ಮುಂಬಯಿಯ ಜೆ.ಜೆ. ಹಾಸ್ಪಿಟಲ್ಗೆ ಕಳೆದ ತಿಂಗಳು 29 ವರ್ಷದ ಯುವಕನೊಬ್ಬ ಬಂದಿದ್ದ. ಅವನ ಸಮಸ್ಯೆ ಬಂಜೆತನ. ಪರೀಕ್ಷೆ ವೇಳೆ ಆತನ ವೃಷಣ ಹೊಟ್ಟೆಯೊಳಗಿರುವುದು ಕಂಡುಬಂತು! ಯಾಕೆ ಹೀಗಿದೆ ಎಂದು ಎಂಆರ್ಐ ನಡೆಸಿದಾಗ ಕಂಡದ್ದೇ ಬೇರೆ!
ಯುವಕನ ದೇಹದಲ್ಲಿ ಸ್ತ್ರೀಯರಲ್ಲಿ ಇರುವ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳೆಲ್ಲವೂ ಇದ್ದವು! ಅಂದರೆ, ಗರ್ಭಕೋಶ, ಫ್ಯಾಲೋಪಿಯನ್ ನಳಿಗೆಳು, ಗರ್ಭಾಶಯ ಮಾತ್ರವಲ್ಲ ಅರೆಬರೆಯಾದ ಮರ್ಮಾಂಗವೂ ಇತ್ತು! ಹಾಗಂತ ಇವ್ಯಾವುವೂ ಕೆಲಸ ಮಾಡುತ್ತಿರಲಿಲ್ಲ. ಮೂತ್ರ ಸಂಬಂಧಿ ಸಮಸ್ಯೆಗಳ ವಿಭಾಗದ ಸರ್ಜನ್ ಡಾ. ವೆಂಕಟ್ ಗೀತೆ ಅವರಲ್ಲಿಗೆ ಬಂದಿರುವ ಪ್ರಕರಣ ಇದಾಗಿದ್ದು,
ಶಸ್ತ್ರಕ್ರಿಯೆ ಮೂಲಕ ಈ ಅನಗತ್ಯ ಭಾಗಗಳನ್ನೆಲ್ಲ ಕಿತ್ತು ಹಾಕಲಾಗಿದೆ. ಇಷ್ಟೆಲ್ಲ ಸರ್ಜರಿ ಬಳಿಕವೂ ಯುವಕನಿಗೆ ಮಕ್ಕಳಾಗುವುದು ಸಾಧ್ಯವಿಲ್ಲ ಎನುತ್ತಾರೆ ವೈದ್ಯರು. ಯಾಕೆಂದರೆ, ಅವನಿಗೆ ‘ಅಝೂಸ್ಪೆರ್ಮಿಯ’ ಸಮಸ್ಯೆ ಇದೆ. ಅಝೂಸ್ಪೆರ್ಮಿಯಾ ಎಂದರೆ ವೀರ್ಯದಲ್ಲಿ ವೀರ್ಯಾಣುವೇ ಇಲ್ಲದಿರುವುದು.
ಅತ್ಯಂತ ಅಪರೂಪದ ಈ ದೈಹಿಕ ವೈಪರೀತ್ಯಕ್ಕೆ ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಎಂದು ಡಾ. ವೆಂಕಟ್ ಗೀತೆ ಹೇಳಿದ್ದಾರೆ. ಜಗತ್ತಿನಲ್ಲಿ ಕೇವಲ 200 ಪ್ರಕರಣಗಳಷ್ಟೇ ಇದುವರೆಗೆ ದಾಖಲಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ. ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ….
ಹೆಣ್ಣು ಮನಸ್ಸು ಮಾಡಿದರೆ ಎಂತಹ ಕಷ್ವವನ್ನೂ ಮೀರಿ ನಿಂತು ಛಲದಂಕಮಲ್ಲಿಯಾಗುತ್ತಾಳೆ. ಅಂಗವೈಕಲ್ಯವನ್ನೂ ಮೀರಿ ನಿಲ್ಲುವ ಸಾಮರ್ಥ ಅವಳಿಗಿದೆ. ಸಾಧನೆ ಮಾಡುವ ಮನಸ್ಸಿದ್ದರೆ ಛಲವಿದ್ದರೆ ಯಾವುದೂ ಕಷ್ಟಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ ನಿಕಿತಾ ಶುಕ್ಲಾ ಎನ್ನುವ ಈ ಹುಡುಗಿ.
ಸಾಮಾನ್ಯವಾಗಿ ನಾವು ಎಲ್ಲಾರ ಮನೆಯಲ್ಲಿ ನಿಂಬೆ ಹಣ್ಣು ರಸ ತೆಗೆದು ಕೊಂಡು ಬಿಸಾಡುವುದು ಸಾಮಾನ್ಯವಾಗಿದೆ. ಆದ್ರೆ ನೀವು ಈ ಸ್ಟೋರಿ ನೋಡಿದ್ರೆ ಬಿಸಾಕಲ್ಲ ಬಿಡಿ. ಯಾಕೆ ಅಂದ್ರೆ ಈ ರಸ ಹಿಂಡಿದ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳು ಉಂಟುಗುವುತದೆ ಯಾವುಅಂತೀರಾ ಇಲ್ಲಿವೆ ನೋಡಿ.
ಪಾನ್ ಕಾರ್ಡ್ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿ ಇದ್ದೆ ಇರುತ್ತದೆ. ಪಾನ್ ಕಾರ್ಡ್ ಇಲ್ಲದೆ ಯಾವುದೇ ವ್ಯಾಪಾರ ಮತ್ತು ವ್ಯವಹಾರವನ್ನ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ಹಣದ ವಹಿವಾಟನ್ನ ಸಹ ಮಾಡಬೇಕೆಂದರೆ ನಿಮಗೆ ಪಾನ್ ತುಂಬಾ ಅವಶ್ಯಕ. ಇನ್ನು ಕಳೆದ ಎರಡು ವರ್ಷಗಳಿಂದ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನ ಜಾರಿಗೆ ತರಲಾಗಿದ್ದು ಆ ನಿಯಮಗಳನ್ನ ಪಾಲಿಸುವುದು ಕಡ್ಡಾಯ ಕೂಡ ಆಗಿತ್ತು. ಈ ಹಿಂದೆ ಬ್ಯಾಂಕುಗಳಲ್ಲಿ ವ್ಯವಹಾರಗಳನ್ನ ಮಾಡಬೇಕೆಂದರೆ ತುಂಬಾ ಸುಲಭವಾಗಿ ಮಾಡಬಹುದಾಗಿತ್ತು…
ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ. ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ…