ರೆಸಿಪಿ

ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.

172

ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು.

ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.
ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ ಬೇಳೆ, ಮೆಂತ್ಯ ಕಾಳುಗಳನ್ನು ಚೆನ್ನಾಗಿ ತೊಳೆದು, ನೀರು ಸೇರಿಸಿ 6 ಘಂಟೆಗಳ ಕಾಲ ನೆನೆಸಿಟ್ಟು, ನಂತರ ನೀರು ಬಸಿದು ರುಬ್ಬಿಕೊಳ್ಳಬೇಕು.ಇದನ್ನು ಸುಮಾರು 8ಘಂಟೆಗಳ ಕಾಲ ಹುದುಗು ಬರಲು ಬಿಡಬೇಕು. ದೋಸೆ ಮಾಡುವ ಮೊದಲು ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸ ಬೇಕು.

ಮೆಂತ್ಯ ಸೊಪ್ಪಿನ ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು. ಸುಮಾರು 8ದೋಸೆಗೆ ಆಗುವಷ್ಟು ಮೆಂತ್ಯ ಸೊಪ್ಪು, ಒಂದು ಬಟ್ಟಲು ಈರುಳ್ಳಿ, ಒಂದು ಹಸಿಕಾಯಿ ತುರಿ, ಕಾಲು ಬಟ್ಟಲು ಧನಿಯಾ, ಒಂದು ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ,
ಬೆಳ್ಳುಳ್ಳಿ ಎಸಳು. ಎರಡು ಹುಣಸೇ ಹಣ್ಣು. ಅರ್ಧ ಟೀ ಚಮಚ ಹಸಿಮೆಣಸಿನ ಕಾಯಿ ಮೂರು ಉಪ್ಪು ರುಚಿಗೆ ತಕ್ಕಷ್ಟು ಇವುಗಳನ್ನು ಹಸಿಯಾಗಿಯೇ ಸ್ವಲ್ಪವೇ ಸ್ವಲ್ಪ ನೀರು ಸೆರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಮಗೆ ಎಷ್ಟು ಬೇಕೋ ಅಷ್ಟೇ ದೋಸೆ ಹಿಟ್ಟಿಗೆ ಮೆಂತ್ಯ ಸೊಪ್ಪಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು ಕಾದ ಕಾವಲಿಯಲ್ಲಿ ದೋಸೆ ಮಾಡಿದರೆ, ರುಚಿಕರ. ಆರೋಗ್ಯಕರ.ಆಕರ್ಷಕ ಬಣ್ಣದ ಮೆಂತ್ಯ ಸೊಪ್ಪಿನ ದೋಸೆ ಸವಿಯಲು ಸಿದ್ಧ. ನಿಮ್ಮ ಇಷ್ಟದ ಚಟ್ನಿ ಯೊಂದಿಗೆ ಸೇವಿಸ ಬಹುದು. ದೋಸೆ ಕಹಿ ಇರುವುದಿಲ್ಲ. ತೀರಾ ಸೂಕ್ಷ್ಮವಾಗಿ ಪರೀಕ್ಷಿಸಿದರೆ ಸ್ವಲ್ಪ ಕಹಿ ಅನ್ನಿಸ ಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇವಿಎಂ ಅಭ್ಯರ್ಥಿ ಸ್ಥಾನಗಳಲ್ಲಿ ಸಿಎಂ ಮಗನಿಗೆ ಮೊದಲ ಸ್ಥಾನ!ಆದರೆ ಸುಮಲತಾಗೆ ಯಾವ ಸ್ಥಾನ?ಈ ಸುದ್ದಿ ನೋಡಿ..

    ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಸ್ಥಾನ ನೀಡಲಾಗಿದೆ. ಅದರಲ್ಲಿ ಮೊದಲ ಹೆಸರೇ ಮುಖ್ಯಮಂತ್ರಿ ಪುತ್ರ ನಿಖಿಲ್‍ ಕುಮಾರಸ್ವಾಮಿಯವರದ್ದಾದ್ರೆ, ಕೊನೆಯಿಂದ ಎರಡನೇಯವರಾಗಿ ಸುಮಲತಾ ಹೆಸರಿದೆ…! ಇವಿಎಂನ ಕ್ರಮ ಸಂಖ್ಯೆ 1 ರಲ್ಲೇ ನಿಖಿಲ್‍ ಕುಮಾರಸ್ವಾಮಿಯವರ ಹೆಸರು ನೀಡಲಾಗಿದೆ. ಆದ್ರೆ ಸುಮಲತಾ ಅಂಬರೀಷ್‍ ಹೆಸರನ್ನು ಇವಿಎಂನಲ್ಲಿ ಕೊನೆಯಿಂದ ಎರಡನೇಯದಾಗಿ ಹಾಕಲಾಗಿದೆ. ಅಲ್ಲದೆ ಸುಮಲತಾ ಅಂಬರೀಷ್‍ ಹೆಸರಿನ ಮೊದಲು ಮತ್ತು ಕೊನೆಗೆ…

  • ಸಿನಿಮಾ, ಸ್ಪೂರ್ತಿ

    ಕಾರು ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ ಈ ವ್ಯಕ್ತಿ ,ಸೂಪರ್ ಸ್ಟಾರ್ ಆಗಿದ್ದು ಹೇಗೆ..?ತಿಳಿಯಲು ಈ ಲೇಖನ ಓದಿ..

    ರಾಘವ ಲಾರೆನ್ಸ್ ಈಗ ಟಾಲೀವುಡ್, ಕೋಲೀವುಡ್ ನಲ್ಲಿ ಉತ್ತಮ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರು ನಿರ್ದೇಶಕರಾಗುವ ಮೊದಲು ಕೊರಿಯಾಗ್ರಾಫರ್ ಆಗಿ ತನ್ನ ಜೀವನವನ್ನು ಆರಂಭಿಸಿದ್ದರು. ಪ್ರಭುದೇವಾ ಟ್ರೂಪ್ ನಲ್ಲಿ ಒಬ್ಬನಾಗಿದ್ದು..ಎಲ್ಲರನ್ನೂ ಆಕರ್ಷಿಸುವಂತೆ ನೃತ್ಯ ಅಭಿನಯಿಸಿ ಮೆಗಾಸ್ಟಾರ್ ಗಮನ ಸೆಳೆದಿದ್ದೇ ತಡ ಮೆಗಾಸ್ಟಾರ್ ರವರ ಹಿಟ್ಲರ್ ಚಿತ್ರದಲ್ಲಿ ಅವಕಾಶ ನೀಡಿದರು.

  • inspirational, ದೇವರು, ದೇವರು-ಧರ್ಮ

    ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

    ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  • ಸುದ್ದಿ

    ಕೇವಲ ಎರಡು ಸಾವಿರಕ್ಕಾಗಿ 50 ಮೊಟ್ಟೆ ತಿನ್ನಲು ಸ್ನೇಹಿತರೊಡನೆ ಪಂದ್ಯ ; 41 ಮೊಟ್ಟೆ ತಿಂದ ಬಳಿಕ ವ್ಯಕ್ತಿಗೆ ಏನಾಯ್ತು ಗೊತ್ತಾ ?ತಿಳಿದರೆ ಶಾಕ್….

    ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್‌ಪುರದ ಬಿಬಿಗಂಜ್ ಮಾರ್ಕೆಟ್‌ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ. ಸುಭಾಷ್  ಸ್ನೆಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಸುಭಾಷ್ ಕೂಡ ಒಪ್ಪಿಕೊಳ್ಳುತ್ತಾನೆ. ಬಳಿಕ…

  • ಸುದ್ದಿ

    ಬಿಗಿದಪ್ಪಿದ ಸ್ಥಿತಿಯಲ್ಲಿ ತಾಯಿ-ಮಗು ಶವ ಪತ್ತೆ..! ಕರುಳು ಹಿಂಡಿದ ದೃಶ್ಯ..!

    ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…

  • ರಾಜಕೀಯ

    ಸುಮಲತಾ ಅಂಬರೀಷ್ ರವರಿಂದ ಸಿಎಂ ಕುಮಾರಸ್ವಾಮಿಗೆ ತಿರುಗೇಟು?ಏಕೆ ಗೊತ್ತಾ?

    ಸದ್ಯ ರಾಜ್ಯ ರಾಜಕೀಯದ ಹಾಟ್ ಸ್ಪಾಟ್ ಆಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳತೊಡಗಿವೆ. ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ತಿಳಿಸಿದ್ದು, ಬಿರುಸಿನ ಓಡಾಟ ನಡೆಸಿದ್ದಾರೆ. ಪುತ್ರ ನಿಖಿಲ್ ಕುಮಾರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಾಗಿದ್ದು ಪೂರ್ವ ತಯಾರಿ ನಡೆಸಿದ್ದಾರೆ. ಈ ಚುನಾವಣೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯದಲ್ಲಿ ರಾಜಕೀಯ…