ಸುದ್ದಿ

ಚಾಕುವಿನಿಂದ ಇರಿದು ಕ್ರಿಕೆಟಿಗನ ಬರ್ಬರ ಹತ್ಯೆ…ಕಾರಣ?

140

ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಕ್ರಿಕೆಟಿಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ.

ಗುರುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕ್ರಿಕೆಟಿಗನನ್ನು ರಾಕೇಶ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ರಾಕೇಶ್‍ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ರಾಕೇಶ್‍ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ರಾಕೇಶ್ ಮೃತಪಟ್ಟಿದ್ದಾರೆ.ಮೃತ ರಾಕೇಶ್ ಕ್ರಿಕೆಟ್ ಕೋಚ್‍ನಲ್ಲಿ ಕೆಲಸ ಮಾಡುತ್ತಿದ್ದು, ಯುವತಿಯನ್ನು ಪ್ರೀತಿಸುತ್ತಿದ್ದನು. ಹೀಗಾಗಿ ಪ್ರೀತಿ ವಿಚಾರವಾಗಿಯೇ ಆತನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಸ್ನೇಹಿತ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೊಸ ವರ್ಷದ ದಿನದಂದು ಮುತ್ತತ್ತಿಗೆ ಪ್ರವಾಸ ಹೋಗುವವರಿಗೆ ಕಹಿ ಸುದ್ದಿ..!

    ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ. ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಟೊಮೆಟೊ ಕೆಚಪ್‌ನಿಂದ ಮನೆಯಲ್ಲಿ ದಿನಬಳಕೆಗೆ ಉಪಯೋಗಿಸುವ ವಸ್ತುಗಳನ್ನು ಫಳ ಫಳ ಹೊಳೆಯಿಸುವುದು ಹೇಗೆ ಗೊತ್ತಾ..?ತಿಳಿಯಲು ಇದನ್ನು ಓದಿ …

    ನೀವು ಸೇವಿಸುವ ಆಹಾರವನ್ನೇ ಅಡುಗೆ ಮನೆಯಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ಬಳಸಬಹುದು ಎಂಬುದನ್ನು ನೀವು ಅರಿತಿದ್ದೀರಾ? ಅಡುಗೆ ಮನೆಯಲ್ಲಿ ಜಿಡ್ಡಿನ ಅಂಶಗಳನ್ನು ತೊಡೆದು ಹಾಕಲು, ನಲ್ಲಿಯನ್ನು ಸ್ವಚ್ಛಗೊಳಿಸಲು ನಾವು ರಾಸಾಯನಿಕ ಸ್ವಚ್ಛಕಗಳನ್ನು ಬಳಸುತ್ತೇವೆ ಆದರೆ ಅವುಗಳು ಯಾವುದೂ ನೈಸರ್ಗಿಕದಂತಿರುವ ಶುಭ್ರತೆಯನ್ನು ಒದಗಿಸುವುದಿಲ್ಲ, ಬದಲಿಗೆ ಸ್ವಲ್ಪ ದಿನ ಬೆಳ್ಳಗಾಗಿದ್ದು ಪುನಃ ಹಳೆಯ ರೂಪಕ್ಕೆ ತಿರುಗುತ್ತವೆ.

  • ಸಿನಿಮಾ

    ಒಳ್ಳೆ ಹುಡುಗ ಪ್ರಥಮ್’ನ ಹುಚ್ಚಾಟ!ಭುವನ್ ತೊಡೆ ಕಚ್ಚಿದ ಪ್ರಥಮ್! ಅಲ್ಲಿ ನಡೆದಿದ್ದಾದರು ಏನು ಗೊತ್ತಾ?

    ಒಳ್ಳೆ ಹುಡುಗ ಪ್ರಥಮ್ ಹಾಗೂ ನಟ ಭುವನ್ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ ಜಗಳವಾಗಿದ್ದು, ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆಂದು ಭುವನ್ ಆರೋಪ ಮಾಡಿದ್ದಾರೆ.

  • ಗ್ಯಾಜೆಟ್

    ಜಿಯೋದಿಂದ ಹೊಸ ಆಫರ್’ಗಳ ಸುರಿಮಳೆ…!ಇಲ್ಲಿದೆ ಜಿಯೋ ಆಫರ್’ಗಳ ಫುಲ್ ಡಿಟೈಲ್ಸ್…

    ಜಿಯೋ ಧನ್‌ಧನಾ ಧನ್ ಆಫರ್ ಮುಗಿದ ನಂತರ ಜಿಯೋ ಪ್ಲಾನ್ ಏನು ಎಂಬುದಕ್ಕೆ ಉತ್ತರ ದೊರೆತಿದೆ. ರಿಲಯನ್ಸ್ ಜಿಯೊ ‘ಧನ್ ಧನ ಧನ್’ ಯೋಜನೆಗಳು ಪ್ರಿಪೇಯ್ಡ್ ಮತ್ತು ಪ್ರಿಪೇಯ್ಡ್ ಬಳಕೆದಾರರಿಗೆ ಹೊಸ ಪ್ಯಾಕ್ಗಳನ್ನು 349, ರೂ 399, ರೂ 509 ವರೆಗೆ ಹೆಚ್ಚಿಸಲಾಗಿದೆ ಮತ್ತು ಮುಂದೆ ಉಚಿತವಾದ 4 ಜಿ ಡಾಟಾ ಪ್ಯಾಕ್ ನೀಡುತ್ತದೆ. ರೂ 399 ಪ್ಯಾಕ್ ಈಗ ಬಳಕೆದಾರರಿಗೆ 84 ಜಿಬಿ ಡೇಟಾವನ್ನು ಒದಗಿಸುತ್ತಿದೆ.

  • India, Sports, ಕ್ರೀಡೆ

    2 ನೇ ಟೆಸ್ಟ್ ಸೋತ ಭಾರತ ತಂಡ

    ಡೀನ್ ಎಲ್ಗರ್ ಅವರು ಅಜೇಯ 96 ರನ್ ಗಳಿಸಿದರು, ದಕ್ಷಿಣ ಆಫ್ರಿಕಾವು 240 ರನ್ ಬೆನ್ನಟ್ಟಿದ್ದು ಏಳು ವಿಕೆಟ್‌ಗಳೊಂದಿಗೆ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತವನ್ನು ತನ್ನ ಮೊದಲ ಸೋಲಿಗೆ ಒಪ್ಪಿಸಿತು. ಈ ವಿಜಯವು ಕೇಪ್ ಟೌನ್‌ನಲ್ಲಿ ಅಂತಿಮ ಟೆಸ್ಟ್‌ಗೆ ಹೋಗುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ ಜೀವಂತವಾಗಿರಿಸಿತ್ತು. ಬುಧವಾರ, ಎಲ್ಗರ್ ತಮ್ಮ ದೇಹವನ್ನು ಲೈನ್‌ನಲ್ಲಿ ಹಾಕಿದರು, ಅವರು ತಮ್ಮ ವಿಕೆಟ್ ಅನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ಕೈಗವಸುಗಳು ಮತ್ತು ಭುಜದ ಮೇಲೆ ಹೊಡೆತಗಳನ್ನು ಪಡೆದರು. ಅವರು ಇಂದು ಹೆಚ್ಚು…

    Loading

  • ಸುದ್ದಿ

    ಹಾಸನ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಫಸ್ಟ್ ಪ್ಲೇಸ್ ಬರಲು ಕಾರಣ ನನ್ನ ಹೆಂಡತಿಯೇ ಹೊರತು ರೋಹಿಣಿ ಸಿಂಧುರಿ ಅಲ್ಲ ಎಂದ ರೇವಣ್ಣ..!

    ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ. ಹಿಂದಿನ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಿದೆ ಎಂದು ನಿನ್ನೆ ಮಾಧ್ಯಮಗಳ ಪ್ರಕಟವಾದ ಬೆನ್ನಲ್ಲೇ ಇದೀಗ ರೇವಣ್ಣ ಅವರು ರೋಹಿಣಿ ಸಿಂಧೂರಿ ಅವರ ಕೊಡುಗೆ ಏನು ಇಲ್ಲ. ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ…