ಸುದ್ದಿ

ಪನ್ನೀರ್ ಪರೋಟಾದಲ್ಲಿ ಸಿಕ್ಕ ವಸ್ತು ನೋಡಿ ಮೂರ್ಚೆ ಬಿದ್ದ ವ್ಯಕ್ತಿ…!

73

ಲಕ್ನೋಪರೋಟಾ ಆರ್ಡರ್ ಮಾಡಿದ್ದಾನೆ. ಪನ್ನೀರ್ ಪರೋಟಾ ತೆರೆಯುತ್ತಿದ್ದಂತೆ ಅದ್ರಲ್ಲಿ ಜಿರಳೆ ಕಂಡಿದೆ. ಜಿರಳೆ ನೋಡ್ತಿದ್ದಂತೆ ಗ್ರಾಹಕರ ಆರೋಗ್ಯದಲ್ಲಿ ಏರುಪೇರಾಗಿದೆ. ಆತ ಮೂರ್ಚೆ ಹೋಗಿದ್ದಾನೆ.

ಪರೋಟಾದಲ್ಲಿ ಜಿರಳೆ ಕಂಡ್ರೂ ಮಾಲೀಕ ಮಾತ್ರ ಮಾತು ಬದಲಿಸಿದ್ದಾನೆ. ಹೊರಗಿನಿಂದ ಬಂದಿದೆ ಎಂದಿದ್ದಾನೆ. ಗ್ರಾಹಕ ತಕ್ಷಣ ಎಫ್ ಎಸ್ ಡಿ ಎ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಪನ್ನೀರ್ ಪರೋಟಾವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಎಫ್ ಎಸ್ ಡಿ ಎ ಅಧಿಕಾರಿಗಳು ಡಾಬಾದ ಅಡುಗೆ ಮನೆ ಪರಿಶೀಲಿಸಿದ್ದಾರೆ.

ಅಡುಗೆ ಮನೆಯಲ್ಲಿ ಸ್ವಚ್ಛತೆ ಕೊರತೆ ಕಂಡು ಬಂದಿದೆ. ಕೊಳಕಿನಲ್ಲಿಯೇ ಅಡುಗೆ ಮಾಡ್ತಿರುವುದು ಬಹಿರಂಗವಾಗಿದೆ. ಆಹಾರ ಸಂಗ್ರಹಿಸಲು ಮತ್ತು ಕೊಳಕು ನೀರು ಹೋಗಲು ಸೂಕ್ತವಾದ ವ್ಯವಸ್ಥೆಯಿಲ್ಲ. 24 ಗಂಟೆಯಲ್ಲಿ ಅಡುಗೆ ಮನೆ ಸ್ವಚ್ಛಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ದ ಅಲಿಗಂಜ್ ಠಾಣಾ ಕ್ಷೇತ್ರದ ನಾವೆಲ್ಟಿ ಸಿನಿಮಾ ಹಾಲ್ ಪಕ್ಕದ ಡಾಬಾಕ್ಕೆ ತೆರಳಿದ್ದ ಗ್ರಾಹಕ ಪನ್ನೀರ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾಷ್ಟ್ರೀಯ ಮಟ್ಟದ ಡಾ.ರಾಜ್ ಕುಮಾರ್ ಬಾಕ್ಸಿಂಗ್ ಕಪ್ ಚಾಂಪಿಯನ್ ಶಿಪ್’ಗೆ ಬೆನ್ನೆಲುಬಾಗಿ ನಿಂತ ಮಲ್ಲೇಶ್ವರಂ ಶಾಸಕರಾದ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್’ರವರು..

    ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್ ಸಹಯೋಗದಲ್ಲಿ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ರವರು ನಡೆಸುತ್ತಿರುವ ರಾಷ್ಟ್ರೀಯ ಮಟ್ಟದ 60ನೇ ಸೀನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಡಾ.ರಾಜ್ ಕುಮಾರ್ ಕಪ್ ಪಂದ್ಯಾವಳಿಗೆ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರು

  • ಆರೋಗ್ಯ

    ಅವಧಿ ಮುಗಿದ ಔಷಧಿ ಬಳಸುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ,,ಜನರ ಜೀವದಜೊತೆ ಚೆಲ್ಲಾಟ..!

    ಅವಧಿ ಮುಗಿದು ತಿಂಗಳು ಕಳೆದ ಗ್ಲೂಕೋಸ್ ಬಾಟೆಲ್ ಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡಿ ರೋಗಿಗಳ ಜೀವದೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚೆಲ್ಲಾಟವಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆಮೂಡಲಪಾಳ್ಯ ಗ್ರಾಮದ ವೆಂಕಟಮ್ಮ ಎಂಬ ವಯೋವೃದ್ದೆ, ವಿಪರೀತ ಸುಸ್ತು ಕಂಡ ಹಿನ್ನೆಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆಯಲ್ಲಿಅವಧಿ ಮೀರಿದ ಗ್ಲೂಕೋಸ್ ಬಾಟೆಲ್ ಗಳನ್ನು ಇಲ್ಲಿನ ನಸ್೯ಗಳು ನೀಡಿದ್ದಾರೆ. ಇನ್ನೂ ಈ ಸಮಸ್ಯೆಯನ್ನು ಪ್ರಶ್ನಿಸಿದರೇ ಅವಧಿ ಮುಗಿದು ಮೂರು ತಿಂಗಳುವರೆಗೂ…

  • ಕ್ರೀಡೆ

    ನಿಮ್ಮ ಬಾಲ್ಯದ ಈ ಆಟಗಳು ನೆನಪಿದೆಯಾ ???

    ಗೋಲಿ ಆಟ : ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.

  • ಸ್ಪೂರ್ತಿ

    ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿರುವ ಡಾ.ರಮಣರಾವ್..!ತಿಳಿಯಲು ಈ ಲೇಖನ ಓದಿ..

    ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  • ಸುದ್ದಿ

    ಇನ್ನು ಎರಡೇ ದಿನಗಳ ಬಾಕಿ; ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಸಿದ್ದರಾಮಯ್ಯ,.!

    ಉಪಚುನಾವಣೆಗೆ ನಾವು ತಯಾರಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪಕ್ಷಾಂತರಿಗಳಿಗೆ ಜನ ಯಾವಾಗಲು ಕ್ಷಮಿಸುವುದಿಲ್ಲ. ಈ ಚುನಾವಣೆ ಮೂಲಕ ತಕ್ಕ ಪಾಠಕಲಿಸುತ್ತಾರೆ. ಉಪಚುನಾವಣೆಯನ್ನು ವಿಶ್ವಾಸದಿಂದ ನಡೆಸುತ್ತೇವೆ. ೧೫ ಕ್ಷೇತ್ರಗಲ್ಲಿ ಅಭ್ಯರ್ಥಿಗಳ ಗೆಲ್ಲಿಸುತ್ತೇವೆ. ಈ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು. ಕುಮಾರಸ್ವಾಮಿ ಪಾಪ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಆದರೆ ಮಾತನಾಡುವ ಮೊದಲು ಪ್ರಜ್ಞೆ ಇಟ್ಟುಗೊಂಡು ಮಾತನಾಡಲಿ. ಜಿಟಿ…

  • ಆಧ್ಯಾತ್ಮ

    ಶಿವನ ಆಭರಣಗಳಲ್ಲಿ ಅಡಗಿರುವ ಸತ್ಯವೇನು ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.