ಸುದ್ದಿ

ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ,…ಏನೆಂದು ತಿಳಿಯಿರಿ?

62

ರಾಜ್ಯ ರಾಜಧಾನಿಯ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಕರೆ ಬಂದಿದ್ದು, ನಿಲ್ದಾಣದಲ್ಲಿದ್ದ ರೈಲಿನಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ.ಇಂದು ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಯನ್ನು ಮಾಡಿದ್ದರು. ಇದೇ ವೇಳೆ ನಿಲ್ದಾಣದಲ್ಲಿದ್ದ ಪಾಟ್ನಾ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದು, ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬಂದು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ.

ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ ಪೊಲೀಸರು ಶ್ವಾನ ದಳದೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಅವರಿಗೆ ಗ್ರೇಡ್ ಮಾದರಿಯ ವಸ್ತುವೊಂದು ರೈಲ್ವೇ ನಿಲ್ದಾಣದ ಸಮೀಪ ದೊರಕಿದೆ. ಕೂಡಲೇ ರೈಲ್ವೇ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರೀಯ ದಳ ತಂಡ ಅದನ್ನು ದೂರ ತೆಗೆದುಕೊಂಡು ಹೋಗಿ ಪರಿಶೀಲಿಸಿದ್ದಾರೆ. ಸದ್ಯ ಈ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರೈಲ್ವೇ ನಿಲ್ದಾಣದಲ್ಲಿ ಏನೂ ಆಗಿಲ್ಲ. ಸುಮ್ಮನೆ ಆತಂಕ ಪಡುವ ಅಗತ್ಯವಿಲ್ಲ. ರೈಲಿಗೆ ಬಳಕೆ ಮಾಡುವ ಹಳೆಯ ಗ್ರೆನೇಡ್ ರೀತಿಯ ವಸ್ತು ಪತ್ತೆಯಾಗಿದೆ ಅಷ್ಟೇ. ಹೀಗಾಗಿ ಪ್ರಯಾಣಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಇದರಲ್ಲಿ ಸ್ಫೋಟಕ ವಸ್ತುಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರೈಲ್ವೇ ನಿಲ್ದಾಣದ ಪ್ರಯಾಣಿಕರು ಆತಂಕಕ್ಕೆ ಒಳಗಾಗಬೇಡಿ. ಅಲ್ಲದೇ ಇಂತಹ ವಸ್ತುಗಳು ಇನ್ನೂ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಾಂಬ್ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಅಂತಹ ಯಾವುದೇ ವಸ್ತು ಸಿಕ್ಕಿಲ್ಲ ಎಂದು ರೈಲ್ವೇ ಎಸ್‍ಪಿ ರಾಜಪ್ಪ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.ಒಟ್ಟಿನಲ್ಲಿ ಫ್ಲಾಟ್ ಫಾರಂ 1ರಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆಯಾಗಿದ್ದು, ಈ ವಿಚಾರ ತಿಳಿದಯುತ್ತಿದ್ದಂತೆಯೇ ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಅಲ್ಲಿಂದ ಜಾಗ ಖಾಲಿ ಮಾಡಲು ಯತ್ನಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನರಸಿಂಹ ಸ್ವಾಮಿಯ ಕೃಪೆಯಿಂದ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(9 ಮಾರ್ಚ್, 2019) ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಪ್ರೇಮ ಜೀವನ…

  • Cinema

    1.60 ಕೋಟಿ ರೂ ವಂಚನೆ, ಸಿಸಿಬಿಗೆ ದೂರು ನೀಡಿದ ಸ್ಯಾಂಡಲ್​ವುಡ್ ನಿರ್ದೇಶಕ

    ಸ್ಯಾಂಡಲ್​ವುಡ್ ಕಲಾ ಸಾಮ್ರಾಟ್ ಎಸ್​.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್  ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್​. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು. ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್​.ನಾರಾಯಣ್…

  • ಸುದ್ದಿ

    ಮಂಗಳಮುಖಿಯರಿಗೆ ಮನೆ ಕಟ್ಟಿಕೊಳ್ಳಲು ಅಕ್ಷಯ್ ಕುಮಾರ್ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ.

    ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸಲು, ವಿಶೇಷ ಸ್ಥಾನಮಾನ ನೀಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಮಂಗಳಮುಖಿಯರಿಗೆ ಹೊಟೇಲ್, ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸ ನೀಡಲಾಗಿದ್ದು, ತಮಗೆ ದೊರೆತ ಕೆಲಸವನ್ನು ಮಂಗಳಮುಖಿಯರು ಕೂಡಾ ನಿಷ್ಠೆಯಿಂದ ಮಾಡುತ್ತಿದ್ದಾರೆ. ಇನ್ನು ಎಷ್ಟೋ ಕಡೆಗಳಲ್ಲಿ ಮಂಗಳಮುಖಿಯರು ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಸರ್ಕಾರದಿಂದ ನೆರವು ದೊರೆಯದೆ ಮಂಗಳಮುಖಿಯರು ಕೂಡಾ ಬೇಸರಗೊಂಡಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂತವರ ಸಹಾಯಕ್ಕೆ ಮುಂದಾಗಿದ್ದಾರೆ. ಮಂಗಳಮುಖಿಯರಿಗೆ ನೆಲೆ…

  • ಸ್ಪೂರ್ತಿ

    ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

  • ವಿಸ್ಮಯ ಜಗತ್ತು

    ಈ ಹೂ ಇಡೀ ಭೂಮಂಡಲದಲ್ಲಿಯೇ, ಅತೀ ಹೆಚ್ಚು ಬೆಲೆಬಾಳುತ್ತದೆ..!ನಿಮಗೆ ಗೊತ್ತಿರಲಿಕ್ಕಿಲ್ಲ?ತಿಳಿಯಲು ಈ ಲೇಖನಿ ಓದಿ…

    ನೋಡುಗರ ಮನವನ್ನು ಕೆರಳಿಸುವ ಬ್ರಹ್ಮ ಕಮಲ ಸೂರ್ಯನ ಬೆಳಕಿನಿಂದ ಮೊಗ್ಗಾಗಿ ರಾತ್ರಿ ಚಂದ್ರ ಬರುವವರೆಗೂ ಕಾದು 11 ಗಂಟೆಯ ನಂತರ ಅರಳಿ ಬೆಳಗಾಗುವ ಹೊತ್ತಿಗೆ ಕಮರುವುದೇ ಬ್ರಹ್ಮ ಕಮಲ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.

  • ಸುದ್ದಿ

    ಮೀನಿಗೆ ಬಲೇ ಬಿಸಿದಾಗ ಈತನಿಗೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತಾ.

    ಸ್ನೇಹಿತರೆ ಅದೃಷ್ಟ ಅನ್ನುವುದು ಯಾವಾಗ ಬರುತ್ತದೆ ಮತ್ತು ಯಾವಾಗ ಹೋಗುತ್ತದೆ ಅನ್ನುವುದನ್ನ ಊಹೆ ಮಾಡಲು ಸಾಧ್ಯವಿಲ್ಲ ಮತ್ತು ಕೆಲವೊಮ್ಮೆ ಅದೃಷ್ಟ ನಮ್ಮ ಸುತ್ತಮುತ್ತ ಇದ್ದರೂ ಕೂಡ ನಮಗೆ ತಿಳಿಯುವುದಿಲ್ಲ. ನಾವು ಹೇಳುವ ಈತನ ವಿಷಯದಲ್ಲಿ ನಡೆದಿದ್ದು ಮಾತ್ರ ಒಂದು ದೊಡ್ಡ ವಿಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಅದೃಷ್ಟ ಈತನ ಕೈ ಹಿಡಿದರೂ ಕೂಡ ಅದರ ಬಗ್ಗೆ ಅವನಿಗೆ ತಿಳಿಯದೆ ಪ್ರತಿದಿನ ಎಂದಿನಂತೆ ಕಷ್ಟಪಡುತ್ತಿದ್ದ. ಹಾಗಾದರೆ ಅಲ್ಲಿ ನಡೆದಿದ್ದು ಏನು ಮತ್ತು ಆ ಅದೃಷ್ಟ ಆತನಿಗೆ ಯಾವ ರೂಪದಲ್ಲಿ…