ಕಾನೂನು

ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ

59

ಕೋಲಾರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ, ಹೊಳೂರು ಹೋಬಳಿ, ನಾಯಕರಹಳ್ಳಿ ಗ್ರಾಮದ ಮುಬಾರಕ್ ಪಾಷ ಬಿನ್ ಅಜೀಜ್‌ಸಾಬಿ ಎಂಬಾತನು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಬೈರರವರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಸ್ಪೇಷಲ್ ಸಿ. (ಪೋಕ್ಸೋ) ಪ್ರಕರಣದ ಸಂಖ್ಯೆ: 70/2022ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಶ್ರೀ ಬಿ.ಪಿ.ದೇವಮಾನೆ ರವರು ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ಮುಬಾರಕ್ ಪಾಷಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಸಜೆ ಜೊತೆಗೆ ರೂ.20,000/-ಗಳ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳ ಸಜೆ ಎದುರಿಸಲು ಸೂಚಿಸಲಾಗಿದೆ. ಹಾಗೂ ನೊಂದ ಬಾಲಕಿಗೆ ರೂ.4,00,000/- ಗಳನ್ನು ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಡಿ.ಲಲಿತಕುಮಾರಿ ರವರು ವಾದ ಮಂಡಿಸಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಮಣ್ಣಿನ ಮಗ ಮಾಜಿ ಪ್ರಧಾನಿ “ಹೆಚ್.ಡಿ.ದೇವೇಗೌಡ”ರಿಗೆ “ರಾಷ್ಟ್ರಪತಿ” ಸ್ಥಾನಕ್ಕೆ ಸ್ಪರ್ಧಿಸುವಂತೆ ಆಹ್ವಾನ

    ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದಾರೆ.

  • ಆರೋಗ್ಯ, ಜೀವನಶೈಲಿ

    ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ…

    ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು ಕರೆಯಲಾಗುತ್ತದೆ. ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.

  • ಸುದ್ದಿ

    ಕಾಂಗ್ರೆಸ್‍ನ ಡಿಸಿಎಂ ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರಿಂದ ರಾಜೀನಾಮೆ….!

     ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಮಾಜಿ ಸಿಎಂ ಆಪ್ತರೆಲ್ಲ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪರಮೇಶ್ವರ್ ಅವರು ಕರೆದ ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲ ಸಚಿವರು ತಮ್ಮ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡಿದ್ದಾರೆ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣೆಬೈರೇಗೌಡರು ಸೇರಿದಂತೆ ಎಲ್ಲ 22 ಸಚಿವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಇತ್ತ ರಾಜೀನಾಮೆ ನೀಡಿ ಹೊರ ಬಂದು ಮಾತನಾಡಿದ ಸಚಿವ ರಹೀಂಖಾನ್, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ…

  • ಸುದ್ದಿ

    ಸ್ಕೂಟಿ ಹತ್ತಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್. ಎದ್ನೋ ಬಿದ್ನೋ ಅಂತ ಓಡಿದ ಯುವಕ!

    ಸ್ಕೂಟಿ ಹರಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಮೊಹ್ಮದ್ ಆಯಾತುಲ್ಲಾ ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರ ಹಾವಿನ ಮೇಲೆ ಸ್ಕೂಟಿ ಹತ್ತಿಸಿದ್ದಾರೆ. ಈ ವೇಳೆ ಚಕ್ರಕ್ಕೆ ಸಿಲುಕಿದ ಪರಿಣಾಮ ಸವಾರ ಮೊಹ್ಮದ್ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾರೆ. ಆಗ ನಾಗರಹಾವು ಆತನ ಕಾಲಿಗೆ ಅಟ್ಯಾಕ್ ಮಾಡಿದೆ. ಇದರಿಂದ ಹೆದರಿದ ಮೊಹ್ಮದ್ ಎದ್ನೋ ಬಿದ್ನೋ…

  • ಸುದ್ದಿ

    ಪ್ರವಾಹ ಸಂಕಷ್ಟಕ್ಕೆ ಸಿಲುಕಿದ ಬಿಹಾರ: 31 ಮಂದಿ ಸಾವು, 40 ಲಕ್ಷ ಜನರ ಸ್ಥಳಾಂತರ….

    ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ. ಹೌದು ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್‌ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‌ಗಂಜ್‌ನಲ್ಲಿ ನಾಲ್ಕು…

  • ಸುದ್ದಿ

    ವಿಸ್ಮಯಕಾರಿ ಘಟನೆಗಳಿಗೆ ಸಾಕ್ಷಿಯಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಬೆಟ್ಟದಲ್ಲಿ ಈ ಬಾರಿ ಮತ್ತೊಂದು ಪವಾಡ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟ, ಸಮುದ್ರ ಮಟ್ಟದಿಂದ ಸರಿಸುಮಾರು 4620 ಅಡಿ ಎತ್ತರವಿದೆ. ಈ ಬೆಟ್ಟದ ಮಧ್ಯದ ಭಾಗದಲ್ಲಿ ಬೆಳ್ಳಿಯ ಹಾಗೂ ಹಾಲಿನ ಲೇಪನ ರೀತಿಯಲ್ಲಿ ಜೋಪು ನೀರು ಹರಿಯುತ್ತಿರುವುದು ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ. ಈ ಶಿವಗಂಗೆ ಬೆಟ್ಟ ಸಂಪೂರ್ಣ ಬೃಹತ್ ಆಕಾರದ ಕಲ್ಲು ಬಂಡೆಗಳಿಂದ ಕೂಡಿದ್ದು, ಈ ಬಂಡೆಗಳ ಮಧ್ಯೆ ಹರಿಯುತ್ತಿರುವ ಜೋಪು ನೀರನ್ನು ನೋಡಲು ಸುಂದರವಾಗಿದೆ. ಈ ಶಿವಗಂಗೆ ಬೆಟ್ಟ ಪುರಾತತ್ವ, ಮುಜರಾಯಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು,…