಹಸ್ತಾಂತರಿಸಿದ್ದಾರೆ ಎಂದು ಶಾಮ್ಸ್ ಸಾಯುವ ಮೊದಲು ಸಾರ್ವಜನಿಕರ ಮೇಲೆ ಆರೋಪ ಮಾಡಿದ್ದಾನೆ.

ನನ್ನನ್ನು ನೋಡಲೆಂದು ಸಹೋದರ ಪೊಲೀಸ್ ಠಾಣೆ ಬಂದಿದ್ದನು. ಈ ವೇಳೆ ಪೊಲೀಸ್ ಅಧಿಕಾರಿಗಳು ಆತನನ್ನು ಬೆದರಿಸಿ, ಲಾಠಿಯಿಂದ ಹೊಡೆದು ಹೊರದಬ್ಬಿದ್ದಾರೆ. ನೀನು ಒಬ್ಬ ಕಳ್ಳನನ್ನು ನೋಡಲು ಠಾಣೆಗೆ ಬಂದಿದ್ದೀಯಾ ಎಂದು ಬೈದಿದ್ದಾರೆ. ಅಲ್ಲದೆ ನಿನ್ನನ್ನು ಕೂಡ ಜೈಲಿಗೆ ಹಾಕುತ್ತೇವೆ. ನಾವು ಆರೋಪಿಯನ್ನು ಮಾತನಾಡಿಸಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಲ್ಲ ಎಂದು ಸಹೋದರನ ಮೇಲೆ ಕಿಡಿಕಾರಿದ್ದಾರೆ ಎಂದು ಶಾಮ್ಸ್ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಆಸ್ಪತ್ರೆಯಲ್ಲಿರುವಾಗ ತಿಳಿಸಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ