ನಿತ್ಯಾನಂದನ ಆಶ್ರಮದಲ್ಲಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಯುವತಿಯೇ ಫೇಸ್ಬುಕ್ ನಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ಎಲ್ಲ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾಳೆ.
ಅಪಹರಣಗೊಂಡಿದ್ದಾಳೆ ಎಂಬ ಆರೋಪ ಕೇಳಿಬಂದ ಯುವತಿ ಫೇಸ್ಪುಕ್ ನಲ್ಲಿ ಪ್ರತ್ಯಕ್ಷವಾಗಿ ತಂದೆಯ ವಿರುದ್ಧವೇ ಕಿಡಿಕಾರಿದ್ದಾಳೆ. ಲೈವ್ ವಿಡಿಯೋ ಮೂಲಕ ತಮ್ಮನ್ನು ಯಾರೂ ಅಪಹರಿಸಿಲ್ಲ. ಆದರೆ ಸುಖಾಸುಮ್ಮನೆ ನಮ್ಮ ಗುರುಗಳಾದ ನಿತ್ಯಾನಂದ ಸ್ವಾಮೀಜಿ ಮೇಲೆ ಆರೋಪಿಸಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಾಗಿದೆ. ಆದರೆ ಸ್ವಾಮೀಜಿ ನಮಗೆ ತಂದೆ ಸಮಾನರು, ಈ ರೀತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ವಿಡಿಯೋದಲ್ಲಿ ತನ್ನ ಹೆಸರನ್ನು ಮಾ ನಿತ್ಯ ತತ್ವಪ್ರಿಯ ಆನಂದ ಎಂದು ಹೇಳಿಕೊಂಡಿದ್ದಾಳೆ.
ನನ್ನನ್ನು ಯಾರೂ ಅಪಹರಿಸಿಲ್ಲ. ನನ್ನ ವೈಯಕ್ತಿಕ ಕಾರಣ, ಕುಟುಂಬದಲ್ಲಿ ವೈಮನಸ್ಸು ಇರುವುದರಿಂದ ಹೆತ್ತವರ ಜೊತೆ ಇರಲಾರದೆ ಆಶ್ರಮದಲ್ಲಿದ್ದೇನೆ. ನಾನು ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ಇದು ನನ್ನ ಬದುಕು, ನಾನು ಇಚ್ಛೆ ಪಟ್ಟು ಈ ಬದುಕನ್ನು ಬದುಕುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಸ್ವಾಮೀಜಿಯ ಮೇಲೆ ವೈಯಕ್ತಿಕ ಕಾರಣಗಳಿಂದ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರು ಆರೋಪಿಸಿರುವುದು ಸುಳ್ಳು, ದೂರಿನಲ್ಲಿ ಉಲ್ಲೇಖಿಸಿರುವುದು ಸಹ ಸುಳ್ಳು. ನಮ್ಮನ್ನು ಸ್ವಾಮೀಜಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಹಾಗೂ ನನ್ನ ಸಹೋದರಿ ಜೊತೆಗೆ ಇದ್ದೇವೆ. ಹೆತ್ತವರು ಖಾವಿ ಬಿಟ್ಟು ಬನ್ನಿ ಅಂತಿದ್ದಾರೆ. ಆದರೆ ನಾವು ಇದಕ್ಕೆ ತಯಾರಿಲ್ಲ ಎಂದು ಹೇಳಿದ್ದಾಳೆ.
ಪೊಲೀಸರು, ಮಾಧ್ಯಮದವರು ಎಲ್ಲರೂ ನಮಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸುಖಾಸುಮ್ಮನೆ ಆಶ್ರಮದಲ್ಲಿರುವವರನ್ನು ಬಂಧಿಸುತ್ತಿದ್ದಾರೆ. ಇದು ಕುಟುಂಬದ ಸಮಸ್ಯೆ, ಇದಕ್ಕೂ ಆಶ್ರಮಕ್ಕೂ ಸಂಬಂಧವಿಲ್ಲ. ನನಗೆ ಖಾವಿ ಬಿಟ್ಟು ಬದುಕು ಇಲ್ಲ. ನಿತ್ಯಾನಂದ ಸ್ವಾಮೀಜಿ ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನೈಜ ಪರಿಸ್ಥಿತಿ ಬಗ್ಗೆ ಎಷ್ಟೇ ಹೇಳಿದದರೂ ಪೊಲೀಸರು ಕೇಳುತ್ತಿಲ್ಲ ಎಂದು ಹೇಳಿದ್ದಾಳೆ.
ಏನಿದು ಪ್ರಕರಣ? ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಜನಾರ್ದನ ಶರ್ಮಾ ತನ್ನ ಮಕ್ಕಳನ್ನು ನಿತ್ಯಾನಂದನ ಆಶ್ರಮಕ್ಕೆ ಬಿಟ್ಟಿದ್ದರು. ನಿತ್ಯಾನಂದನ ಮಾತಿಗೆ ಮರುಳಾಗಿ ತನ್ನ ನಾಲ್ವರು ಮಕ್ಕಳನ್ನು ಆಶ್ರಮದಲ್ಲಿ ಇಟ್ಟಿದ್ದರು. ಆಶ್ರಮದಲ್ಲಿನ ಅಕ್ರಮಗಳ ಬಗ್ಗೆ ತಿಳಿದು ಶರ್ಮಾ ಆಶ್ರಮದ ಕೆಲಸ ಬಿಟ್ಟು ಹೊರಗೆ ಬಂದಿದ್ದರು. ಬಟ್ಟು ಬರುವ ವೇಳೆ ನಾಲ್ವರು ಮಕ್ಕಳ ಪೈಕಿ 18 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಶರ್ಮಾ ಆರೋಪಿಸಿದ್ದರು. ಇವಳನ್ನು ಅಪಹರಿಸಿ, ನಮಗೆ ತಿಳಿಯದಂತೆ ಬಿಡದಿಯ ನಿತ್ಯಾನಂದ ಆಶ್ರಮದಿಂದ ಅಹಮದಾಬಾದ್ ಆಶ್ರಮಕ್ಕೆ ನನ್ನ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಜನಾರ್ದನ ಶರ್ಮಾ ಆರೋಪಿಸಿದ್ದರು. ಅಲ್ಲದೆ ಮಕ್ಕಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಿತ್ಯಾನಂದನ ವಿರುದ್ಧ ಗುಜರಾತ್ ನಲ್ಲಿ ದೂರು ದಾಖಲಿಸಿದ್ದಾರೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹಾವೇರಿಯ ಚೀಲೂರು ಬಡ್ನಿ ತಾಂಡಾದ ಹನುಮಂತ ಅವರು ರನ್ನರ್ ಆಗಿದ್ದಾರೆ.ಕೀರ್ತನ್ ಹೊಳ್ಳ ಆರಂಭದಿಂದಲೂ ಅದ್ಭುತವಾಗಿ ಹಾಡುವ ಮೂಲಕ ಜಡ್ಜಸ್ ಗಳು ಹಾಗೂ ಮಹಾಗುರುಗಳ ಮೆಚ್ಚುಗೆ ಗಳಿಸಿದ್ದರು. ಅದೇ ರೀತಿ ಹನುಮಂತ ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದರು. ಶನಿವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಿಹಾಲ್ ತಾವ್ರೊ, ಹನುಮಂತ, ಕೀರ್ತನ ಹೊಳ್ಳ, ವಿಜೇತ್, ಹೃತ್ವಿಕ್ ಹಾಗೂ ಸಾಧ್ವಿನಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಅವರಲ್ಲಿ…
ಜಾಮ್ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.
ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772 ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ? ಬನ್ನಿ ತಿಳಿಯೋಣ. ಗರುಡ ರಾಜನು ತನ್ನ ಪರಿವಾರವನ್ನು…
ಎಐಸಿಸಿ ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಸಂದರ್ಭದಲ್ಲಿ ಕಾಯಿಲೆ ನೆಪ ಹೇಳಿ, ಅಂತ್ಯಸಂಸ್ಕಾರದಿಂದ ದೂರ ಉಳಿದಿದ್ದರು. ಅಂತ್ಯ ಸಂಸ್ಕಾರಕ್ಕೆ ಬಾರದ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಸ್ಪಷ್ಟನೆ ನೀಡಿದ್ದ ರಮ್ಯಾ ತಾವು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ, ಇದರ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳದಿದ್ದರೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದೆ. ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಂಬರೀಶ್…
ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:-ಯಾವುದೂ ಬೇಡ ಎಂದು ಮಂಕಾಗಿ ಕುಳಿತುಕೊಳ್ಳುವ ಸ್ಥಿತಿ ನಿಮ್ಮದು. ಆದರೆ ಬಹು ಪರಿವರ್ತನೆಗೆ ಕಾಲ ಉತ್ತಮವಾಗಿದೆ. ನಿರಾಸೆ ಬಿಟ್ಟು ಮುಂದಕ್ಕೆ ಅಡಿ ಇಡಿ. ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಯಾಗುವುದು….